LIVE TV LocalCrimeNationalInternationalPoliticsEducationTechnologyEntertainmentSportsFeature
State News

ಈದ್ ಮಿಲಾದ್ ಆಗಸ್ಟ್.26ರಂದು ರಾಜ್ಯಾಧ್ಯಂತ 'ಸಾರ್ವತ್ರಿಕ ರಜೆ' ಘೋಷಣೆ.....

ಬೆಂಗಳೂರು -

ಈದ್ ಮಿಲಾದ್ ಹಿನ್ನಲೆಯಲ್ಲಿ ಆಗಸ್ಟ್.26 ರಂದು ರಾಜ್ಯಾಧ್ಯಂತ 'ಸಾರ್ವತ್ರಿಕ ರಜೆ' ಘೋಷಣೆ ಮಾಡ ಲಾಗಿದೆ ಹೌದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆಯನ್ನು ದಿನಾಂಕ: 26.08.2026ರ ಬದಲಾಗಿ ದಿನಾಂಕ: 25.08.2026ರಂದೇ ಘೋಷಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಅಧಿಕೃತ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಆಗಸ್ಟ್ 26ರಂದು ರಾಜ್ಯಾದ್ಯಂತ ಈದ್ ಮಿಲಾದ್ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಆದರೆ ಸ್ಥಳೀಯವಾಗಿ ಚಂದ್ರದರ್ಶನದ ಆಧಾರದ ಮೇಲೆ ಹಬ್ಬ ಆಚರಿಸುವ ಹಿನ್ನೆಲೆಯಲ್ಲಿ, ರಜಾ ದಿನ ವನ್ನು ಆಗಸ್ಟ್ 25ಕ್ಕೆ ಬದಲಾಯಿಸುವಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದರು.

news_1787587270_0_334.webp

 

ಜಿಲ್ಲಾಧಿಕಾರಿಗಳ ಕೋರಿಕೆಯನ್ನು ಪರಿಗಣಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು, "ಸ್ಥಳೀಯ ಪರಿಸ್ಥಿತಿಗಳಿಗನುಸಾರವಾಗಿ ಆಗಸ್ಟ್ 26ರ ಬದಲಿಗೆ ಆಗಸ್ಟ್ 25ರಂದು ಸಾರ್ವತ್ರಿಕ ರಜೆ ಘೋಷಿಸುವ ಕುರಿತು ಜಿಲ್ಲಾಧಿಕಾರಿಗಳ ಹಂತದಲ್ಲೇ ನಿಯಮಾ ನುಸಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕು," ಎಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.

