ನವದೆಹಲಿ –
13 ಸಾವಿರ ಶಿಕ್ಷಕರ ನೇಮಕಾತಿಗೆ ತಡೆಯಾಜ್ಞೆ ನೀಡಿದ ನ್ಯಾಯಾಲಯ – ಮತ್ತೆ ಎದುರಾಯಿತು ಶಿಕ್ಷಕರ ನೇಮಕಾತಿಗೆ ವಿಘ್ನ ಹೌದು
ಈ ಹಿಂದೆ ಕರೆಯಲಾಗಿದ್ದು 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾ ಲಯ ತಡೆಯಾಜ್ಞೆಯನ್ನು ನೀಡಿದೆ.ಹೈಕೋರ್ಟ್ ಆದೇಶಕ್ಕೆ ಸಧ್ಯ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶವನ್ನು ಮಾಡಿದೆ.ಇದರೊಂದಿಗೆ 13,000ಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮತ್ತೆ ವಿಘ್ನ ಎದುರಾಂ ತಾಗಿದೆ.
ಹೈಕೋರ್ಟ್ ನಿಂದ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ನೀಡಲಾಗಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು ಬಾಕಿ ನೇಮಕಾತಿ ಪತ್ರ ವಿತರಿಸದಂತೆ ಸೂಚನೆ ನೀಡಲಾಗಿದೆ.ಹೈಕೋರ್ಟ್ ನಿರ್ದೇಶನದ ಅನ್ವಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಈಗಾಗಲೇ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ ಅಭ್ಯರ್ಥಿ ಗಳಿಗೆ ನೇಮಕಾತಿ ಪತ್ರ ನೀಡಿದ್ದು
ಅವರು ಕೆಲಸಕ್ಕೆ ಹಾಜರಾಗಿದ್ದಾರೆ.ಇನ್ನು ಶೇಕಡ 20ರಷ್ಟು ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ನೇಮ ಕಾತಿ ಪತ್ರ ವಿತರಿಸಬೇಕಿದೆ.ಅಷ್ಟರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸ ದಂತೆ ಇಲಾಖೆಯಿಂದ ಡಿಡಿಪಿಐ ಗಳಿಗೆ ಮೌಖಿಕ ಆದೇಶ ನೀಡಲಾಗಿದೆ.
2023ರ ಅಕ್ಟೋಬರ್ 12ರಂದು ಹೈಕೋರ್ಟ್ ವಿಭಾಗೀ ಪೀಠ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಆದೇಶ ನೀಡಿದೆ.ಹೈಕೋರ್ಟ್ ವಿಭಾಗಿಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡದೆ ಕೇವಲ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಸರ್ಕಾರಕ್ಕೆ ಅವಕಾಶ ನೀಡಿತ್ತು
ಅದನ್ನು ಪ್ರಶ್ನಿಸಿ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದು ಮೇಲ್ಮ ನವಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..