ಬೆಂಗಳೂರು -
ನಾಡಿನೆಲ್ಲೇಡೆ ಸಧ್ಯ ಶ್ರಾವಣ ಮಾಸ ಆರಂಭವಾಗಿದ್ದು ಹೀಗಿರುವಾಗ ಶ್ರಾವಣ ಮಾಸದ ಅತ್ಯಂತ ಪವಿತ್ರ ಹಾಗೂ ಮಹತ್ವದ ಹಬ್ಬಗಳಲ್ಲಿ ಒಂದಾದ 'ನಾಗ ಪಂಚಮಿ' ಯನ್ನು ಆಗಸ್ಟ್ 17, ಸೋಮವಾರದಂದು ನಾಡಿನೆಲ್ಲೆಡೆ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಭಕ್ತರು ನಾಗರ ಕಲ್ಲುಗಳಿಗೆ ಹಾಗೂ ಹಾವಿನ ಹುತ್ತಗಳಿಗೆ ಹಾಲಿನ ಅಭಿಷೇಕ ಮಾಡಿ ನಾಗದೋಷ ನಿವಾರಣೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ.
ಈ ನಡುವೆ ಸೋಮವಾರ ಹಬ್ಬದ ಆಚರಣೆ ಇರು ವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ 'ಶಾಲೆ-ಕಾಲೇಜುಗಳಿಗೆ ರಜೆ ಇರುತ್ತದೆಯೇ?' ಎಂಬ ಪ್ರಶ್ನೆ ಮತ್ತು ಗೊಂದಲಗಳು ಮೂಡುವುದು ಸಹಜ. ಅದಕ್ಕೆ ಸಂಬಂಧಿಸಿದ ಸ್ಪಷ್ಟ ಮಾಹಿತಿ ಇಲ್ಲಿದೆ.
ಪೂಜಾ ಮುಹೂರ್ತ ಮತ್ತು ತಿಥಿ ಈ ಬಾರಿ ಪಂಚಮಿ ತಿಥಿಯು ಆಗಸ್ಟ್ 16ರ ಸಂಜೆಯಿಂದ ಆರಂಭವಾಗಿ ಆಗಸ್ಟ್ 17ರ ಸಂಜೆಯವರೆಗೆ ಇರಲಿದೆ. ಪಂಚಾಂಗ ಗಳ ಪ್ರಕಾರ, ಆಗಸ್ಟ್ 17ರ ಬೆಳಿಗ್ಗೆ 5:51 ರಿಂದ 8:30 ರವರೆಗಿನ ಸಮಯವನ್ನು ಪೂಜೆ ಸಲ್ಲಿಸಲು ಅತ್ಯಂತ ಶುಭ ಮುಹೂರ್ತವಾಗಿದೆ.
ಕರ್ನಾಟಕದಲ್ಲಿ ಶಾಲೆಗಳಿಗೆ ರಜೆ ಇದೆಯೇ?
ಕರ್ನಾಟಕ ಸರ್ಕಾರದ ಅಧಿಕೃತ ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ನಾಗಪಂಚಮಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿಲ್ಲ. ಹೀಗಾಗಿ, ರಾಜ್ಯದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಥವಾ ಸ್ಥಳೀಯ ಆಡಳಿತ ಮಂಡಳಿಗಳು ತಮ್ಮ ಹಂತದಲ್ಲಿ ಐಚ್ಛಿಕ ರಜೆ ನೀಡುವ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ರಾಜ್ಯಾದ್ಯಂತ ಯಾವುದೇ ಅಧಿಕೃತ ರಜೆ ಇರುವುದಿಲ್ಲ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....