ಹುಬ್ಬಳ್ಳಿ –
ಹೊಸೂರಿನ 108 ಸಮಸ್ಯೆಗಳಿಗೆ ಧ್ವನಿ ಎತ್ತಿದ ರಾಜು ನಾಯಕವಾಡಿ – ಸಾರ್ವಜನಿಕರ ಸಮಸ್ಯೆಗಳಿಗೆ ಮತ್ತೊಮ್ಮೆ ಧ್ವನಿ ಎತ್ತಿದ ಯುವ ಮುಖಂಡ ರಾಜು ನಾಯಕವಾಡಿ
ಸದಾ ಒಂದಿಲ್ಲೊಂದು ಸಾರ್ವಜನಿಕರ ಸಮಸ್ಯೆ ಗಳ ಕುರಿತಂತೆ ಧ್ವನಿ ಎತ್ತುತ್ತಿರುವ ರಾಜು ನಾಯಕವಾಡಿ ಮತ್ತೆ ಹುಬ್ಬಳ್ಳಿಯಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ.ಹೌದು ಅಧಿಕಾರ ಇರಲಿ ಇಲ್ಲದಿರಲಿ ರಾಜಕಾರಣಿಗಳ ಹಾಗೆ ಮಾತನಾಡದ ಅವರು ಅಧಿಕಾರ ಇಲ್ಲದಿದ್ದರೂ ಕೂಡಾ ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದಲ್ಲಿನ ಯಾವುದೇ ಸಮಸ್ಯೆ ಗಳಿರಲಿ ಗಮನಕ್ಕೆ ಬಂದಾಕ್ಷಣ ಕೂಡಲೇ ಧ್ವನಿಯಾಗುತ್ತಿರುವ ರಾಜು ನಾಯಕವಾಡಿ ಯವರು ಸಧ್ಯ ನಗರದಲ್ಲಿನ ಮತ್ತೊಂದು ಪ್ರಮುಖ ಸಮಸ್ಯೆಗಳ ಕುರಿತಂತೆ ಈಗ ಧ್ವನಿ ಎತ್ತಿದ್ದಾರೆ
ಹೌದು ನಗರದ ಹೃದಯಭಾಗದಲ್ಲಿರುವ ಹೊಸೂರ ಸರ್ಕಲ್ ನಲ್ಲಿನ 108 ಸಮಸ್ಯೆಗಳಿಗೆ ಸಧ್ಯ ರಾಜು ನಾಯಕವಾಡಿಯವರು ಧ್ವನಿ ಎತ್ತಿದ್ದಾರೆ.ಈ ಒಂದು ಸರ್ಕಲ್ ಪ್ರಮುಖವಾದ ಟ್ರಾಫೀಕ್ ನಿಂದ ಕೂಡಿದ್ದು ಹೀಗಿರುವಾಗ ಸರಳವಾದ ಸಂಚಾರಿ ಮಾರ್ಗಗಳಿಲ್ಲ ಸರಳವಾಗಿ ಯಾರು ಕೂಡಾ ಹೋಗುವಂತಿಲ್ಲ ಬರುವಂತಿಲ್ಲ ಹೆಚ್ಚು ಕಡಿಮೆಯಾದರೆ ಅವಘಡಗಳು ಸಂಭವಿ ಸುತ್ತಲೆ ಇರುತ್ತವೆ ಸಂಚಾರಿ ಪೊಲೀಸರು ಇದ್ದರು ಅವರಿಗೆ ಕುಳಿತುಕೊಂಡು ಕರ್ತವ್ಯ ಮಾಡುವ ವ್ಯವಸ್ಥೆ ಇಲ್ಲ
ನಿಂತುಕೊಂಡೇ ಕೆಲಸ ಮಾಡುವ ಪರಸ್ಥಿತಿ ಆ ಕಡೆಯಿಂದ ಈಕಡಗೆ ಸಾರ್ವಜನಿಕರು ರಸ್ತೆ ಕ್ರಾಸ್ ಮಾಡಬೇಕೆಂದರೆ ದೊಡ್ಡ ಹರಸಾಹಸ ಪಡಬೇಕು ಸ್ಮಾರ್ಟ್ ಸಿಟಿ ಸೇರಿದಂತೆ ಎನೇಲ್ಲಾ ಎಷ್ಟೇಲ್ಲಾ ಯೋಜನೆಗಳು ಬಂದರು ಕೂಡಾ ಯಾರು ಈ ಒಂದು ಸರ್ಕಲ್ ಅಭಿವೃದ್ದಿಗೆ ಕಣ್ತೇರೆದು ನೋಡುತ್ತಿಲ್ಲ ಮಾತನಾಡುತ್ತಿಲ್ಲ
ಹೀಗಾಗಿ ಈ ಕೂಡಲೇ ಅಧಿಕಾರಿಗಳು ಹೊಸೂರಿನಲ್ಲಿರುವ ನೂರೆಂಟು ಸಮಸ್ಯೆಗಳ ಕುರಿತಂತೆ ಗಮನ ಹರಿಸುವಂತೆ ರಾಜು ನಾಯಕವಾಡಿ ಒತ್ತಾಯಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..