LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರ ನೇಮಕಾತಿ ಮಹತ್ವದ ಅಪ್ಡೇಟ್ ಮಾಹಿತಿ.....

ಬೆಂಗಳೂರು -

ಶಿಕ್ಷಕರ ನೇಮಕಾತಿ ಕುರಿತು ಅರ್ಜಿ ತಿದ್ದುಪಡಿಯ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಹೌದು
ಶಾಲಾ ಶಿಕ್ಷಣ ಇಲಾಖೆಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇಲಾಖೆಯು ಅರ್ಹ ಅಭ್ಯರ್ಥಿಗಳಿಗೆ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಹಾಗೂ ಜಾತಿಗೆ ಮತ್ತು ಆದಾಯ ಪ್ರಮಾಣಪತ್ರ ಅಪ್‌ಲೋಡ್‌ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಅರ್ಜಿ ತಿದ್ದುಪಡಿ, ಪ್ರಮಾಣಪತ್ರ ಅಪ್‌ಲೋಡ್‌ ಮಾಡಲು ಕೊನೆಯ ದಿನಾಂಕ ಸೆ. 25 ಆಗಿದ್ದು, ಶುಲ್ಕ ಪಾವತಿಸಲು ಸೆ.28 ಕೊನೆಯ ದಿನವಾಗಿದೆಈ ಅವಧಿ ವಿಸ್ತರಣೆಯು ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ.

ವಿವಾಹಿತ ಮಹಿಳಾ,ಪುರುಷ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸುವ ಕುರಿತು ಸ್ಪಷ್ಟನೆ ಕೋರಿದ್ದರಿಂದ ಈ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.ಜಿಲ್ಲಾ ಉಪನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ

ನಿಗದಿತ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಆನ್‌ ಲೈನ್‌ ಅರ್ಜಿಯಲ್ಲಿ "ಎಡಿಟ್‌' ಆಯ್ಕೆಯನ್ನು ಬಳಸಿ ಸರಿಯಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವನ್ನು ಅಪ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮಾಹಿತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಉಪನಿರ್ದೇಶಕರ (ಆಡಳಿತ) ಕಚೇರಿಯನ್ನು ಅಥವಾ ಕೇಂದ್ರಿತ ದಾಖಲಾತಿ ಘಟಕದ ಸಹಾಯ ವಾಣಿ ಸಂಖ್ಯೆಗಳು: 080-22483145, 22483140, 22271866, 9483024723 ಹಾಗೂ ಇ-ಮೇಲ್‌ ವಿಳಾಸ [email protected] ಗೆ ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿ.ಎಡ್. ಶಿಕ್ಷಕರಿಗೆ ಬಿಗ್ ರಿಲೀಫ್.....9ನೇ ವಯಸ್ಸಲ್ಲಿ ಶಾಲೆ ಬಿಟ್ಟಿದ್ದ ಅಜ್ಜಿಗೆ 105ನೇ ವಯಸ್ಸಿನಲ್ಲಿ ಗಣಿತಕ್ಕೆ 100ಕ್ಕೆ 100 ಅಂಕ.....ಇದು ಭಗೀರಥಿ ಅಮ್ಮನ ಯಶಸ್ಸಿನ ಕಥೆ.....KAS ಅಧಿಕಾರಿಗಳ ವರ್ಗಾವಣೆ ಮತ್ತೆ ಆರು ಅಧಿಕಾರಿಗಳ ವರ್ಗಾವಣೆ.....ಮೀಸಲಾತಿ ಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ ನೋಡಿ.....ಶಿಕ್ಷಕರ ಮನವಿ ಗೆ ಸ್ಪಂದಿಸಿದ CM ಬಹುದಿನಗಳ ಬೇಡಿಕೆ ಗೆ ಸ್ಪಂದಿಸಿದ ನಾಡ ದೊರೆ.....ಶಿಕ್ಷಕರ ನೇಮಕಾತಿ ಮಹತ್ವದ ಅಪ್ಡೇಟ್ ಮಾಹಿತಿ.....ರಾತ್ರಿ ಈ ಒಂದು ಹಣ್ಣು ತಿಂದರೆ ಸಾಕು ಡೊಳ್ಳು ಹೊಟ್ಟೆ ಕರಗುತ್ತದೆ..ರಾಜ್ಯದಲ್ಲಿ ಹೆಚ್ಚುವರಿ KPS ಶಾಲೆಗಳು ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ.....OPS ಜಾರಿಯಾದರೆ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹೊರೆ ಒಂದಿಷ್ಟು ಮಾಹಿತಿ.....IPS ಅಧಿಕಾರಿಗಳ ವರ್ಗಾವಣೆ ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಸರ್ಜರಿ......