ಬೆಂಗಳೂರು –
ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ವಿಚಾರ ಗಂಭೀರವಾಗುತ್ತಿದ್ದು ಕಗ್ಗಂಟ್ಟಾಗುತ್ತಿದೆ. ನೂರೆಂಟು ಕಾರಣಗಳಿಂದಾಗಿ ಈ ಒಂದು ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿಲ್ಲ ಯಾರಿಗೂ ಯಾವ ಇಲಾಖೆಗೆ ಇಲ್ಲದ ಈ ಒಂದು ಅವೈಜ್ಞಾನಿ ಕವಾದ ವರ್ಗಾವಣೆಯಿಂದಾಗಿ ನಾಡಿನ ಅದೇಷ್ಟೋ ಶಿಕ್ಷಕರು ಬೇಸತ್ತಿದ್ದು ಇನ್ನೂ ಇತ್ತ ಇನ್ನೇನು ಕೆಲವೆ ದಿನಗಳು ಕಳೆದರೆ ಸಾಕು ಚುನಾವಣೆ ಘೋಷಣೆಯಾಗಲಿದ್ದು ಹೀಗಾಗಿ ಏನು ಮಾಡಬೇಕು ಎಂಬ ಚಿಂತೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ.
ಇದೇಲ್ಲದರ ನಡುವೆ ಇತ್ತ ವರ್ಗಾವಣೆ ನಿರೀಕ್ಷೆ ಯಲ್ಲಿರು ಶಿಕ್ಷಕರು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರನ್ನು ಭೇಟಿಯಾಗಲು ನಿರ್ಧಾರವನ್ನು ಕೈಗೊಂಡಿ ದ್ದಾರೆ.ಶಹಾಪೂರ ತಾಲ್ಲೂಕಿನ ಭೀಮರಾಯನ ಗುಡಿಯಲ್ಲಿ ಮಾರ್ಚ್ 13 ರಂದು ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ವನ್ನು ಹಮ್ಮಿಕೊಳ್ಳಲಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ ಷಡಾಕ್ಷರಿ ಯವರು ಪಾಲ್ಗೊಳ್ಳಲಿದ್ದು ಹೀಗಾಗಿ ವರ್ಗಾವಣೆಯ ನಿರೀಕ್ಷೆ ಯಲ್ಲಿರುವ ಶಿಕ್ಷಕರು ನಾಳೆ ಷಡಾಕ್ಷರಿ ಅವರನ್ನು ಭೇಟಿಯಾಗಿ ವರ್ಗಾವಣೆ ವಿಚಾರ ಕುರಿತಂತೆ ಗಂಭೀರವಾಗಿ ಚರ್ಚೆಯನ್ನು ಮಾಡಿ ಒಂದು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಿದ್ದು ಈ ಒಂದು ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಆಗಮಿಸಿ ಶಕ್ತಿ ತುಂಬುವಂತೆ ಶಿಕ್ಷಕರು ವಿನಂತಿಯನ್ನು ಮಾಡಿಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಹಾಪೂರ…..