ಬೆಂಗಳೂರು –
7ನೇ ವೇತನ ಆಯೋಗದ ಅನುಷ್ಠಾನದ ಕುರಿತು ರಾಜ್ಯದ ಸರ್ಕಾರಿ ನೌಕರರು ಸಂಘಟನೆ ರಾಜ್ಯದ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿ ಯಾಗಿ ಅನುಷ್ಠಾನಕ್ಕೆ ಒತ್ತಾಯ ಮಾಡಿದರು ಹೌದು ಈಗಾಗಲೇ ಈ ಕುರಿತು ಆಯೋಗವು ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಯನ್ನು ಮಾಡಿದ್ದು ಹೀಗಾಗಿ ಈ ಕುರಿತು ಭೇಟಿ ಯಾಗಿ ಕೂಡಲೇ ಅನುಷ್ಠಾನಕ್ಕೆ ಆಗ್ರಹ ಮಾಡಿದರು
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ಸಿ ಎಸ್ ಷಡಕ್ಷರಿ ರವರ ನೇತೃತ್ವದಲ್ಲಿ ಸಂಘದ ನಿಯೋಗವು ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಪಿ.ಸಿ. ಜಾಫರ್ ರವರನ್ನು ಭೇಟಿ ಮಾಡಿದರು. ವರದಿ ಜಾರಿಗೆ ತರುವ ಕುರಿತು ಚರ್ಚೆಯನ್ನು ಮಾಡಿದರು
ಈ ಸಂದರ್ಭದಲ್ಲಿ 7ನೇ ವೇತನ ಆಯೋಗದ ವರದಿ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿದ್ದು ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನವನ್ನು ಶೀಘ್ರದಲ್ಲೇ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾದ ರಮೇಶ್ ರವರು, ಕೇಂದ್ರ ಸಂಘದ ಪದಾಧಿಕಾರಿ ಗಳಾದ ವೆಂಕಟೇಶಯ್ಯ, ಶ್ರೀನಿವಾಸ್ ತಿಮ್ಮೇಗೌ ಡರವರು, ಎಂ.ಬಿ ಬಳ್ಳಾರಿರವರು, ಎಂ.ವಿ. ರುದ್ರಪ್ಪ, ಸದಾನಂದ್ , ಮೋಹನ್ ಕುಮಾರ , ಹರ್ಷ, ದಿನೇಶ್ , ಸಿದ್ದೇಶ್ , ಗಿರಿಗೌಡ ಹಾಗೂ ರಾಮನಗರ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು*
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..