ಮಂಗಳೂರು -
ಖಜಾನೆಯ ನೌಕರರೊಬ್ಬರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ ಹೌದು ನಗರದ ಜಿಲ್ಲಾ ಖಜಾನೆಯ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ರೋಹನ್ ಎಂ(33) ಎಂಬವರು ಆ.1ರಿಂದ ನಾಪತ್ತೆ ಯಾಗಿದ್ದಾನೆ
ಈ ಒಂದು ಕುರಿತು ಪೊಲೀಸರಿಗೆ ದೂರು ನೀಡ ಲಾಗಿದೆ.ಬೆಂಗಳೂರಿನ ನಂಜಮ್ಮ ಲೇಔಟ್‌ನ ನಿವಾಸಿ ಮುನಿರಾಜ್ ರೆಡ್ಡಿ ಎಂಬವರ ಪುತ್ರ ರೋಹನ್ ಎಂಬವರು ಮಂಗಳೂರಿನ ಜಿಲ್ಲಾ ಖಜಾನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು.
ಪೌರ್ಣಮಿಯ ಪ್ರಯುಕ್ತ ಗುಜರಾತ್‌ಗೆ ಹೋಗುದಾಗಿ ತೆರಳಿದ್ದ ರೋಹನ್ ಅವರು ಬಳಿಕ ಕಾಣೆಯಾಗಿ ದ್ದಾರೆ. ಫೋನ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿ ದ್ದಾರೆ ಎಂದು ಅವರ ತಂದೆ ಮುನಿರಾಜ್ ರೆಡ್ಡಿ ಅವರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಗಳೂರು.....