ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ಆಯೋಗ ನೀಡುವ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಬೆಂಗಳೂರಿನಲ್ಲಿ ನೌಕರರ ಸಂಘಧ ಟೀಮ್ ನೊಂದಿಗೆ ತುರ್ತಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ರಾಜ್ಯಾಧ್ಯಕ್ಷರು ಈ ಹಿಂದೆ ಹೇಳಿದಂತೆ ಅಕ್ಟೋಬರ್ ತಿಂಗಳ ಒಳಗಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ಕುರಿತಂತೆ ಸಮಿತಿಯನ್ನು ರಚನೆ ಮಾಡೊದಾಗಿ ಹೇಳಿದ್ದರು ಇದನ್ನು ಸ್ವತಃ ರಾಜ್ಯಾಧ್ಯಕ್ಷರು ಕೂಡಾ ಹೇಳಿದ್ದರು ಹೀಗಾಗಿ ಸಧ್ಯ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದ ಹಿನ್ನಲೆಯಲ್ಲಿ ಭೇಟಿ ಮಾಡಿ ಚರ್ಚೆಯನ್ನು ಮಾಡಿದರು.
ಒಂದು ಗಂಟೆಗಳ ಕಾಲ ನಡೆದ ಚರ್ಚೆಯ ಸಮಯದಲ್ಲಿ ಮುಖ್ಯಮಂತ್ರಿ ಅವರು ರಾಜ್ಯಾಧ್ಯಕ್ಷರ ಮತ್ತು ಟೀಮ್ ನೊಂದಿಗೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಿ ಈಗಾಗಲೇ ಈ ಕುರಿತಂತೆ ಸಮಿತಿಯನ್ನು ಪೈನಲ್ ಮಾಡಲಾಗಿದ್ದು ನಾಳೆ ಅಥವಾ ನಾಡಿದ್ದು ಸಮಿತಿ ರಚನೆ ಘೋಷಣೆ ಮಾಡೊದಾಗಿ ಹೇಳಿದ್ದಾರೆ ಎಂದು ರಾಜ್ಯಾಧ್ಯಕ್ಷರು ಸುದ್ದಿ ಸಂತೆ ಗೆ ಹೇಳಿದರು.
ಈ ಒಂದು ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಷಡಾಕ್ಷರಿ ಸರ್ ಅಭಿಮಾನಿ ಗಳ ಬಳಗವು ನಿರಂತವಾಗಿ ಧ್ವನಿ ಎತ್ತಿತ್ತಿದ್ದು ಸುದ್ದಿ ಸಂತೆ ಕೂಡಾ ವರದಿಗಳನ್ನು ಮಾಡುತ್ತಿದ್ದು ಹೀಗಾಗಿ ಈ ಒಂದು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಷಡಾಕ್ಷರಿ ಅವರು ತಮ್ಮ ಸಂಘದ ಟೀಮ್ ನೊಂದಿಗೆ ತುರ್ತಾಗಿ ಭೇಟಿ ಮಾಡಿ ಚರ್ಚೆಯನ್ನು ಮಾಡಿದರು.
ಮುಖ್ಯಮಂತ್ರಿ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಒಂದೆರೆಡು ದಿನಗಳಲ್ಲಿ ಈ ಕುರಿತಂತೆ ಘೋಷಣೆ ಮಾಡೊದಾಗಿ ಹೇಳಿದ್ದಾರೆ ಎಂದು ಷಡಾಕ್ಷರಿ ಅವರು ಹೇಳಿದರು.ಏನೇ ಆಗಲಿ ಕಳೆದ ಕೆಲ ದಿನಗಳಿಂದ ನಮಗೂ ಕೇಂದ್ರ ಮಾದರಿಯ 7ನೇ ವೇತನ ಕೈಗೆ ಸಿಗುತ್ತದೆ ಎಂದುಕೊಂಡು ಕಾಯುತ್ತಿರುವ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಕನ್ನಡ ರಾಜ್ಯೋತ್ಸದ ಕೊಡುಗೆಯಾಗಿ ಬೇಡಿಕೆ ಈಡೇರಲಿ ಎಂಬೊದು ನಮ್ಮ ಆಶಯವಾಗಿದೆ.