ಹುಬ್ಬಳ್ಳಿ –
ಲೆಕ್ಕಪತ್ರ ವಿಭಾಗದ ಸಿಂಗೋಟಿಯವರಿಗೆ ಒಲಿದು ಬಂತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ – ಪಾಲಿಕೆಯ ಆಯುಕ್ತರಿಂದ ಪ್ರಧಾನ ಗೌರವ…..ಕರ್ತವ್ಯ ನಿಷ್ಠೆಗೆ ಸಂದಿತು ಅತ್ಯುತ್ತಮ ಸೇವಾ ಪುರಸ್ಕಾರ ಗೌರವ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಲೆಕ್ಕಪತ್ರ ವಿಭಾಗದಲ್ಲಿ ಎರಡನೇ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಮ್ ಎಮ್ ಸಿಂಗೋಟಿಯವರಿಗೆ ಅತ್ಯುತ್ತಮ ಸೇವಾ ಪುರಸ್ಕಾರ ಗೌರವ ಪ್ರಶಸ್ತಿ ಒಲಿದು ಬಂದಿದೆ.ಪ್ರತಿ ವರ್ಷ ಗಣರಾಜ್ಯೋತ್ಸ ದಿನಾಚರಣೆಯ ದಿನದಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯಿಂದ ಕೊಡಮಾಡುವ ಈ ಒಂದು ಪ್ರಶಸ್ತಿಯನ್ನು ಸಿಂಗೋಟಿಯವರನ್ನು ಆಯ್ಕೆ ಮಾಡಿ ಪ್ರಧಾನ ಮಾಡಲಾಯಿತು.
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿಯ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭ ದಲ್ಲಿ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾ ಯಿತು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಯವರು ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಿ ದರು.ಈ ಒಂದು ಸಂದರ್ಭದಲ್ಲಿ ವಿಜಯಕುಮಾರ್ ,CAO ವಿಶ್ವನಾಥ, ಮೇಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಳೆದ 13 ವರ್ಷಗಳಿಂದ ಪಾಲಿಕೆಯ ಲೆಕ್ಕ ಪತ್ರ ವಿಭಾಗದಲ್ಲಿ ಸಿಂಗೋಟಿಯವರು ಎರಡನೇಯ ದರ್ಜೆ ಸಹಾಯಕರಾಗಿ ಕರ್ತವ್ಯವನ್ನು ಮಾಡುತ್ತಿದ್ದು ಇವರ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಇವರಿಗೆ ಈ ಒಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಇವರ ತಂದೆ ಕೂಡಾ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯಲ್ಲಿ ಚಾಲಕರಾಗಿದ್ದು ಅವರು ಕೂಡಾ ತಮ್ಮದೇ ಯಾದ ಕರ್ತವ್ಯದ ಮೂಲಕ ಹೆಸರನ್ನು ಮಾಡಿದ್ದರು
ಸಧ್ಯ ಪಾಲಿಕೆಯಲ್ಲಿ ಸಿಂಗೋಟಿಯವರು ಲೆಕ್ಕ ಪತ್ರ ವಿಭಾಗದಲ್ಲಿ ನಿಷ್ಠಾವಂತ ಅಧಿಕಾರಿಯಾಗಿ ಕರ್ತವ್ಯ ವನ್ನು ನಿರ್ವಹಿಸುತ್ತಿದ್ದು ಸೇವಾ ರತ್ನ ಪ್ರಶಸ್ತಿ ಪಡೆದು ಕೊಂಡು ಇವರಿಗೆ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ, ಸೇರಿದಂತೆ ಸಿಬ್ಬಂದಿಗಳಾದ ಮುಕಂದ ಕಟ್ಟಿ,ಗುರುನಾಥ ತಾಳಿಕೋಟಿ,ಎಸ್ ಡಿ, ಸುಂಕದ,ಸುನೀಲ ಚೌಹಾನ್,ಟಿ ಎಲ್ ಖಾನಾಪೂರ,ಸೇರಿದಂತೆ ಹಲವು ಅಧಿಕಾರಿಗಳು ಸಿಬ್ಬಂದಿಗಳು ಎಮ್ ಎಮ್ ಸಿಂಗೋಟಿಯವರಿಗೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ….