LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಸಮಯ ಬದಲಾವಣೆಗೆ ಸಭೆ.....ಸಭೆ ಕರೆದ ಸಚಿವರು.....

ಬೆಂಗಳೂರು -

ಸರ್ಕಾರಿ ಶಾಲೆಗಳ ಸಮಯ ಬದಲಾವಣೆ ವಿಚಾರ ಕುರಿತು ಚರ್ಚೆ ಮಾಡಲು ಶಿಕ್ಷಣ ಸಚಿವರು ಸಭೆ ಕರೆದಿದ್ದಾರೆ ಹೌದು ಶಿಕ್ಷಣ ಸಚಿವರ ನೇತೃತ್ವದಲ್ಲಿ ತುರ್ತು ಸಭೆಯನ್ನು ಕರೆಯಲಾಗಿದೆ ರಾಜ್ಯದ ಸರ್ಕಾರಿ ಶಾಲೆಗಳ ತರಗತಿ ಸಮಯದಲ್ಲಿ ಬದಲಾವಣೆ ಮಾಡುವ ಕುರಿತು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದ ಬೆನ್ನಲ್ಲೇ ಸಧ್ಯ ಶಾಲಾ ಸಮಯಬದಲಾವಣೆ ಕುರಿತಂತೆ ಶಿಕ್ಷಣ ಸಚಿವರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಅಧಿಕಾರಿಗಳು ಹಾಗೂ ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚೆ ನಡೆಸಲಿದ್ದಾರೆ

ಪ್ರಸ್ತುತ ಶಾಲೆಗಳ ಆರಂಭ ಮತ್ತು ಮುಕ್ತಾಯದ ಸಮಯವನ್ನು ಬದಲಾಯಿಸುವ ಕುರಿತು ವಿವಿಧ ವಲಯಗಳಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿದ್ಯಾರ್ಥಿಗಳ ಅನುಕೂಲ, ಶಿಕ್ಷಕರ ಕಾರ್ಯನಿರ್ವ ಹಣಾ ಸಮಯ, ಸಾರಿಗೆ ವ್ಯವಸ್ಥೆ ಹಾಗೂ ನಗರ ಪ್ರದೇಶಗಳ ಸಂಚಾರ ದಟ್ಟಣೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಸಭೆಯಲ್ಲಿ ಸುಧೀರ್ಘ ವಾಗಿ ಚರ್ಚೆ ಮಾಹಿತಿಯನ್ನು ತೆಗೆದುಕೊಂಡ ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ

ವಿಶೇಷವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ದೊಡ್ಡ ನಗರ ಪ್ರದೇಶ ಗಳಲ್ಲಿ ಬೆಳಗಿನ ಹಾಗೂ ಸಂಜೆ ವೇಳೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಯನ್ನು ಕಡಿಮೆ ಮಾಡುವ ಉದ್ದೇಶದಿಂದ ಶಾಲೆಗಳ ಸಮಯದಲ್ಲಿ ಬದಲಾವಣೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಧ್ಯ ಸಚಿವರು ಸಭೆ ಕರೆದಿದ್ದಾರೆ

ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಶಾಲಾ ಆಡಳಿತ ಮಂಡಳಿಗಳು, ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಸಚಿವರು ತುರ್ತು ಸಭೆಯನ್ನು ಕರೆದಿ ದ್ದಾರೆ

ತುರ್ತು ಸಭೆಯಲ್ಲಿ ಶಾಲೆಗಳ ಪ್ರಸ್ತುತ ವೇಳಾಪಟ್ಟಿ, ವಿದ್ಯಾರ್ಥಿಗಳ ಸುರಕ್ಷತೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಶಿಕ್ಷಕರ ಕರ್ತವ್ಯದ ಅವಧಿ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ವಿಭಿನ್ನ ಪರಿಸ್ಥಿತಿಗಳ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ.ಸರ್ಕಾರಿ ಶಾಲೆಗಳ ಸಮಯ ಬದಲಾವಣೆ ಜಾರಿಯಾದರೆ, ಯಾವ ತರಗತಿಗಳಿಗೆ ಅನ್ವಯಿಸಬೇಕು, ಶಾಲೆ ಆರಂಭವಾಗುವ ಮತ್ತು ಮುಕ್ತಾಯವಾಗುವ ಸಮಯ ಎಷ್ಟಿರಬೇಕು ಹಾಗೂ ಜಿಲ್ಲಾವಾರು ವಿಭಿನ್ನ ವೇಳಾಪಟ್ಟಿ ಅಗತ್ಯವಿದೆಯೇ ಎಂಬ ಅಂಶಗಳ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

