This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಿದ ಶಿಕ್ಷಕರು – ರಾಜ್ಯಕ್ಕೆ ಮಾದರಿಯಾದ ದೇವರಭೂಪುರ ಗ್ರಾಮದ ಶಿಕ್ಷಕರು…..

ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಿದ ಶಿಕ್ಷಕರು – ರಾಜ್ಯಕ್ಕೆ ಮಾದರಿಯಾದ ದೇವರಭೂಪುರ ಗ್ರಾಮದ ಶಿಕ್ಷಕರು…..
WhatsApp Group Join Now
Telegram Group Join Now

ರಾಯಚೂರು

ಹೌದು ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಶಿಕ್ಷಕರೆಲ್ಲ ಸೇರಿಕೊಂಡು ತಮ್ಮ ಸ್ವಂತ ಹಣದಲ್ಲಿ ಟೈ ಮತ್ತು ಬೆಲ್ಟ್ ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಂತೆ ಮಾಡಿದ್ದಾರೆ.ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಶೂ ಮತ್ತು ಮದ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಇದರೊಟ್ಟಿಗೆ ಮಕ್ಕಳು ಇನ್ನೂ ಶಿಸ್ತಿನಿಂದ ಕಾಣಿಸಬೇಕು ಎಂದು ಇಲ್ಲೊಂದು ಶಾಲೆಯ ಶಿಕ್ಷಕರೆಲ್ಲ ಸೇರಿ ಸ್ವಂತ ಹಣದಲ್ಲಿ ಟೈ ಮತ್ತು ಬೆಲ್ಟ್ ಗಳನ್ನು ವಿತರಣೆ ಮಾಡಿದ್ದಾರೆ.

ಬೆಲ್ಟ್‌ಗೆ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಭೂಪುರ ಎಂದು ಹೆಸರು ಹಾಕಿ ಮಕ್ಕಳಿಗೆ ವಿತರಿಸಿದ್ದಾರೆ ಈ ವೇಳೆ ಶಾಲೆಯ ಹಳೆಯ ವಿದ್ಯಾರ್ಥಿ ಗಳೇ ಸೇರಿ ರಚಿಸಿಕೊಂಡಿರುವ ಹಳೇ ಬೇರು ಹೊಸ ಚಿಗುರು ಸಂಘದವರು ಉಪಸ್ಥಿತರಿದ್ದು ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

1 ರಿಂದ 8 ನೇ ತರಗತಿ ವರೆಗೆ ಒಟ್ಟು 270 ಮಕ್ಕಳು ಓದುತ್ತಿದ್ದಾರೆ. ಶಿಕ್ಷಕರ ಕೊರತೆ, ಪಾಠ ಪಠ್ಯಗಳ ಬೋಧನೆಯಲ್ಲಿ ವ್ಯತ್ಯಾಸ, ಅಶಿಸ್ತು, ಗ್ರಾಮಸ್ಥರ ಅಸಹಕಾರದಿಂದ ಶಾಲೆಯ ದಾಖಲಾತಿ ಸಂಖ್ಯೆಯಲ್ಲಿ ಮಾತ್ರ 270 ಇದ್ದರೂ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಮಾತ್ರ ಕೇವಲ 60-70 ಇತ್ತು.ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟು ಹಳೇ ಬೇರು ಹೊಸ ಚಿಗುರು ಎಂಬ ಸಂಘ ರಚಿಸಿಕೊಂಡು ಮುನ್ನುಡಿ ಬರೆದರು.

ಶಿಕ್ಷಕರೂ ಅದಕ್ಕೆ ಕೈಜೋಡಿಸಿದರು. ಪ್ರತಿಫಲವಾಗಿ ಈಗ ಮಕ್ಕಳ ಸಂಖ್ಯೆ ದ್ವಿಗುಣವಾಗಿದೆ. ಪ್ರತಿದಿನ 130 ರಿಂದ 140 ಮಕ್ಕಳು ಶಾಲೆಗೆ ಬಂದು ಅಕ್ಷರಾಭ್ಯಾಸ ಮಾಡುತ್ತಿ ದ್ದಾರೆ. ಆದರೆ ಈ ಸಂಖ್ಯೆಯನ್ನು 270 ಕ್ಕೆ ತಲುಪಿಸು ವುದು ಸವಾಲಿನ ಕೆಲಸವಾಗಿದ್ದು, ಅದರೆಡೆಗೆ ಎಲ್ಲರ ಚಿತ್ತ ನೆಟ್ಟಿದೆ.

‘ನಮ್ಮ ಶಾಲೆಯ ಮಕ್ಕಳಲ್ಲೂ ಶಿಸ್ತು ಎದ್ದುಕಾಣಬೇಕು. ಮಕ್ಕಳು ನಿತ್ಯ ಶಾಲೆಗೆ ಬರುವಂತೆ ಮಾಡಲು ಹೊಸ ದೊಂದು ಯೋಜನೆ ರೂಪಿಸಿ ಶಿಕ್ಷಕರೆಲ್ಲ ಸೇರಿ ಮಕ್ಕಳಿಗೆ ಟೈ ಮತ್ತು ಬೆಲ್ಟ್ ಗಳನ್ನು ಖರೀದಿಸಿ ಕೊಟ್ಟಿದ್ದೇವೆ ಎಂದು ಶಾಲೆಯ ಮುಖ್ಯಶಿಕ್ಷಕರು ತಿಳಿಸಿದ್ದು ದೇವರಭೂಪುರದ ಸರಕಾರಿ ಶಾಲೆಯಲ್ಲಿ ಕಲಿತ ಸುಮಾರು 200 ಹಳೆಯ ವಿದ್ಯಾರ್ಥಿಗಳು ಸೇರಿ ರಚಿಸಿಕೊಂಡಿರುವ ಸಂಘದ ಮೂಲಕ ₹2 ಲಕ್ಷ ಸೇರಿಸಿ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.

ಮಕ್ಕಳಿಗೆ ಮೊದಲು ಸೌಕರ್ಯಗಳನ್ನು ಒದಗಿಸಿಕೊ ಡುವ ನಿಟ್ಟಿನಿಂದ ತಾವು ಸಂಗ್ರಹಿಸಿದ ಹಣದ ಜತೆಗೆ ಗ್ರಾಮ ಪಂಚಾಯಿತಿಯ ಹಲವು ಯೋಜನೆಗಳ ಉಪಯೋಗ ಪಡೆದು ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಹೈಟೆಕ್ ಶೌಚಾಲಯ, ಉತ್ತಮವಾದ ಕ್ರೀಡಾಂಗಣ, ಹಾಗೂ ಕೆ.ಕೆ.ಆರ್.ಡಿ.ಬಿ ಅನುದಾನ ಬಳಕೆ ಮಾಡಿಕೊಂಡು ಸುಸಜ್ಜಿತ ತರಗತಿ ಕೋಣೆಗಳ ನಿರ್ಮಾಣಕ್ಕೂ ಮುಂದಾಗಿದ್ದಾರೆ.

ಟೈ ಹಾಗೂ ಬೆಲ್ಟ್‌ ವಿತರಣೆ ಸರಳ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ವಿಶ್ವನಾಥ ಹೂಗಾರ, ನಾಗರಾಜ ಬಡಿಗೇರ, ಯಂಕನಗೌಡ, ಈರಣ್ಣ ಶೆಟ್ಟಿ, ರಮೇಶ ಭಜಂತ್ರಿ, ಮಂಜುನಾಥ ನಾಯಕ, ದುರುಗಣ್ಣ ನಾಯಕ, ದ್ಯಾಮಣ್ಣ, ಶಾಲೆಯ ಮುಖ್ಯೋಪಾಧ್ಯಾಯ ದಾವಲಸಾಬ, ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ರಾಯಚೂರು…..


Google News

 

 

WhatsApp Group Join Now
Telegram Group Join Now
Suddi Sante Desk