ಉಡುಪಿ -
ಕರಾವಳಿಯ ಕ್ರೈಸ್ತರು ಸೆ.8ರಂದು ಆಚರಿಸುವ ಮೇರಿ ಮಾತೆಯ ಜನ್ಮದಿನವಾದ ಮೊಂತಿ ಫೆಸ್ಟ್ (ತೆನೆ ಹಬ್ಬ)ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆ ಗಳಿಗೆ ಸಾರ್ವತ್ರಿಕ ರಜೆ ಘೋಷಸುವಂತೆ ಕಥೊಲಿಕ್ ಸಭಾ ಮಂಗಳೂರು ಮತ್ತು ಉಡುಪಿ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದ ನಿಯೋಗವು ಆರೋಗ್ಯ ಸಚಿವ, ಮಂಗಳೂರು ಜಿಲ್ಲಾ ಉಸ್ತುವಾರಿ ಯು.ಟಿ. ಖಾದರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಯಾಗಿ ಮನವಿ ಸಲ್ಲಿಸಿತು.
ಕರಾವಳಿಯೂ ಸೇರಿದಂತೆ ರಾಜ್ಯದೆಲ್ಲಡೆ ಕ್ರೈಸ್ತರು ಪ್ರತಿವರ್ಷ ಸೆ.8ರಂದು ನೂರಾರು ವರ್ಷದಿಂದ ಕುಟುಂಬ ಹಬ್ಬದ ವಿಶೇಷ ದಿನವನ್ನಾಗಿ ಆಚರಿಸುತ್ತ ಬಂದಿದ್ದಾರೆ. ಈ ದಿನವು ದೇವಮಾತೆ ಕನ್ಯಾಮರಿಯ ಮ್ಮಳ ಜನ್ಮದಿನವಾಗಿದೆ ಇದೇ ದಿನದಂದು ತೆನೆ ಹಬ್ಬ ಆಚರಿಸುತ್ತೇವೆ.
ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ದೇವಾಲಯಗಳಲ್ಲಿ ಪೂಜಾವಿಧಿ ನೆರವೇರಿಸಿ ಕುಟುಂಬದವರೊಂದಿಗೆ ಭೋಜನ ಮಾಡಿ ಸಂಭ್ರಮಿಸಲಾಗುತ್ತದೆ. ಹೀಗಾಗಿ ವಿಶೇಷ ದಿನದ ನಿಮಿತ್ತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜಾ ನೀಡುವಂತೆ ಮನವಿ ಸಲ್ಲಿಸಿದರು
ನಿಯೋಗದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಸಂತೋಷ್ ಡಿಸೋಜ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ, ಉಡುಪಿ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಕಾರ್ಯದರ್ಶಿ ಜೂಲಿಯೆಟ್ ಡಿಸೋಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಉಡುಪಿ.....