LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರ ಪ್ರತಿಭಟನೆ - ನೌಕರರ ಸಂಘದಿಂದ ಪ್ರತಿಭಟನೆ ತಹಶಿಲ್ದಾರಗೆ ಮನವಿ......

ಸಿರಿವಾರ -

ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ ವಿಚಾರ ಕುರಿತು ಸಿರಿವಾರದಲ್ಲಿ ಸರ್ಕಾರಿ ನೌಕರರು ಪ್ರತಿಭಟನೆ ಮಾಡಿದರು ಕವಿತಾಳದ ಕಾಲುವೆ ಗೇಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ನೀರಾವರಿ ಇಲಾಖೆ ಜೆಇ ಹನುಮಂತ ನಾಯಕ ಅವರ ಮೇಲೆ ಕೆಲ ಗ್ರಾಮಸ್ಥರು ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗ ಳಿಂದ ನಿಂದಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಅಶೋಕ ಪವಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಜೆಇ ಹಾಗೂ ಅವರ ಜೊತೆಗಿದ್ದ ಮಹಿಳಾ ಸಿಬ್ಬಂದಿ ಸೇರಿದಂತೆ ಇತರ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದನೆ ಮಾಡಲಾಗಿದ್ದು ಇದು ಖಂಡನೀಯವಾಗಿದೆ. ಹಲ್ಲೆ ನಡೆಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸ ದಂತೆ ಜೆಇಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರೀಫ್ ಮಿಯಾ, ಲಕ್ಷ್ಮಣ ಯಾದವ್, ಪ್ರದೀಪ್ ಕುಮಾರ್, ಯೇಸುಮಿತ್ರ, ಮೌನೇಶ ಹಿರೆಹಣಗಿ, ಶ್ರೀನಾಥ್, ದೇವರಾಜ, ವಾಹಿದ್, ನೀರಾವರಿ ಇಲಾಖೆಯ ಇಇ ಕೋದಂಡರಾಮ ಸೇರಿದಂತೆ ಸರ್ಕಾರಿ ನೌಕರರು, ಉಪನ್ಯಾಸಕರು, ಶಿಕ್ಷಕರು ಇದ್ದರು.

ಸುದ್ದಿ ಸಂತೆ ನ್ಯೂಸ್ ಸಿರಿವಾರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ LKG ತರಗತಿ ಉದ್ಘಾಟನೆ - ಆರಂಭಗೊಂಡ LKG ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಮೂಡಿದ ಆಶಾಕಿರಣ.....ನಿವೃತ್ತಿ ಯಾಗಲಿದ್ದಾರೆ HM ವೈ ಬಿ ವಾಲಿಕಾರ - ಶಾಲೆಯಲ್ಲಿ ನಡೆಯಲಿದೆ ಸೇವಾ ನಿವೃತ್ತಿ ಸಮಾರಂಭ.....ಸರ್ಕಾರಿ ನೌಕರರ ಪ್ರತಿಭಟನೆ - ನೌಕರರ ಸಂಘದಿಂದ ಪ್ರತಿಭಟನೆ ತಹಶಿಲ್ದಾರಗೆ ಮನವಿ......ಶಿಕ್ಷಕರ ಬದ್ಧತೆಗೆ ಸಾಕ್ಷಿಯಾದ 1963ರಲ್ಲಿ ಆರಂಭಗೊಂಡ ಈ ಸರ್ಕಾರಿ ಶಾಲೆ ಶಿಕ್ಷಕರ ಪರಿಶ್ರಮ ಬದ್ದತೆಯಿಂದಾ ಹೇಗೆ ಅರಳಿದೆ ನೋಡಿ ಈ ಸರ್ಕಾರಿ ಶಾಲೆ.....ವರ್ಗಾವಣೆ ಆದೇಶಕ್ಕೆ ಶಿಕ್ಷಕರ ಒತ್ತಾಯ - ಶಿಕ್ಷಕರ ದಿನಕ್ಕೆ ಕೊಡುಗೆ ಕೊಡಿ ಎನ್ನುತ್ತಿದ್ದಾರೆ ಶಿಕ್ಷಕರು.....15 ಸಾವಿರ ಶಿಕ್ಷಕರ ನೇಮಕಾತಿ ಯೊಂದಿಗೆ ಹೆಚ್ಚುವರಿ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ - ಮಾಹಿತಿ ನೀಡಿ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು.....ತುರ್ತು ಸಭೆ ಕರೆದ KSPSTA - ಆಗಸ್ಟ್ ‌4 ರಂದು ನಡೆಯಲಿದೆ ತುರ್ತು ಸಭೆ.....ತೀವ್ರ ಕುತೂಹಲ ಕೆರಳಿಸಿದ ಸಭೆ.....ವೇತಮ ಜಮೆ ಕುರಿತು ನೌಕರರಿಗೆ ಮಹತ್ವದ ಮಾಹಿತಿ - ವೇತನ ಪಾವತಿ ಕುರಿತು KSPSTA ಸಂಘಟನೆಯಿಂದ ಮಹತ್ವದ ಮಾಹಿತಿ.....ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ದಿಟ್ಟ ಹೆಜ್ಜೆ - ಹೈ ಪೈ ಆಗಲಿದ್ದಾರೆ ರಾಜ್ಯದಲ್ಲಿನ ನಮ್ಮ ಸರ್ಕಾರಿ ಶಾಲೆಗಳು..... ಚಿಕಿತ್ಸೆ ಫಲಿಸದೇ ಶಿಕ್ಷಕಿ ಶ್ರೀಮತಿ ಸರೋಜಿನಿ ತೋಟದ ನಿಧನ - ಹಿರಿಯ ಶಿಕ್ಷಕಿ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಶಿಕ್ಷಕ ಬಂಧುಗಳು.....