ಇದರೊಂದಿಗೆ ಕರಾವಳಿ ಭಾಗದಲ್ಲಿ ಆಗಸ್ಟ್ 25 ರಂದೇ ಸರ್ಕಾರಿ ಕಚೇರಿಗಳು, ಶಾಲೆ-ಕಾಲೇಜುಗಳಿಗೆ ಈದ್ ಮಿಲಾದ್ ರಜೆ ದೊರೆಯುವುದು ಖಚಿತವಾಗಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆತ್ಮಹತ್ಯೆ ಗೆ ಮಾಡಿಕೊಳ್ಳಲು ಕಾಲುವೆಗೆ ಹಾರಿದ BEO ಕಚೇರಿ ಆಧೀಕ್ಷಕ - ಪತ್ರ ಬರೆದಿಟ್ಟು ಆತ್ಮಹತ್ಯೆ ಗೆ ಯತ್ನ.....ಮಂಜುನಾಥ ನಿಗಾಗಿ ಪೊಲೀಸರ ಹುಡುಕಾಟ.....ಈದ್ ಮಿಲಾದ್ ಆಗಸ್ಟ್.26ರಂದು ರಾಜ್ಯಾಧ್ಯಂತ 'ಸಾರ್ವತ್ರಿಕ ರಜೆ' ಘೋಷಣೆ.....ನಿರಂತರ ಹಾಜರಾತಿ ನಿಲ್ಲಿಸಿ ಹಳೆಯ ಹಾಜರಾತಿ ಮುಂದುವರೆಸಿ ಪವಾಡೆಪ್ಪ ಆಗ್ರಹ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ದ್ವನಿ ಎತ್ತಿದ ರಾಜ್ಯಾಧ್ಯಕ್ಷ ಪವಾಡೆಪ್ಪ.....ಜ್ವರ ಅಂತಾ ಬಿಡಲಿಲ್ಲ ಸಂಡೆ ಅಂತಾ ಮನೆ ಹಿಡಿಲಿಲ್ಲಾ ಫುಲ್ ಡೂಟಿ ಮಾಡಿದ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಅನಾರೋಗ್ಯದ ನಡುವೆ ಕರ್ತವ್ಯ ಮಾಡಿ ಮಾದರಿಯಾದ ಪಾಲಿಕೆಯ ಆಯುಕ್ತರು.....500 ವರ್ಷಗಳ ಇತಿಹಾಸದ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ಮಾಡಿದ ಸುರೇಶ ಗೋಕಾಕ್ ಟೀಮ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಅರ್ಥಪೂರ್ಣ ಕಾರ್ಯಕ್ರಮ..... ಸುರೇಶ ಗೋಕಾಕ್ ಗೆ ಸಾಥ್ ನೀಡಿದ ನೂರಾರು ಯುವಕರು......ಶಾಂತಿನಿಕೇತನ ಕಾಲೋನಿಯ 362 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ ನೂರಾರು ವರ್ಷಗಳಿಂದ ಸ್ವಂತ ಮನೆಗಾಗಿ ಕಾಯುತ್ತಿದ್ದ ಕುಟುಂಬಗಳಿಗೆ ಆಸರೆಯಾದ ಶಾಸಕ ಪ್ರಸಾದ್ ಅಬ್ಬಯ್ಯ.....ಸಂಜಯ ಮಿಶ್ರಾ ಅವರ ತಾಯಿ ರಾಜಕುಮಾರಿ ಗಣೇಶ ಮಿಶ್ರಾ ನಿಧನ ಸಂಜಯ ಮಿಶ್ರಾ ಕುಟುಂಬಕ್ಕೆ ತುಂಬಲಾರದ ನಷ್ಟ – ಕಂಬನಿ ಮಿಡಿದ ಆಪ್ತರು ಹಾಗೂ ಸಂಸ್ಥೆಯ ಸಿಬ್ಬಂದಿಗಳು.....ಶಿಕ್ಷಕರ ನೇಮಕಾತಿ ಪರೀಕ್ಷೆ ಮೊದಲ ಬಾರಿಗೆ ಹೊಸ ಪ್ರಯೋಗ - ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹೊಸ ಹೆಜ್ಜೆ.....ಸಂಸ್ಕಾರ ಭಾರತಿ ಯಿಂದ ಧಾರವಾಡ ದಲ್ಲಿ ದಿವ್ಯಗರ್ಭ' ಕಾರ್ಯಕ್ರಮ - ಸಂಸ್ಕಾರ ಭಾರತಿ ಸಂಸ್ಥೆ ಯಿಂದ ಅರ್ಥಪೂರ್ಣ ಕಾರ್ಯಕ್ರಮ ಅಧ್ಯಕ್ಷೆ ಡಾ ಸೌಭಾಗ್ಯ ಕುಲಕರ್ಣಿ ಮಾಹಿತಿ.....ಸಂಜಯ ಮಿಶ್ರಾ ಅವರ ಕನಸಿನ "Big Mishra" ಯಶಸ್ಸಿನ ಹಿಂದೆ ಸಂಜಯ ಮಿಶ್ರಾ ಅವರ ಅಪಾರ ಪರಿಶ್ರಮ.....