ಹುಬ್ಬಳ್ಳಿ –
ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ಬೇಡ ರಾಜು ನಾಯಕವಾಡಿ ಸಲಹೆ – ಮೊದಲು ಸ್ಮಶಾನ ಅಭಿವೃದ್ದಿ ಮಾಡಿ ಶಾಸಕರಿಗೆ ಸೂಚನೆ ನೀಡಿದ ರಾಜು ನಾಯಕವಾಡಿ
ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿನ ಹಿಂದೂ ಸ್ಮಶಾನದಲ್ಲಿ ಆರಂಭವಾಗುತ್ತಿರುವ ಇಂದಿರಾ ಕ್ಯಾಂಟೀನ್ ಗೆ ಸಾಕಷ್ಟು ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಇದರ ನಡುವೆ ಪರ ವಿರೋಧದ ಚರ್ಚೆಯ ನಡುವೆಯೂ ಕೂಡಾ ಸಧ್ಯ ಈ ಒಂದು ಇಂದಿರಾ ಕ್ಯಾಂಟೀನ್ ಗೆ ಯುವ ಮುಖಂಡ ರಾಜು ನಾಯಕವಾಡಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಬಡವರ ಹಸಿವನ್ನು ನೀಗಿಸುವ ಉದ್ದೇಶದಿಂದಾಗಿ ಇಂದಿರಾ ಕ್ಯಾಂಟೀನ್ ಆರಂಭಮಾಡುತ್ತಿರುವುದು ಸ್ವಾಗತಾರ್ಹ ಆದರೆ ಸ್ಮಶಾನದಲ್ಲಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.ಈ ಕುರಿತಂತೆ ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ಇಂದಿರಾ ಕ್ಯಾಂಟೀನ್ ಇರಲಿ ಆದರೆ ಅದನ್ನು ಆರಂಭ ಮಾಡುವುದು ಎಲ್ಲಿ ಮಾಡಬೇಕು ಎಂಬ ಪರಿಜ್ಞಾನ ಅಧಿಕಾರಿಗಳಿಗೆ ಇರಲಿ ಎಂದಿದ್ದಾರೆ.
ಇನ್ನೂ ಈ ಒಂದು ವಿಚಾರವನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಗಂಭೀರವಾಗಿ ತಗೆದುಕೊಂಡು ಈ ಕೂಡಲೇ ಇಂದಿರಾ ಕ್ಯಾಂಟೀನ್ ನ್ನು ಬೇರೆ ಕಡೆಗೆ ಶಿಪ್ಟ್ ಮಾಡಬೇಕು ಎಂದು ಒತ್ತಾಯಿಸಿ ದ್ದಾರೆ.ವಿನಾಕಾರಣ ಈ ಒಂದು ವಿಚಾರದಲ್ಲಿ ರಾಜಕಾರಣವನ್ನು ಮಾಡದೇ ಅಭಿೃವೃದ್ದಿಯತ್ತ ಶಾಸಕರು ಗಮನ ಹರಿಸಲಿ ಎಂದಿದ್ದಾರೆ.
ಇದರೊಂದಿಗೆ ನಗರದಲ್ಲಿನ ಸಾರ್ವಜನಿಕರ ಮತ್ತೊಂದು ಸಮಸ್ಯೆ ಕುರಿತಂತೆ ರಾಜು ನಾಯಕವಾಡಿಯವರು ಧ್ವನಿ ಎತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……