This is the title of the web page
This is the title of the web page

Live Stream

[ytplayer id=’1198′]

September 2024
T F S S M T W
 1234
567891011
12131415161718
19202122232425
2627282930  

| Latest Version 8.0.1 |

State Newsಧಾರವಾಡ

ಚುನಾವಣೆಯ ಹೊಸ್ತಿಲಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಸ್ಕ್ಯಾಮ್ ಪತ್ತೆ ಮಾಡಿದ ಕೈ ಪಕ್ಷದ ಯುವ ನಾಯಕ ರಜತ್ – ಪಕ್ಕಾ ಮಾಹಿತಿ ಪಡೆದು ಸರ್ವೆ ಮಾಡುತ್ತಿದ್ದವರ ಮೇಲೆ ಕೇಸ್ ದಾಖಲು ಡಿಲೀಟ್ ಆದವರ ಅಂಕಿ ಅಂಶ ಹೇಗಿದೆ ನೋಡಿ

ಚುನಾವಣೆಯ ಹೊಸ್ತಿಲಲ್ಲಿ ಹುಬ್ಬಳ್ಳಿಯಲ್ಲಿ ದೊಡ್ಡ ಸ್ಕ್ಯಾಮ್ ಪತ್ತೆ ಮಾಡಿದ ಕೈ ಪಕ್ಷದ ಯುವ ನಾಯಕ ರಜತ್ – ಪಕ್ಕಾ ಮಾಹಿತಿ ಪಡೆದು ಸರ್ವೆ ಮಾಡುತ್ತಿದ್ದವರ ಮೇಲೆ ಕೇಸ್ ದಾಖಲು ಡಿಲೀಟ್ ಆದವರ ಅಂಕಿ ಅಂಶ ಹೇಗಿದೆ ನೋಡಿ
WhatsApp Group Join Now
Telegram Group Join Now

ಹುಬ್ಬಳ್ಳಿ –

ಚುನಾವಣೆಯ ಹೊಸ್ತಿಲಲ್ಲಿ ಸಧ್ಯ ರಾಜ್ಯದಲ್ಲಿ ಅಕ್ರಮ ಮತದಾರರ ಪಟ್ಟಿ ವಿಚಾರ ಕುರಿತಂತೆ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಘಟನೆ ಯೊಂದು ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು ಈ ಒಂದು ಘಟನೆಯ ಬೆನ್ನಲ್ಲೇ ಈಗ ಇದೇ ಮಾದರಿ ಹೋಲುವ ಸ್ಕ್ಯಾಮ್ ವೊಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಂಡು ಬಂದಿದೆ.ಹೌದು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿ ಖಾಸಗಿ ಸಂಸ್ಥೆಯೊಂದು ವಾರ್ಡ್ ನಲ್ಲಿ ಸಮೀಕ್ಷೆಯನ್ನು ಮಾಡುತ್ತಿರುವ ವಿಚಾರದ ಮಾಹಿತಿಯನ್ನು ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠರಿಗೆ ನೀಡಿದರು.

ಈ ಒಂದು ಕುರಿತಂತೆ ಸಂದೇಶ ಬರುತ್ತಿದ್ದಂತೆ ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೇ ತೆರಳಿ ಹೋಗಿ ಪರಿಶೀಲನೆ ಮಾಡಿದರು.ವಾರ್ಡ್ ನಲ್ಲಿ ಕೆಲವರು ಸೇರಿಕೊಂಡು ಸರ್ವೆ ಕಾರ್ಯದಲ್ಲಿ ತೋಡಗಿದ್ದು ಕಂಡು ಬಂದಿತು.ಆಯಪ್ ಮೂಲಕ ಮತದಾರರ ಸರ್ವೆ ಮಾಡುತ್ತಿರುವ ಪಕ್ಕಾ ಮಾಹಿತಿಯನ್ನು ಪಡೆದುಕೊಂಡ ರಜತ್ ಉಳ್ಳಾಗಡ್ಡಿಮಠ ಸರ್ವೆ ಮಾಡುತ್ತಿರುವವರನ್ನು ಸಂಪೂರ್ಣವಾಗಿ ವಿಚಾರಣೆ ಮಾಡಿ ಸ್ಥಳದಿಂದ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ಆಯಪ್ ಮೂಲಕ ಮತದಾರರ ಸರ್ವೆ ನಡೆ ಸುತ್ತಿದ್ದ ಆರೋಪದ ಮೇರೆ ಮೂವರ ವಿರುದ್ಧ ದೂರು ದಾಖಲಾಸಿದರು ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯಲ್ಲಿ ಮತದಾರರ ಸರ್ವೆ ಮಾಡುತ್ತಿದ್ದ ಮೂವರ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ಯನ್ನು ಸ್ಥಳೀಯರು ನೀಡಿದ್ದರು.ಇನ್ನೂ ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗಣಿ ಸಿದ ಕಾಂಗ್ರೇಸ್ ಪಕ್ಷದವರು ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು ಮೂವರನ್ನು ವಿಚಾರಣೆ ಗೊಳಪಡಿಸಿ ಧೃಡವಾದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

