LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ನೇಮಕಾತಿ ವಯೋಮಿತಿ ಸಡಿಲಿಕೆ - ವಯೋಮಿತಿ ಹೆಚ್ಚಳ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.....

ಬೆಂಗಳೂರು -

ಶಿಕ್ಷಕರ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು ವಯೋಮಿತಿ ಸಡಿಲಿಕೆ ಮಾಡಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ ಹೌದು 5 ವರ್ಷ ವಯೋಮಿತಿ ಸಡಿಲಿಕೆಯನ್ನು ಮಾಡ ಲಾಗಿದೆ ಹದಿನೈದು ಸಾವಿರ ಶಿಕ್ಷಕರ ನೇಮಕಾತಿ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.2026ರ ಜನವರಿ 1ರಂದು ಹೊರಡಿಸಿದ್ದ ಅಧಿಸೂಚನೆಯಂತೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ವಯೋಮಿತಿ ಅರ್ಹತೆಯಲ್ಲಿ ಸಾಮಾನ್ಯ ವರ್ಗ ದವರಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ ಹಾಗೂ ಎಸ್ಸಿ, ಎಸ್ಟಿ ಪ್ರವರ್ಗ 1 ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿತ್ತು.ಈಗ ಎಲ್ಲಾ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಲಾಗಿದೆ.

ಹೆಚ್ಚಿನವಿವರಗಳಿಗಾಗಿhttps://schooleducation.karnataka.gov.in/cacell ವೆಬ್ ಸೈಟ್ ಗಮನಿಸಬ ಹುದಾಗಿದೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ.

ರಾಜ್ಯ ಸರ್ಕಾರವು ದಿನಾಂಕ 29-01-2026 ರಂದು ಆದೇಶ ಹೊರಡಿಸಿರುವಂತೆಯೇ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡ ಲಾಗಿದೆ. ವಯೋಮಿತಿಯ ಮಾಹಿತಿಯನ್ನು ಅಧಿಸೂ ಚನೆಯಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಅಧಿಸೂಚ ನೆಯನ್ನು ಸಂಪೂರ್ಣವಾಗಿ ಓದಿಕೊಂಡೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಲಿಂಕ್‌https://schooleducation.karnataka.gov.in/cacell.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಅಧಿಸೂಚನೆ ಹೊರಡಿಸಿದ್ದು, 1 ರಿಂದ 8 ನೇ ತರಗತಿ ತನಕ ಬೋಧಿಸುವ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಅರ್ಹತಾ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ ಎಂದು ಸ್ಪಷ್ಟಪಡಿಸ ಲಾಗಿದೆ

ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗೇಡ್‌-1 ಮತ್ತು ಗ್ರೇಡ್‌-2) ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಹತಾ ಪ್ರಮಾಣಪತ್ರ ಹೊಂದಿರು ವುದು ಕಡ್ಡಾಯವೇನಲ್ಲ ಎಂದು ತಿಳಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಶಿಕ್ಷಕರಿಗೆ ಮೊಟ್ಟೆ ಬಾರ ಇಳಿಸಿದ ರಾಜ್ಯ ಸರ್ಕಾರ ‌- ರಾಜ್ಯದ ಶಿಕ್ಷಕರಿಗೆ ತಪ್ಪಿತು ದೊಡ್ಡ ತಲೆನೋವು.....ಬೆಳಗಾವಿ ಯಲ್ಲಿ Big Mishra ಫ್ಯಾಮಿಲಿ ರೆಸ್ಟೋರೆಂಟ್ ಕುಂದಾನಗರದಲ್ಲಿ ಸಂಜಯ ಮಿಶ್ರಾ ರ ಕನಸಿನ ಹೊಟೇಲ್ ಆರಂಭ.....ಅವಳಿ ನಗರದ ಸ್ವಚ್ಛತೆಗೆ ಹೊಸ ಐಡಿಯಾ ಹುಡುಕಿದ HDMC - ಎಲ್ಲೆಂದರಲ್ಲಿ ಕಸ ಹಾಕುವ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಬ್ಯಾನರ್ ವೈರಲ್.....ಧಾರವಾಡದಲ್ಲಿ ಸಿಲಿಂಡರ್ ಸ್ಫೋಟ ಭಯಾನಕ ದೃಶ್ಯ ಸೆರೆ ಸಿಲಿಂಡರ್ ಸ್ಪೋಟಕ್ಕೆ ಸಿಡಿದು ಬಿದ್ದ ಮನೆ ಹೇಗಿತ್ತು ಸ್ಟೋಟ ನೋಡಿ.....KSPSTA ತಡೆಯಾಜ್ಞೆ ತೆರವು — ಅವಿರೋಧ ಆಯ್ಕೆಗೆ ನ್ಯಾಯದ ಬಲ.....ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಜ್ಯಸರ್ಕಾರಿ ನೌಕರರು ಸಂಘದಿಂದ ಕಾರ್ಯಕ್ರಮ ಆಯೋಜನೆ SSLC, PUC ಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಗೌರವ.....ಆರೋಗ್ಯ ಸಂಜೀವಿನಿ ತರಬೇತಿ ಕಾರ್ಯಾಗಾರ   ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಕಾರ್ಯಾಗಾರ ಆಯೋಜನೆ.....ರಾಜ್ಯದ ಎಲ್ಲಾ ಜಿಲ್ಲೆಗಳ ನೌಕರರು ಉಪಸ್ಥಿತಿ.....ಶಿಕ್ಷಕರ ನೇಮಕಾತಿ ವಯೋಮಿತಿ ಸಡಿಲಿಕೆ - ವಯೋಮಿತಿ ಹೆಚ್ಚಳ ಅಭ್ಯರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.....ಡೆತ್ ನೋಟ್ ನಲ್ಲಿ ಪ್ರಭಾವಿ ಅಧಿಕಾರಿಗಳ ಹೆಸರು - ಇನ್ನೂ ಸಿಗದ BEO ಕಚೇರಿ ಅಧೀಕ್ಷಕನ ಸುಳಿವು.....ತಾಂತ್ರಿಕ ದೋಷ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಆರಂಭದಲ್ಲೇ ಸಂಕಷ್ಟ - ಸಮಸ್ಯೆ ಪರಿಹರಿಸಲು ಮನವಿ.....