ಧಾರವಾಡ –
ಲೆಕ್ಕಪತ್ರ ವಿಭಾಗದ ಅಧೀಕ್ಷಕ ಶೌಕತಲಿ ಸುಂಕದ ರಿಗೆ ಅಭಿನಂದನಾ ಗೌರವ – ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಸುಂಕದ ಅವರಿಗೆ ಚುನಾವಣಾ ಆಯೋಗದಿಂದ ಶ್ಲಾಘನೀಯ ಅಭಿನಂದನೆ ಗೌರವ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿಯ ಲೆಕ್ಕಪತ್ರ ವಿಭಾಗದಲ್ಲಿ ಅಧೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶೌಕತಲಿ ಸುಂಕದ ಅವರಿಗೆ ಚುನಾವಣಾ ಆಯೋಗವು ಶ್ಲಾಘನೀಯ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ.ಹೌದು ಕಳೆದ ಚುನಾವಣೆ ಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿಯನ್ನುಂಟು ಮಾಡಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಇವರನ್ನು ಚುನಾವಣಾ ಆಯೋಗವು ಮತ್ತು ಜಿಲ್ಲಾಡಳಿತವು ಸುಂಕದ ಅವರನ್ನು ಅಭಿನಂದಿಸಿ ಗೌರವಿಸಿದೆ.
ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೌಕತಲಿ ಸುಂಕದ ಅವರಿಗೆ ನ್ಯಾಯಮೂರ್ತಿ ಪರಶುರಾಮ ದೊಡಮನಿಯವರು ಈ ಒಂದು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿ ದರು.ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಸುಂಕದ ಅವರನ್ನು ಅಭಿನಂದಿಸಿ ಗೌರವಿಸಲಾ ಯಿತು.
ತಮ್ಮ ಕರ್ತವ್ಯದೊಂದಿಗೆ ಚುನಾವಣೆಯಲ್ಲಿ ಒಳ್ಳೇಯ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಪರಿಗಣಿಸಿ ಈ ಒಂದು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿ ಶುಭಹಾರೈಸಲಾಯಿತು.ಇನ್ನೂ ಈ ಒಂದು ಗೌರವಕ್ಕೆ ಪಾತ್ರರಾದ ಶೌಕತಲಿ ಸುಂಕದ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ,ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ,ಉಪ ಆಯುಕ್ತರಾದ ವಿಜಯಕುಮಾರ,ಲೆಕ್ಕ ಪತ್ರವಿಭಾಗದ ಸಿಬ್ಬಂದಿಗಳಾದ ಗುರುನಾಥ ತಾಳಿಕೋಟಿ,ಎಮ್ ಎ ಸಿಂಗೋಟಿ,ಮುಕುಂದ ಕಟ್ಟಿ,ಚೌಹಾನ್,ಉಮೇಶ ಸವಣೂರು ಸೇರಿದಂತೆ ಹಲವರು ಅಭಿನಂದಿಸಿ ಶುಭಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..