LIVE TV LocalCrimeNationalInternationalPoliticsEducationTechnologyEntertainmentSportsFeature
State News

40 ದಿನಗಳ ನಂತರ ಮುಂಬೈನಲ್ಲಿ ಪತ್ತೆಯಾದ ರಾಜ್ಯದ ಸರ್ಕಾರಿ ನೌಕರ ಪರ್ವೀಜ್.....ನಿಟ್ಟುಸಿರು ಬಿಟ್ಟ ಕುಟುಂಬದವರು.....

ಗದಗ -

ನಾಪತ್ತೆಯಾಗಿದ್ದ ಗದಗ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಧಾರವಾಡ ಕೊನೆಗೂ ಪತ್ತೆಯಾಗಿದ್ದಾರೆ. ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ನಿಗೂಢವಾಗಿ ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿ ಎಲ್ ಎಇಇ ಪರ್ವೀಜ್ ಧಾರವಾಡ ಕೊನೆಗೂ ಪತ್ತೆಯಾಗಿದ್ದಾರೆ. ಬರೋಬ್ಬರಿ 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪರ್ವಿಜ್ ಧಾರವಾಡ ಅವರನ್ನು ಗದಗ ಪೊಲೀಸರು ಪತ್ತೆ ಮಾಡಿದ್ದು ಪರ್ವಿಜ್​ ನನ್ನು ಗದಗಕ್ಕೆ ಕರೆತರಲಿದ್ದಾರೆ.

ಇದರೊಂದಿಗೆ ಕೆಆರ್‌ಐಡಿಎಲ್ ಎಇಇ ಪರ್ವೀಜ್ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, ಇನ್ನೊಂದೆಡೆ ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ತಿರುಗಾಡುತ್ತಿದ್ದ ಅಧಿಕಾರಿ ಪರ್ವೀಜ್ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆ ಯಾಗಿದ್ದಾರೆ. ಸದ್ಯ ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ಗದಗ ಕರೆತಂದು ವಿಚಾರಣೆಗೊಳಪಡಿಸಲಿದ್ದಾರೆ. ಸರ್ಕಾರದಿಂದ ಅನುದಾನ ಬಂದಿಲ್ಲ, ಗುತ್ತಿಗೆದಾರರ ಹಿಂಸೆ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ವಿಚಾರಣೆ ನಂತರ ಅಸಲಿ ಸತ್ಯಸತ್ಯತೆ ಬಯಲಿಗೆ ಬರಲಿದೆ.

ಕೆಆರ್​ಐಡಿಎಲ್​ನಲ್ಲಿ ಅನುದಾನ ಕೊರತೆ ಹಿನ್ನೆಲೆ ಯಲ್ಲಿ ಗುತ್ತಿಗೆದಾರರ ಒತ್ತಡಕ್ಕೆ ಬೇಸತ್ತು ಎಇಇ ಪರ್ವಿಜ್ ಅವರು ಸೆಪ್ಟೆಂಬರ್ 13ರಂದು ನಾಪತ್ತೆ ಯಾಗಿದ್ದರು. ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದು, ಈ ಸಂಬಂಧ ಗದಗ ಪೊಲೀಸರು ವಿಶೇಷ ತಂಡ ರಚನೆ ಮಾಡಿಕೊಂಡು ಇಂಜಿನಿಯರ್ ಪರ್ವೀಜ್ ಪತ್ತೆಗೆ ಕಾರ್ಯಚರಣೆ ನಡೆಸಿದಾಗ ಆರಂಭದಲ್ಲಿ ಎಇಇ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು.

ಆದರೆ, ತಮ್ಮ ಜಾಡು ಪತ್ತೆಯಾಗಬಾರದು ಎಂಬ ಉದ್ದೇಶದಿಂದ ಅವರು ವಿಜಯವಾಡದಿಂದಲೇ ತಮ್ಮ ಮೊಬೈಲ್ ಫೋನ್ ಸಂಪೂರ್ಣ ಆಫ್ ಮಾಡಿಕೊಂಡಿದ್ದರು. ಬಳಿಕ ಮಧ್ಯಪ್ರದೇಶದ ಭೋಪಾಲ್ ರೈಲ್ವೇ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿ ಗಳಲ್ಲಿ ಪ್ರತ್ಯಕ್ಷವಾಗಿದ್ದರು ಅಲ್ಲಿಗೆ ತೆರಳಿ ಪರಿಶೀಲಿಸಿ ದಾಗ ಪರ್ವೀಜ್ ಸುಳಿವು ಇರಲಿಲ್ಲ. ಆದರೂ ಬಿಡದ ಗದಗ ಪೊಲೀಸರು ನಿರಂತರ ಕಾರ್ಯಚರಣೆ ಮುಂದುವರೆಸಿದ್ದು, ಅಂತಿಮವಾಗಿ ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.

