LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಕೊಠಡಿಗೆ ಬೆಂಕಿ.....ಅಪಾರ ಪ್ರಮಾಣದ ಹಾನಿ‌.....

ಮಾಗಡಿ -

ಶಾಲಾ ಕೊಠಡಿಗೆ ಬೆಂಕಿ ಬಿದ್ದು ಪೀಠೋಪಕರಣಗಳು ಭಸ್ಮವಾದ ಘಟನೆ ಮಾಗಡಿಯ ಕುದೂರಿನ ಕೆಪಿಎಸ್ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ನಡೆದಿದೆ  ಕೊಠಡಿ ಯಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ ಕೆಪಿಎಸ್ ಹೊಸ ಶಾಲಾ ಕಟ್ಟಡ ನಿರ್ಮಾಣವಾದ ನಂತರ ಪ್ರಾಥಮಿಕ ಶಾಲಾ ಕೊಠಡಿ ಯನ್ನು ಹಾಗೆ ಬಿಡಲಾಗಿತ್ತು ಹೊಸ ಕಟ್ಟಡದಲ್ಲಿ ತರಗತಿ ಗಳು ಆರಂಭಗೊಂಡಿದ್ದವು ರಾತ್ರಿ ಒಂದು ಕೊಠಡಿ ಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಸಂಪೂರ್ಣ ಸುಟ್ಟು ಹೋಗಿದೆ. ಕೊಠಡಿಯಲ್ಲಿದ್ದ ಪೀಠೋಪಕರ ಣಗಳು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಭಸ್ಮವಾ ಗಿವೆ.

ಈ ಶಾಲೆ ಕುದೂರು ಪೊಲೀಸ್ ಠಾಣೆಯ ಪಕ್ಕದಲ್ಲೇ ಶಾಲೆ ಇದ್ದು, ಮಂಗಳವಾರ ರಾತ್ರಿ ಬೆಂಕಿ ಕಾಣಿಸಿ ಕೊಂಡಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಹೊರಗೆ ಬಂದಾಗ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಗಮನಿ ಸಿದ್ದಾರೆತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ತಕ್ಷಣ ಬೆಂಕಿ ನಂದಿಸಿದ್ದರಿಂದ ಇತರೆ ಕೊಠಡಿಗಳಿಗೆ ಬೆಂಕಿ ವ್ಯಾಪಿಸಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಹೊಸ ಕಟ್ಟಡ ನಿರ್ಮಾಣವಾದ ನಂತರ ವಿದ್ಯಾರ್ಥಿ ಗಳನ್ನು ಸ್ಥಳಾಂತರಿಸಲಾಗಿತ್ತು ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈ ವಿಚಾರ ಶಿಕ್ಷಣ ಇಲಾಖೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳ ಹಿಂದೆಯಷ್ಟೇ ಶಾಲಾ ಆವರಣದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ, ಗೇಟ್‌ಗಳನ್ನು ಬಂದ್ ಮಾಡಲಾಗಿತ್ತುತನಿಖೆಗೆ ಆಗ್ರಹ: ಬೆಂಕಿ ಕಾಣಿಸಿಕೊಂಡ ಕೊಠಡಿಯಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಾಗಾಗಿ ಬೆಂಕಿ ಆಕಸ್ಮಿಕವಾಗಿ ಕಾಣಿಸಿಕೊಂಡಿದೆಯೇ ಅಥವಾ ಯಾರಾದರೂ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸ ಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಾಗಡಿ‌‌‌‌.....‌

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಡಿನ ಜನತೆಗೆ Big Mishra ದಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು..... ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....ರಕ್ಷಣೆ ಇಲ್ಲದ ಶತಮಾನದ ಸರಕಾರಿ ಶಾಲೆ.....ಶಾಲೆಗೆ ಎದುರಾಗಿದೆ ಬಹುದೊಡ್ಡ ಆತಂಕ.....ಗೌರಿ ಗಣೇಶ ಹಬ್ಬಕ್ಕೆ Big Mishra ದಲ್ಲಿ ಸ್ಪೆಷಲ್ ಮೋದಕ.....ಹಬ್ಬದ ಸಂಭ್ರಮಕ್ಕೆ ಸಿಹಿಯ ಸಡಗರ ಹೆಚ್ವಿಸಿದ ಸಂಜಯ ಮಿಶ್ರಾ.....ಸರ್ಕಾರಿ ಶಾಲಾ ಕೊಠಡಿಗೆ ಬೆಂಕಿ.....ಅಪಾರ ಪ್ರಮಾಣದ ಹಾನಿ‌.....ಸರ್ಕಾರಿ ಶಾಲಾ ಸಮಯ ಬದಲಾವಣೆಗೆ ಸಭೆ.....ಸಭೆ ಕರೆದ ಸಚಿವರು.....ಆತ್ಮಹತ್ಯೆ ಮಾಡಿಕೊಂಡ ಶಾಲಾ ವಿದ್ಯಾರ್ಥಿನಿ.....ಆತ್ಮಹತ್ಯೆ ಗೆ ಕಾರಣ.....ಮರದ ನೆರಳಿನಲ್ಲಿ ಮಕ್ಕಳಿಗೆ ಪಾಠ ಇದು ರಾಜ್ಯದ ಸರ್ಕಾರಿ ಶಾಲೆಯ ವ್ಯವಸ್ಥೆ.....ಶಿಕ್ಷಣ ಸಚಿವರೇ ಕಣ್ತೇರೆದು ನೋಡಿ.....ಮಕ್ಕಳಿಗೆ ಕಳಪೆ ಶೂ ಸಾಕ್ಸ್‌ ವಿತರಣೆ ತನಿಖೆಗೆ ಸಮಿತಿ ರಚನೆ.....ಅಧಿಕಾರಿಗಳಲ್ಲಿ‌ ಶುರುವಾಯಿತು ಢವಢವ.....ಶಾಲಾ ಸಮಯ ಬದಲಾವಣೆ..... ಮಾಹಿತಿ ನೀಡಿದ ಶಿಕ್ಷಣ ಸಚಿವರು.....ರಾಷ್ಟ್ರ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿಗೆ ಭಾಜನರದ BEO ಗೆ ಅಭಿನಂದಿಸಿದ KSPSTA.....