 

 

ಹರೀಶ್, ನಿತೇಶ್, ಮಂಜುನಾಥ್ ಅವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಕಾಂಗ್ರೆಸ್ ಮುಖಂಡರು ಒಪ್ಪಿಸಿದ್ದಾರೆ.ಪ್ರಮುಖವಾಗಿ ಬೆಂಗಳೂರು ಚಿಲುಮೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಆಯಪ್ ಮೂಲಕ ಮತದಾರರ ಸರ್ವೆ ನಡೆಸುತ್ತಿದ್ದ ಆರೋಪ ಕೇಳಿಬಂದಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿ ಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದು ಇತ್ತ ಈ ಕುರಿತಂತೆ ರಜತ್ ಉಳ್ಳಾಗಡ್ಡಿಮಠ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಹೋರಾಟವನ್ನು ಮಾಡೋದಾಗಿ ಹೇಳಿದರು.

 

 

ಇನ್ನೂ ಇವೇಲ್ಲದರ ನಡುವೆ ಮತ್ತೊಂದು ಸ್ಪೋಟಕ ವಿಚಾರ ಬೆಳಕಿಗೆ ಬಂದಿದ್ದು ಏಪ್ರಿಲ್ ನಿಂದ ಇಲ್ಲಿಯವರೆಗೆ ಡಿಲಿಟ್ ಆದ ಸಂಖ್ಯೆ ನೋಡಿದ್ರೆ ಬೆಚ್ಚಿ ಬೀಳ್ತೀರಾ ಹೌದು  ಧಾರವಾಡ ಜಿಲ್ಲೆಯ 7 ಕ್ಷೇತ್ರಗಳಲ್ಲಿ 1 ಲಕ್ಷಕ್ಕೂ ಅಧಿಕ ಹೆಸರು ಡಿಲಿಟ್ ಆಗಿದ್ದು ಕಳೆದ ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ವರೆಗಿನ ಅಂಕಿ ಅಂಶ ಧಾರವಾಡ ಜಿಲ್ಲಾಡಳಿತವೇ ನೀಡಿರೋ ಡಿಲಿಷನ್ ಪಟ್ಟಿಯಲ್ಲಿ ಈ ಒಂದು ವಿಚಾರ ಬೆಳಕಿಗೆ ಬಂದಿದೆ.

ಕುಂದಗೋಳ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರ ಹೆಸರು ಡಿಲಿಟ್ ಆಗಿದ್ದು ಕುಂದಗೋಳ ಕ್ಷೇತ್ರದಲ್ಲಿ ಸುಮಾರು 18 ಸಾವಿರ ಹೆಸರು ಡಿಲಿಟ್ ಆಗಿದ್ದು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 14 ಸಾವಿರ ಹೆಸರು ಡಿಲಿಟ್ ಮಾಡಲಾಗಿದ್ದು ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 14 ಸಾವಿರ ಹೆಸರು ಡಿಲಿಟ್ ಆಗಿವೆ. ಕಲಘಟಗಿ ಕ್ಷೇತ್ರದಲ್ಲಿ 12 ಸಾವಿರ ಹೆಸರು ಡಿಲಿಟ್ ಆಗಿದ್ದು ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ 11 ಸಾವಿರ ಹೆಸಲು ಡಿಲಿಟ್. ನವಲಗುಂದ ಕ್ಷೇತ್ರದಲ್ಲಿ 10 ಸಾವಿರ ಹೆಸರು ಡಿಲಿಟ್ ಮಾಡಲಾಗಿದ್ದು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ 6 ಸಾವಿರ ಹೆಸರು  ಅಲ್ಪಸಂಖ್ಯಾತರು, ಸ್ಲಂ ನಿವಾಸಿಗಳು, ಬಡವರ ಹೆಸರುಗಳೇ ಹೆಚ್ಚಾಗಿ ಡಿಲಿಟ್ ಆರೋಪ ಕೇಳಿ ಬಂದಿದ್ದು