ಸೆಪ್ಟೆಂಬರ್ 13ರಂದು ಕಚೇರಿಯ ಡೆಸ್ಕ್ ಮೇಲೆ ಡೆತ್ ನೋಟ್ ಮಾದರಿಯ ಪತ್ರವೊಂದನ್ನು ಬರೆದಿಟ್ಟು, ಮರುದಿನ (ಸೆಪ್ಟೆಂಬರ್ 13) ಬೆಂಗಳೂರಿನ ಸಭೆಗೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಪರ್ವೀಜ್ ನಾಪತ್ತೆಯಾಗಿದ್ದರು. ಸಂಪರ್ಕ ಸಿಗದ ಕಾರಣ ಸೆಪ್ಟೆಂಬರ್ 16 ರಂದು ಅವರ ಕುಟುಂಬಸ್ಥರು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು. ಪರ್ವೇಜ್ ಬರೆದ ನೋಟ್ ನಲ್ಲಿ ಸರ್ಕಾರದ ಅನುದಾನದ ಕೊರತೆ ಮತ್ತು ಕಾಮಗಾರಿಗಳ ಬಾಕಿ ಹಣ ಬಿಡುಗಡೆಯಾಗದ ಕಾರಣ, ಉಪ-ಗುತ್ತಿಗೆದಾರರು ಮನೆ ಹಾಗೂ ಕಚೇರಿಗೆ ಬಂದು ತಮಗೆ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸ ಲಾಗಿತ್ತು.ಇವರ ಪತ್ತೆಗಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಹೆಚ್.ಎನ್ ಅವರ ನೇತೃತ್ವ ದಲ್ಲಿ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಸುದ್ದಿ ಸಂತೆ ನ್ಯೂಸ್ ಗದಗ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ.....4 ದಿನಗಳಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ.....40 ದಿನಗಳ ನಂತರ ಮುಂಬೈನಲ್ಲಿ ಪತ್ತೆಯಾದ ರಾಜ್ಯದ ಸರ್ಕಾರಿ ನೌಕರ ಪರ್ವೀಜ್.....ನಿಟ್ಟುಸಿರು ಬಿಟ್ಟ ಕುಟುಂಬದವರು.....DA ಹೆಚ್ಚಳ ಮಾಡಿ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್.....ಎಷ್ಟು DA ಹೆಚ್ಚಾಗಿದೆ ಗೊತ್ತಾ ನಿರೀಕ್ಷೆ ಯಲ್ಲಿ ನಮ್ಮ ರಾಜ್ಯದ ನೌಕರರು.....ರಾಜ್ಯ ಸರ್ಕಾರಿ ನೌಕರರಿಗೆ ಡಿಜಿಟಲ್ ಹಾಜರಾತಿ ಜಾರಿಗೊಳಿಸಿದ ರಾಜ್ಯ ಸರ್ಕಾರ..... ಪಾಲಿಸದಿದ್ದರೆ ಸೂಕ್ತ ಕ್ರಮದ ಎಚ್ಚರಿಕೆ.....ಬಿಗ್ ಮಿಶ್ರಾದಲ್ಲಿ ಆಕರ್ಷಕ ಗಿಫ್ಟ್ ಬಾಕ್ಸ್‌ಗಳ ಸಂಭ್ರಮ.....ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡುತ್ತಿದ್ದಾರೆ ಸಂಜಯ ಮಿಶ್ರಾ.....ಕೆರೆಯಲ್ಲಿ ಶವವಾಗಿ ಪತ್ತೆಯಾದ ಶಿಕ್ಷಕ.....ತನಿಖೆ ಮಾಡುತ್ತಿರುವ ಪೊಲೀಸರು.....ಕೆರೆಯಲ್ಲಿ ಶವವಾಗಿ ಪತ್ತೆಯಾದ ಶಿಕ್ಷಕ.....ತನಿಖೆ ಮಾಡುತ್ತಿರುವ ಪೊಲೀಸರು.....ಕೆರೆಯಲ್ಲಿ ಶವವಾಗಿ ಪತ್ತೆಯಾದ ಶಿಕ್ಷಕ.....ತನಿಖೆ ಮಾಡುತ್ತಿರುವ ಪೊಲೀಸರು.....ಕೆರೆಯಲ್ಲಿ ಶವವಾಗಿ ಪತ್ತೆಯಾದ ಶಿಕ್ಷಕ.....ತನಿಖೆ ಮಾಡುತ್ತಿರುವ ಪೊಲೀಸರು.....ಕೆರೆಯಲ್ಲಿ ಶವವಾಗಿ ಪತ್ತೆಯಾದ ಶಿಕ್ಷಕ.....ತನಿಖೆ ಮಾಡುತ್ತಿರುವ ಪೊಲೀಸರು.....