ಆದಾಗ್ಯೂ, ಶಾಲಾ ಸಮಯ ಬದಲಾವಣೆ ಕುರಿತು ಅಂತಿಮ ಅಧಿಕೃತ ಆದೇಶ ಹೊರಬರುವವರೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಪ್ರಸ್ತುತ ವೇಳಾಪಟ್ಟಿಯನ್ನೇ ಪಾಲಿಸಬೇಕು. ಸರ್ಕಾರದ ಅಂತಿಮ ನಿರ್ಧಾರದ ಬಳಿಕವೇ ಹೊಸ ಸಮಯ ಜಾರಿಗೆ ಬರುವ ಸಾಧ್ಯತೆ ಇದ್ದು ಸಧ್ಯ ಸಚಿವರು ಕರೆದ ಸಭೆ ಸಾಕಷ್ಟು ಪ್ರಮಾಣದಲ್ಲಿ ಕುತೂಹಲ ಕೆರಳಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಡಿನ ಜನತೆಗೆ Big Mishra ದಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು..... ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....ರಕ್ಷಣೆ ಇಲ್ಲದ ಶತಮಾನದ ಸರಕಾರಿ ಶಾಲೆ.....ಶಾಲೆಗೆ ಎದುರಾಗಿದೆ ಬಹುದೊಡ್ಡ ಆತಂಕ.....ಗೌರಿ ಗಣೇಶ ಹಬ್ಬಕ್ಕೆ Big Mishra ದಲ್ಲಿ ಸ್ಪೆಷಲ್ ಮೋದಕ.....ಹಬ್ಬದ ಸಂಭ್ರಮಕ್ಕೆ ಸಿಹಿಯ ಸಡಗರ ಹೆಚ್ವಿಸಿದ ಸಂಜಯ ಮಿಶ್ರಾ.....ಸರ್ಕಾರಿ ಶಾಲಾ ಕೊಠಡಿಗೆ ಬೆಂಕಿ.....ಅಪಾರ ಪ್ರಮಾಣದ ಹಾನಿ‌.....ಸರ್ಕಾರಿ ಶಾಲಾ ಸಮಯ ಬದಲಾವಣೆಗೆ ಸಭೆ.....ಸಭೆ ಕರೆದ ಸಚಿವರು.....ಆತ್ಮಹತ್ಯೆ ಮಾಡಿಕೊಂಡ ಶಾಲಾ ವಿದ್ಯಾರ್ಥಿನಿ.....ಆತ್ಮಹತ್ಯೆ ಗೆ ಕಾರಣ.....ಮರದ ನೆರಳಿನಲ್ಲಿ ಮಕ್ಕಳಿಗೆ ಪಾಠ ಇದು ರಾಜ್ಯದ ಸರ್ಕಾರಿ ಶಾಲೆಯ ವ್ಯವಸ್ಥೆ.....ಶಿಕ್ಷಣ ಸಚಿವರೇ ಕಣ್ತೇರೆದು ನೋಡಿ.....ಮಕ್ಕಳಿಗೆ ಕಳಪೆ ಶೂ ಸಾಕ್ಸ್‌ ವಿತರಣೆ ತನಿಖೆಗೆ ಸಮಿತಿ ರಚನೆ.....ಅಧಿಕಾರಿಗಳಲ್ಲಿ‌ ಶುರುವಾಯಿತು ಢವಢವ.....ಶಾಲಾ ಸಮಯ ಬದಲಾವಣೆ..... ಮಾಹಿತಿ ನೀಡಿದ ಶಿಕ್ಷಣ ಸಚಿವರು.....ರಾಷ್ಟ್ರ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿಗೆ ಭಾಜನರದ BEO ಗೆ ಅಭಿನಂದಿಸಿದ KSPSTA.....