ಬೆಂಗಳೂರು –
BEO ಗಳಿಗೆ ಮಹತ್ವದ ಜವಾಬ್ದಾರಿ ನೀಡಿದ ಇಲಾಖೆಯ ಆಯುಕ್ತರು – ಈ ಕೂಡಲೇ ವರದಿ ಸಿದ್ದತೆ ಮಾಡಿ ಪಟ್ಟಿ ಬಿಡುಗಡೆ ಮಾಡುವಂತೆ ಸೂಚನೆ ಹೌದು ಅನಧಿಕೃತ ಅಧಿಕೃತ ವಾಗಿ ಇರುವ ಶಾಲೆಗಳ ಪಟ್ಟಿ ಸಿದ್ದತೆ ಮಾಡಿ ಅವು ಗಳನ್ನು ಘೋಷಣೆ ಮಾಡುವಂತೆ ರಾಜ್ಯದ ಬಿಇಓ ಗಳಿಗೆ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ ಹೌದು
ತಮ್ಮ ವ್ಯಾಪ್ತಿಯಲ್ಲಿರುವ ಅಧಿಕೃತ ಶಾಲೆಗಳ ಮಾಹಿತಿ ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗ ಳಿಗೆ ಶಾಲಾ ಶಿಕ್ಷಣ ಆಯುಕ್ತೆ ಬಿ.ಬಿ. ಕಾವೇರಿ ಸೂಚನೆ ನೀಡಿದ್ದಾರೆ.ಅಧಿಕೃತ ಶಾಲೆಗಳ ಮಾಹಿತಿ ಯನ್ನು ತಮ್ಮ ಕಚೇರಿಯ ಆವರಣದಲ್ಲಿ ಸಾರ್ವ ಜನಿಕರಿಗೆ ಗೋಚರವಾಗುವಂತೆ ಶಾಲೆಯ ಹೆಸರು,
ಮಾಧ್ಯಮ,ಪಠ್ಯಕ್ರಮ ಮತ್ತು ವಿಳಾಸ ಸಹಿತ ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಶಾಲಾ ನೋಂದಣಿ, ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗ ಳನ್ನು ನಿಯಮಾನುಸಾರ ಮುಚ್ಚಬೇಕು ನೊಂದಣಿ ಇಲ್ಲದೆ ಅನಧಿಕೃತವಾಗಿ ಉನ್ನತೀಕ ರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳಿಗೆ ನೋಂದಣಿ ಪಡೆಯಲು 45 ದಿನಗಳ ಕಾಲಾವ ಕಾಶ ನೀಡಬೇಕು
ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಕೇಂದ್ರ ಪಠ್ಯಕ್ರಮದಲ್ಲಿ ಅನಧಿಕೃತವಾಗಿ ಬೋಧನೆ ಮಾಡುತ್ತಿರುವ ಶಾಲೆಗಳಿಗೆ ಅನುಮತಿ ಪಡೆದ ಪಠ್ಯಕ್ರಮದಲ್ಲಿ ಮಾತ್ರ ಬೋಧಿಸುವಂತೆ ಸೂಚಿಸಬೇಕು ಅನಧಿಕೃತವಾಗಿ ಬೇರೆ ಮಾಧ್ಯಮ ದಲ್ಲಿ ಬೋಧಿಸುತ್ತಿರುವ ಶಾಲೆಗಳಿಗೆ 45 ದಿನಗಳ ಲ್ಲಿ ಅನುಮತಿ ಪಡೆಯಲು ಸೂಚಿಸಬೇಕು ಎಂದು ಸೂಚನೆ ನೀಡಲಾಗಿದೆ.
ಅನಧಿಕೃತವಾಗಿ ಹೆಚ್ಚುವರಿ ತರಗತಿಗಳನ್ನು ಹೊಂದಿರುವ ಶಾಲೆಗಳು 45 ದಿನದೊಳಗೆ ಅನುಮತಿ ಪಡೆಯಬೇಕು. ಇಲಾಖೆಯ ಪೂರ್ವಾ ನುಮತಿಯಿಲ್ಲದೆ ಸ್ಥಳಾಂತರ ಅಥವಾ ಹಸ್ತಾಂತರ ಗೊಂಡ ಶಾಲೆಗಳು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದುಕೊಳ್ಳ. ಬೇಕು ಎಂದು ಸೂಚನೆ ನೀಡಲಾಗಿದೆ
ಕಳೆದ ಶೈಕ್ಷಣಿಕ ವರ್ಷದಲ್ಲಿಯೂ ಇಂತಹದ್ದೆ ನಿಯಮಗಳನ್ನು ಸೂಚಿಸಿ 1,600 ಶಾಲೆಗಳು ಅನಧಿಕೃತ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿತ್ತು ಆದರೆ ಆ ಅನಧಿಕೃತ ಶಾಲೆಗಳು ಯಾವುದು ಎಂಬ ಮಾಹಿತಿಯನ್ನು ಇಲಾಖೆ ಇದುವರೆಗೆ ಬಹಿರಂಗಪಡಿಸಿಲ್ಲ ಹೀಗಾಗಿ ಸಧ್ಯ ಮತ್ತೆ ಈ ಒಂದು ವಿಚಾರ ಕುರಿತು ಆಯುಕ್ತರು ಸೂಚನೆ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..