ಕೆಲವೊಬ್ಬ ಕಾಂಗ್ರೆಸ್ ಮುಖಂಡರ ಹೆಸರುಗಳೂ ನಾಪತ್ತೆಯಾಗಿದ್ದು ಕೆಲ ದಿನಗಳಿಂದ ಮೂರು ಸಂಸ್ಥೆಗಳಿಂದ ಸರ್ವೆ ಹೆಸರಲ್ಲಿ ಡಿಲಿಟ್ ಕಾರ್ಯ ಆರೋಪ ಕೇಳಿ ಬರುತ್ತಿದೆ. ಧಾರವಾಡ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಮೂರು ಸಂಸ್ಥೆಗಳಿಂದ ಸರ್ವೆ ಕಾರ್ಯ ನಡೆದಿದ್ದು ಐಐಎಂಟಿ, ಜಿಎಸ್ಆರ್ ಹಾಗೂ ಎ.ಎಸ್.ಆರ್. ಸಂಸ್ಥೆಗಳಿದ ಸರ್ವೆ ಕಾರ್ಯ ನಡೆದಿದೆ. ಸರ್ವೆ ಹೆಸರಲ್ಲಿ ಮತದಾರ ಖಾಸಗಿ ವಿಷಯಗಳ ಸಂಗ್ರಹ ಆರೋಪ ಇದರಿಂದಾಗಿ ಕೇಳಿ ಬಂದಿದೆ.ಆ್ಯಪ್ ಮೂಲಕ ಮಾಡೋ ಸರ್ವೆಯಲ್ಲಿ ಹಲವಾರು ಮಾಹಿತಿ ಸಂಗ್ರಹವನ್ನು ಮತದಾರನ ಜಾತಿ, ಧರ್ಮ, ಆದಾಯ ಕುಟುಂಬದ ಸದಸ್ಯರ ಸಂಖ್ಯೆ ಇತ್ಯಾದಿ ಮಾಹಿತಿ ಸಂಗ್ರಹ. ಯಾವ ಪಕ್ಷಕ್ಕೆ ಮತ ಹಾಕ್ತೀರಾ ಯಾಕೆ ಹಾಕ್ತೀರಿ ಈ ಕ್ಷೇತ್ರಕ್ಕೆ ಯಾರು ಶಾಸಕರಾದ್ರೆ ಸೂಕ್ತ, ಯಾವ ಪಕ್ಷ ಗೆದ್ದರೆ ಸೂಕ್ತ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ.

ಅದನ್ನು ಪಡೆದ ನಂತರ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸೋ ಮತದಾರರ ಹೆಸರು ಡಿಲಿಟ್ ಮಾಡ್ತಿರೋ ಆರೋಪ. ಇದರಲ್ಲಿ ಡಿಸಿ, ಪಾಲಿಕೆ ಆಯುಕ್ತ, ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲು ಆರೋಪ. ಈ ಸಂಸ್ಥೆಗಳ ಹಿಂದೆ ಕಾಣದ ಕೈಗಳಿವೆ ಅವುಗ ಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಆಗ್ರಹ ವನ್ನು ಕಾಂಗ್ರೇಸ್ ಪಕ್ಷದ ಮುಖಂಡರು ಅದರಲ್ಲೂ ರಜತ್ ಉಳ್ಳಾಗಡ್ಡಿಮಠ ಒತ್ತಾಯ ಮಾಡಿದ್ದು

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗಕ್ಕೂ ದೂರು ನೀಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಕೈ ಮುಖಂಡ ರಜತ ಉಳ್ಳಾಗಡ್ಡಿಮಠ ಎಚ್ಚರಿಕೆ. ಘಟನೆಯ ಸಮಗ್ರ ತನಿಖೆಗೆ ಆಗ್ರಹ ವನ್ನು ಮಾಡಿದ್ದು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಈ ಮೂಲಕ ನೀಡಿದ್ದು ಈ ಒಂದು ವಿಚಾರ ಕುರಿತಂತೆ ಜಿಲ್ಲಾಡಳಿತ ಹೇಗೆ ಉತ್ತರಿಸುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್….

 


WhatsApp Group Join Now
Telegram Group Join Now
Suddi Sante Desk