ಶಿಕಾರಿಪುರ –
ಕಂಬಳಿ ಹೋದಿಸಿ ನೂತನ ರಾಜ್ಯಾಧ್ಯಕ್ಷರಿಗೆ ಶುಭ ಹಾರೈಸಿದ ಶಿವರಾಜ ಮುತ್ತಣ್ಣನವರ ಮತ್ತು ಟೀಮ್ – ರಾಜ್ಯಾಧ್ಯಕ್ಷರ ತವರೂರಿನಲ್ಲಿ ಭೇಟಿ ಯಾಗಿ ಶುಭಹಾರೈಸಿದ ಶಿವರಾಜ ಮುತ್ತಣ್ಣ ನವರ,ವಿಜಯಕುಮಾರ ಅಪ್ಪಾಜಿ,ನೇತ್ರತ್ವದಲ್ಲಿನ ಟೀಮ್ ಹೌದು ಬಿಜೆಪಿ ಯ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹುಬ್ಬಳ್ಳಿ ಯ ಬಿಜೆಪಿ ನಾಯಕರು ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಹೌದು ರಾಜ್ಯಾಧ್ಯಕ್ಷರಾಗಿ ಅಧಿಕಾರ ವನ್ನು ವಹಿಸಿಕೊಂಡಿರುವ ವಿಜಯೇಂದ್ರ ಅವರು ತವರೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ಭೇಟಿಯಾದ ಶಿವರಾಜ ಮುತ್ತಣ್ಣನವರ ನೇತ್ರತ್ವ ದಲ್ಲಿನ ಟೀಮ್ ಶುಭ ಹಾರೈಸಿದರು. ಶಿಕಾರಿಪುರ ದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭೇಟಿಯಾದ ನಾಯಕರು ಶುಭಾಶಯಗಳನ್ನು ತಿಳಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಸಾಂಪ್ರದಾಯಿಕವಾಗಿರುವ ವಿಶೇಷ ಕಂಬಳಿ ಯನ್ನು ನೀಡಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಇದೇ ವೇಳೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ನೂತನ ರಾಜ್ಯಾಧ್ಯಕ್ಷರಿಗೆ ಶುಭವನ್ನು ಹಾರೈಸಿದೆವು.ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಪ್ರಭು ನವಲಗುಂದ ಮಠ,
ಬಿಜೆಪಿ ಯುವ ಮುಖಂಡ ವಿಜಯ ಕುಮಾರ್ ಅಪ್ಪಾಜಿ,ನೂಲ್ವಿ ಚಂದ್ರಣ್ಣ ಗೋಕಾಕ್,ಸುಭಾಷ್ ಕಲ್ಲೂರ, ಡಾಕ್ಟರ್ ರವೀಂದ್ರ ಸೇರಿದಂತೆ ಹಲವ ರು ಉಪಸ್ಥಿತರಿದ್ದು ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಶಿಕಾರಿಪುರ…..