This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಧಾರವಾಡ ದಲ್ಲಿ ಸನ್ಮಾನ ಗೌರವ – ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನ ಗೌರವ…..

ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಧಾರವಾಡ ದಲ್ಲಿ ಸನ್ಮಾನ ಗೌರವ – ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನ ಗೌರವ…..
WhatsApp Group Join Now
Telegram Group Join Now

ಧಾರವಾಡ

ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಧಾರವಾಡ ದಲ್ಲಿ ಸನ್ಮಾನ ಗೌರವ – ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನ ಗೌರವ

ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಧಾರವಾಡ ಶಹರ ಮತ್ತು ಧಾರವಾಡ ಗ್ರಾಮೀಣ ವಿಭಾಗದಿಂದ ಇತ್ತೀಚೆಗೆ ಅವಿರೋಧವಾಗಿ ಆಯ್ಕೆ ಯಾದ ರಮೇಶ ಲಿಂಗದಾಳ, ರಾಜಶೇಖರ ಹೊನ್ನಪ್ಪನವರ, ಉಮೇಶ ಕುರುಬರ, ಚಂದ್ರಶೇಖರ ತಿಗಡಿ, ಅಯ್ಯಪ್ಪ ಮೊಕಾಶಿ ಅವರುಗಳನ್ನು, ನವರಸ ಸ್ನೇಹಿತರ ವೇದಿಕೆ ಮತ್ತು ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಧಾರವಾಡ ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು

ಸತ್ಕರಿಸಿ ಅಭಿನಂದಿಸಿ ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಖ್ಯಾತ ಗಣಿತ ತಜ್ಞರು ಕೆ ಜಿ ದೇವರಮನಿ ಮಾತನಾಡಿ, ನೌಕರರ ಸಂಘಕ್ಕೆ ಅವಿ ರೋಧ ಆಯ್ಕೆ ಒಳ್ಳೆಯ ಬೆಳವಣಿಗೆ, ಈ ಒಂದು ಅವಕಾಶವನ್ನು ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು, ನೌಕರರಿಗೆ ಅದರಲ್ಲೂ ನೌಕರರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ಡಿಸೆಂಬರ್ 15 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆ ಆಗಲಿರುವ, ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನಾ ರವರ ಸಾರ್ಥಕ ಬದುಕಿನ ಕುರಿತು ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳರವರ ಸಂಪಾದಿತ ಕೃತಿಯನ್ನು ಆಧರಿಸಿ, ಬಾಬಾಜಾನ ಮುಲ್ಲಾ ಮತ್ತು ನಂದಪ್ಪಗೌಡ ದ್ಯಾಪೂರ ರವರು ಶಿಕ್ಷಕ ಕಲಾವಿದರುಗಳಿಗೆ ಅವಕಾಶ ನೀಡಿ,

ಒಂದು ಒಳ್ಳೆಯ ಸಿನಿಮಾ ಹೊರಬರಲು ಕಾರಣ ರಾಗಿದ್ದಕ್ಕಾಗಿ ಇಡೀ ಚಿತ್ರ ತಂಡಕ್ಕೆ ಇದೇ ಸಂದರ್ಭದಲ್ಲಿ ಶುಭಾಶಯ ಕೋರಿದರು, ನಿರ್ದೇಶಕ ಬಾಬಾಜಾನ ಮುಲ್ಲಾ ಮಾತನಾಡಿ, ಕಷ್ಟಪಟ್ಟು ಬದುಕು ಕಟ್ಟಿಕೊಂಡ ಮೇಲೆ ತಾವಾಯಿತು ತಮ್ಮ ಸಂಸಾರವಾಯಿತು ಎನ್ನುವವರ ಮದ್ಯೆ ಅಕ್ಷರತಾಯಿ ಲೂಸಿ ಸಾಲ್ಡಾನ ತುಂಬಾ ಆದರ್ಶವಾಗಿ ನಿಲ್ಲುತ್ತಾರೆ, ಇಂತಹ ಆದರ್ಶ ವ್ಯಕ್ತಿಯ ನೈಜ ಬದುಕನ್ನು ಸಿನಿಮಾ ಮಾಡಿ ತೆರೆಗೆ ತರುತ್ತಿದ್ದೇವೆ ಎಲ್ಲರ ಸಹಕಾರ ಇರಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ ಲಿಂಗದಾಳ ನಾನು ಧಾರವಾಡ ಗ್ರಾಮೀಣ ಭಾಗದ ಮುಗದ ಸಿ ಆರ್ ಪಿಯಾಗಿ ಕಾರ್ಯ ಮಾಡುವಾಗ ಲೂಸಿ ಸಾಲ್ಡಾನ ಮುಗದ ಶಾಲೆಯ ಮುಖ್ಯ ಶಿಕ್ಷಕಿಯಾಗಿ ನನಗೆ ತುಂಬಾ ಸಹಕಾರ ನೀಡಿದ್ದಾರೆ, ಆ ಸಮಯದಲ್ಲಿ ಅವರು ಬಡ ಮಕ್ಕಳಿಗೆ ಸಹಾಯ ಮಾಡುವುದನ್ನು ನಾನು ಕಣ್ಣಾರೆ ಕಂಡಿರುವೆ,ಇಂತಹ ಆದರ್ಶ ಶಿಕ್ಷಕಿಯು ಚಿಕ್ಕ ವಯಸ್ಸಿ  ನಲ್ಲಿಯೇ ತಂದೆ,ತಾಯಿ ಬಂಧು ಬಳಗದಿಂದ ದೂರವಾಗಿ ಎಲ್ಲೋ ರೈಲು ಸಿಬ್ಬಂದಿಯ ಆಶ್ರಯದಲ್ಲಿ ಬೆಳೆದು,

ಬಾಲ್ಯದಲ್ಲೇ ಮದುವೆಯಾಗಿ, ಬಾಲ ವಿಧವೆಯಾಗಿ, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು, ಮರು ಮದುವೆ ಯಾಗದೇ, ತನ್ನ ಶಾಲಾ ಮಕ್ಕಳಲ್ಲಿ ಸಂತಸವನ್ನು ಕಂಡು, ಬಾಳಿ ಬದುಕಿದ ಮಹಾನ್ ತಾಯಿ ಎಂದರು. ಫಾಧರ್ ಸೋಜರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯ ಕ್ರಮದಲ್ಲಿ, ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷ ರಾದ ವಿ ಎನ್ ಕೀರ್ತಿವತಿ, ಕಾರ್ಯಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ,

ರಾಜಶೇಖರ ಹೊನ್ನಪ್ಪನವರ, ಮಹಾಂತೇಶ ಹುಬ್ಬಳ್ಳಿ, ಎ ಎಚ್ ನದಾಫ್,ಪ್ರಮೀಳಾ ಜಕ್ಕಣ್ಣವರ ಎಂ ಎಸ್ ಗಾಣಿಗೇರ ಮಲ್ಲಿಕಾರ್ಜುನ ಉಪ್ಪಿನ, ಬಿ ಆರ್ ಜಕಾತಿ,ಮೌನೇಶ ಕಮ್ಮಾರ, ಮಂಜುಳಾ ಜ್ಯೋತಿ, ಕಮಲಾಕ್ಷಿ ಹರತಕ್ಕಡಿ,ಮುಂತಾದವರು ಇದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk