ಬೆಳಗಾವಿ –
PSI ಅಮಾನತು – ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ನರಸಿಂಹರಾಜು ರನ್ನು ಅಮಾನತು ಮಾಡಿದ ಎಸ್ಪಿ ಎಸ್ ದೂರು ನೀಡಲು ಬಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪಿಎಸ್ಐ ರೊಬ್ಬರನ್ನು ಅಮಾನತು ಮಾಡಿರುವ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.
ಹೌದು ಇದೊಂದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ.ಆರಕ್ಷಕರೇ ಭಕ್ಷಕರಾದರೆ ಹೇಗೆ ಆಗುತ್ತದೆ ಎಂಬೊದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ ಮೆರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಿ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿ ಸಿದ್ದಾರೆ.
ಅಶಿಸ್ತು ಹಾಗೂ ದುರ್ನಡೆತೆ ಕಂಡು ಬಂದ ಹಿನ್ನಲೆ ಪಿಎಸ್ಐ ಅವರನ್ನು ಅಮಾನತು ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸಂಕೇಶ್ವರ ಪೊಲೀಸ ಠಾಣೆಗೆ ತಮ್ಮ ಕೌಟುಂಬಿಕ ಸಮಸ್ಯೆ ಕುರಿತು ತಮ್ಮ ಪತಿಯ ವಿರುದ್ಧ ದೂರು ನೀಡಲು ಮಹಿಳೆ ಸಂಕೇಶ್ವರ ಠಾಣೆಗೆ ಬಂದಿದ್ದರು.ಆದರೆ ಪಿಎಸ್ ಐ ನರಸಿಂಹರಾಜು ಜೆ.ಡಿ ಈ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಅವಳ ಸಂಪರ್ಕ ಬೆಳೆಸಿ ಅವಳನ್ನು ಕರೆದುಕೊಂಡು ತಿರುಗಾಡಿದ್ದಾರೆ ಎನ್ನುವ ಮಾಹಿತಿ ಇದೆಯಂತೆ. ಕೊನೆಗೆ ಪಿಎಸ್ ಐ ಅವರ ವರ್ತನೆಗೆ ಬೆಸತ್ತ ಮಹಿಳೆ ನ್ಯಾಯ ಕೊಡಿಸುವಂತೆ ಜಿಲ್ಲಾ ವರಿಷ್ಠಾ ಧಿಕಾರಿಗಳಿಗೆ ದೂರು ನೀಡಿದ್ದಳು.
ಮಹಿಳೆಯ ದೂರಿನನ್ವಯ ವಿಚಾರಣೆ ನಡೆಸಿದ ಜಿಲ್ಲಾಪೊ ಲೀಸ್ ವರಿಷ್ಠಾಧಿಕಾರಿಗಳು ಪಿಎಸ್ಐ ನರಸಿಂ ಹರಾಜು ಅವರನ್ನ ಕರ್ತವ್ಯ ಲೋಪ ಮಹಿಳೆ ಯೊಂದಿಗೆ ದುರ್ನಡತೆ ಹಾಗೂ ಅಶಿಸ್ತು ತೋರಿದ್ದಾರೆ ಎಂದು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..