This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯದಲ್ಲಿ NEP ರದ್ದು ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ DKC – ನಮ್ಮ ಶಿಕ್ಷಣ ರಾಷ್ಟ್ರದಲ್ಲಿ ಉತ್ತಮವಾಗಿದೆ ಎಂದರು ಉಪ ಮುಖ್ಯಮಂತ್ರಿ…..

WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದಲ್ಲಿ NEP ರದ್ದು ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ DKC – ನಮ್ಮ ಶಿಕ್ಷಣ ರಾಷ್ಟ್ರದಲ್ಲಿ ಉತ್ತಮವಾಗಿದೆ ಎಂದರು ಉಪ ಮುಖ್ಯಮಂತ್ರಿ
ಹೌದು  ರಾಜ್ಯದಲ್ಲಿ ಎನ್ ಇಪಿ ರದ್ದು ಮಾಡುತ್ತಿದ್ದೇ ವೆ.ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು

ಎನ್ ಇಪಿ ರದ್ದು ಕುರಿತ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಇವತ್ತು ಶಿಕ್ಷಣ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ.ಎನ್ ಇಪಿ ಸಾಧಕ-ಬಾಧಕದ ಬಗ್ಗೆ ಚರ್ಚೆ ಆಗಿದೆ. ನಮ್ಮ ಶಿಕ್ಷಣ ರಾಷ್ಟ್ರದಲ್ಲಿ ಉತ್ತಮವಾಗಿದೆ ಅನೇಕ ಸಮಸ್ಯೆಗಳನ್ನ ಕುಲಪತಿಗಳು ಹೇಳಿದ್ದಾರೆ.

ಕೇಂದ್ರದಿಂದ ಶಿಕ್ಷಣ ಇಲಾಖೆಗೆ ನಮಗೆ ಕಡಿಮೆ ಹಣ ಬರುತ್ತಿದೆ ಎಂದು ತಿಳಿಸಿದರು.ನಮ್ಮ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಎನ್ಇಪಿಯನ್ನ ತರಾತುರಿಯಲ್ಲಿ ಕರ್ನಾಟಕದಲ್ಲಿ ಜಾರಿ ಮಾಡಲಾಯ್ತು. ಯುಪಿ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಬಜೆಪಿ ಆಡಳಿತ ರಾಜ್ಯದಲ್ಲಿ ಎನ್ಇಪಿ ಇಲ್ಲ. ಪ್ರಾಥಮಿಕ ಶಿಕ್ಷಣ ದಿಂದ ಪ್ರಾರಂಭ ಮಾಡಬೇಕಿತ್ತು.

ಆತುರವಾಗಿ ಜಾರಿ ಮಾಡಿದ್ದಾರೆ ಹಿಂದೆ ಸಿದ್ದ ರಾಮಯ್ಯ ಅವರು ಕಾಲದಲ್ಲಿ ಇದ್ದ ಎಜುಕೇಷನ್ ಪಾಲಿಸಿ ಒಂದು ಇದೆ. ತಜ್ಞರ ಒಳಗೊಂಡು ಮಾಡಿದ ಒಂದು ರಿಪೋರ್ಟ್ ಇದೆ. ಎನ್ಇಪಿ ಯಲ್ಲಿ ನಮಗೆ ಅನೇಕ ವಿಚಾರದಲ್ಲಿ ಒಪ್ಪಿಗೆ ಇಲ್ಲ. ತಂತ್ರಜ್ಞಾನಕ್ಕೆ ತಕ್ಕಂತೆ ಎಜುಕೇಷನ್ ಇರಬೇಕು. ಇದಕ್ಕೆ ತಕ್ಕಂತೆ ಪಾಲಿಸಿ ರೂಪಿಸುತ್ತೇವೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk