ವಿಜಯಪುರ –
ಸರ್ಕಾರದಿಂದ ಕೊಡುವ ದವಸ ಧಾನ್ಯವನ್ನು ಅಡುಗೆ ಸಹಾಯಕಿರು ಕಳ್ಳತನ ಮಾಡುತ್ತಿರುವ ಪ್ರಕರಣ ವೊಂದು ಜಿಲ್ಲೆಯ ಚಡಚಣ ತಾಲೂಕಿನ ಬರಡೊಲ ಗ್ರಾಮದಲ್ಲಿ ಜರುಗಿದೆ.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಸರ್ಕಾರದಿಂದ ಬರುವ ಬಿಸಿ ಊಟದ ದವಸ, ಧಾನ್ಯ, ಬೆಳೆ, ಮೊಟ್ಟೆ, ಹಾಲು, ತರಕಾರಿ, ಸೇರಿದಂತೆ ಎಲ್ಲವನ್ನೂ ಕಳ್ಳತನ ಮಾಡಿ ಅಡುಗೆ ಸಹಾಯಕಿ ಮೂಲಕ ಮಾರಾಟ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಶಾಲೆಯ ಮುಖ್ಯ ಶಿಕ್ಷಕನ ವಿರುದ್ಧ ಈ ಒಂದು ಗಂಭೀರ ಆರೋಪ ಕೇಳಿ ಬಂದಿದೆ.ಮಕ್ಕಳಿಗೆ ಅನ್ನ ಟೊಮಾಟೊ ಸಾರು ಮಿತಿಯಾಗಿ ಕೋಡುತ್ತಿದ್ದು, ಅರೆ ಹೊಟ್ಟಿ ಯಲ್ಲಿ ಊಟ ಮಾಡಿ ಬೇಸತ್ತು ಮಕ್ಕಳು ಗ್ರಾಮದ ಮುಖಂಡರ ಗಮನಕ್ಕೆ ತಂದಿದ್ದಾರೆ.
ಹೀಗಾಗಿ ಬರಡೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಶಾಲೆಗೆ ಬೇಟಿ ಕೊಟ್ಟು ಮಕ್ಕಳಿಂದ ಹೇಳಿಕೆ ಪಡೆದು ಶಾಲಾ ಶಿಕ್ಷಕರನ್ನು ತರಾಟೆ ತೆಗೆದುಕೊಂಡರು.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..