ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ – ಅರಮನೆ ಮೈದಾನದಲ್ಲಿ ನಡೆಯಲಿದೆ ಮಹಾ ಸಮ್ಮೇಳನ ಕಾರ್ಯಕ್ರಮ.
ಫೆಬ್ರುವರಿ 28 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆ ಯಲಿದೆ.ಈಗಾಗಲೇ ಈ ಒಂದು ಮಹಾ ಕಾರ್ಯಕ್ರಮದ ಕುರಿತಂತೆ ಎಲ್ಲಾ ಸಿದ್ದತೆಗಳು ನಡೆದಿವೆ
ಈ ನಡುವೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ.ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಸೇರಿದಂತೆ ಹಲವು ಗಣ್ಯರು ಈ ಒಂದು ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿ ದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರು ವಹಿಸಿಕೊಳ್ಳಲಿದ್ದು ಇವ ರೊಂದಿಗೆ ಜನಪ್ರತಿನಿಧಿಗಳು ಗಣ್ಯರು ಸಚಿವರು ಶಾಸಕರು ಸೇರಿದಂತೆ ಹಲವರು ಪಾಲ್ಗೊಳ್ಳಲಿ ದ್ದಾರೆ.
ಇನ್ನೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯ ಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸರ್ಕಾರಿ ನೌಕರರು ಪಾಲ್ಗೊಳ್ಳಿದ್ದು ಈಗಾಗಲೇ ಮಹಾಸಮ್ಮೇಳನಕ್ಕೆ ಸಿದ್ದತೆಗಳು ಅದ್ದೂರಿಯಾಗಿ ನಡೆದಿವೆ.
ಇನ್ನೂ ಪ್ರಮುಖವಾಗಿ ಈ ಒಂದು ಸಮ್ಮೇಳನ ದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಪಾಲ್ಗೊಳ್ಳಲಿದ್ದು 7ನೇ ವೇತನ ಹಳೆ ಪಿಂಚಣಿ ಸೌಲಭ್ಯ ಸೇರಿದಂತೆ ಹಲವು ಸರ್ಕಾರಿ ನೌಕರರ ಬೇಡಿಕೆಗಳನ್ನು ಘೋಷಣೆ ಮಾಡಿ ಸಿಹಿ ಸುದ್ದಿ ಯನ್ನು ನೀಡಲಿದ್ದಾರೆ ಎಂಬೊದು ತೀವ್ರ ಕುತೂಹಲ ಕೆರಳಿಸಿದ್ದು ಏನೇನು ಸಿಗಲಿದೆ ಸರ್ಕಾರಿ ನೌಕರರಿಗೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..