ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಖ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗದವನ್ನು ರಚನೆ ಮಾಡ ಲಾಗಿದೆ.ರಾಜ್ಯ ಸರ್ಕಾರ ಈಗಾಗಲೇ ಈ ಕುರಿತಂತೆ ಸಮಿತಿಯನ್ನು ರಚನೆ ಮಾಡಿದ್ದು ಸಮಿತಿಗೆ ಬೇಕಾದ ಅವಶ್ಯಕವಾದ ಕಚೇರಿಗೆ ಸೇರಿದಂತೆ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದು
ಇತ್ತ ಸಾಲು ಸಾಲಾಗಿ ಬರುವ ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಸಮಿತಿಯೂ ಕೂಡಾ ಕಾರ್ಯ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದು ಇದರ ಬೆನ್ನಲ್ಲೇ ಇತ್ತ ರಾಜ್ಯದ ಸರ್ಕಾರಿ ನೌಕರರ ಧ್ವನಿಯಾಗಿ ಕೆಲಸವನ್ನು ಮಾಡುತ್ತಿರುವ ರಾಜ್ಯದ ಸರ್ಕಾರಿ ನೌಕರರ ಸಂಘವು ಕೂಡಾ ರಾಜ್ಯದ ಸರ್ಕಾರಿ ನೌಕರರ ಕುರಿತಂತೆ ಕಂಪ್ಲೀಟ್ ಮಾಹಿತಿ ಯನ್ನು ಕಲೆಹಾಕಿ ವರದಿಯನ್ನು ಸಿದ್ದ ಮಾಡಿದೆ.
ಹೌದು ಕಳೆದ ಕೆಲ ದಿನಗಳಿಂದ ಈ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘವು ಕೂಡಾ ಈ ಕುರಿತಂತೆ ಕಂಪ್ಲೀಟ್ ಎಲ್ಲಾ ದಾಖಲೆಗಳೊಂದಿಗೆ ಮಾಹಿತಿಯನ್ನು ಪಡೆದುಕೊಂಡು ವರದಿಯನ್ನು ಸಿದ್ದತೆ ಮಾಡಿದ್ದು 7ನೇ ವೇತನ ಆಯೋಗದ ಅಧ್ಯಕ್ಷರಿಗೆ ಸಮತಿಗೆ ಈ ಒಂದು ವರದಿ ಸಲ್ಲಿಕೆ ಯಾಗಲಿದೆ.ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅವಿರತ ವಾಗಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಇಂದು ವೇತನ ಸಮಿತಿ ಮುಂದೆ ವರದಿ ಮಂಡಿಸಿ ಸಲ್ಲಿಸ ಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಹೆಮ್ಮೆಯ ತಂಡವು ಸಿದ್ದವಾಗಿದ್ದ ಕಂಡು ಬಂದಿತು
ಇದರೊಂದಿಗೆ ಈ ಒಂದು ಸಂಪೂರ್ಣವಾದ ಮಾಹಿತಿಯನ್ನು ಒಳಗೊಂಡಿರುವ ವರದಿ ಸಲ್ಲಿಕೆ ಯಾಗಲಿದ್ದು ಇದನ್ನು ಪರಿಶೀಲನೆ ಮಾಡಿದ ನಂತರ ಸಮಿತಿಯೂ ತಾವು ಮಾಡುತ್ತಿರುವ ವರದಿಯನ್ನು ಸಿದ್ದತೆ ಮಾಡಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..