ಬೆಂಗಳೂರು –
ಹೌದು ರಾಜ್ಯದ ಅನುದಾನಿತ ಪ್ರೌಢ ಶಾಲಾ ಶಿಕ್ಷಕ’ರಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ವೊಂದನ್ನು ನೀಡಿದ್ದು ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದವರಿಗೆ ಗಳಿಕೆ ರಜೆ ಮಂಜೂರು ಮಾಡಿ ಆದೇಶವನ್ನು ಮಾಡಿದೆ
ಅನುದಾನಿತ ಪ್ರೌಢ ಶಾಲಾ ಶಿಕ್ಷಕರು, ಸಿಬ್ಬಂದಿ ಯವರು ರಜಾ ಅವಧಿಯಲ್ಲಿ ಕೋವಿಡ್ 19 ಕಾರ್ಯಕ್ರಮದ ಕಾರಣ ಸಮೀಕ್ಷೆ, ನಿರ್ವಹಣೆ ಕರ್ತವ್ಯ ನಿರ್ವಹಿಸಿರುವವರಿಗೆ ಗಳಿಕೆ ರಜೆ ಮಂಜೂರು ಮಾಡಿ, ಶಿಕ್ಷಣ ಇಲಾಖೆ ಆದೇಶಿಸಿದೆ
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು ಅನುದಾ ನಿತ ಪ್ರೌಢಶಾಲಾ ಸಿಬ್ಬಂದಿಯವರು ರಜಾ ಅವಧಿ ಯಲ್ಲಿ ಕೋವಿಡ್-19 ಕಾರ್ಯದಲ್ಲಿ ಸಮೀಕ್ಷೆ, ನಿರ್ವಹಣೆ ಕರ್ತವ್ಯ ನಿರ್ವಹಿಸಿರುವ ಅವಧಿಗೆ ಗಳಿಕೆ ರಜೆ ನೀಡುವ ಕುರಿತು ಮಾರ್ಗದರ್ಶನ, ನಿರ್ದೇಶ ನೀಡಲು ಸರ್ಕಾರಕ್ಕೆ ಪ್ರಸ್ತಾಪನೆಯನ್ನು ಸಲ್ಲಿಸಲಾಗಿತ್ತು
ರಾಜ್ಯ ಸರ್ಕಾರವು ಅನುದಾನಿತ ಪ್ರೌಢ ಶಾಲಾ ಸಿಬ್ಬಂದಿಯವರು ರಜೆ ಅವಧಿಯಲ್ಲಿ ಕೋವಿಡ್ ಕಾರ್ಯಕ್ರಮದಲ್ಲಿ ಸಮೀಕ್ಷೆ ಮಾಡಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಖಚಿತಪಡಿಸಿಕೊಂಡು, ಹೆಚ್ಚುವರಿ ಗಳಿಕೆ ರಜೆ ಜಮೆಗೆ ಅರ್ಹರಾಗುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಗಳಿಕೆ ರಜೆ ಮಂಜೂರು ಮಾಡಲು ಕ್ರಮವಹಿಸುವಂತೆ ನಿರ್ದೇಶಿಲಾಗಿದೆ.
ಈ ಹಿನ್ನಲೆಯಲ್ಲಿ ಅನುದಾನಿತ ಪ್ರೌಢ ಶಾಲಾ ಶಿಕ್ಷಕರು ಸಿಬ್ಬಂದಿಗಳು ವಾಸ್ತವದಲ್ಲಿ ಬಿಡುವಿನ ವೇಳೆಯಲ್ಲಿ ಇಂತಹ ಕರ್ತವ್ಯಕ್ಕೆ ಸಕ್ಷಮ ಪ್ರಾಧಿಕಾ ರದಿಂದ ನಿಯೋಜನೆಗೊಂಡಿರುವ ಬಗ್ಗೆ ಹಾಗೂ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಪ್ರಮಾಣ ಪತ್ರ ಪಡೆದಿರುವವರು
ಆಡಳಿತ ಮಂಡಳಿಗೆ ಸಲ್ಲಿಸಿ,ಆಡಳಿತ ಮಂಡಳಿ ಯು ರಜಾ ಮಂಜೂರಾತಿ ಮಾಡುವ ಬಗ್ಗೆ ಠರಾವು ಪಾಸು ಮಾಡಿ,ಸಲ್ಲಿಸಿದಲ್ಲಿ,ಅಂತಹ ಅರ್ಜಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀ ಲಿಸಿ,ಗಳಿಕೆ ರಜೆಯನ್ನು ಮಂಜೂರು ಮಾಡಿ, ಸೇವಾ ಪುಸ್ತಕದಲ್ಲಿ ದಾಖಲಸಲು ಸಂಬಂಧಿಸಿದ ಆಡಳಿತ ಮಂಡಳಿಗೆ ಅನುಮತಿ ನೀಡಲು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..