ಕುದೂರು –
ಕಾಗಿಮಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಪರಿಮಳ ಅವರನ್ನು ಅಮಾನತು ಮಾಡಲಾಗಿದೆ ಹೌದು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ರಾಮನಗರ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ.ಸಿ ಬಸವರಾಜೇ ಗೌಡ ಆದೇಶ ಹೊರಡಿಸಿದ್ದಾರೆ.ಪರಿಮಳ ಸಹೋ ದ್ಯೋಗಿಗಳಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡುತ್ತಾರೆ ಅಲ್ಲದೆ ವೈಯುತ್ತಾರೆ, ಅಸಭ್ಯವಾಗಿ ವರ್ತಿಸುತ್ತಾರೆ.
ಶಾಲಾ ಅವಧಿಯಲ್ಲಿ ಮೊಬೈಲ್ ಬಳಸುತ್ತಾರೆ ಎನ್ನುವ ಆರೋಪಗಳಿದ್ದವು. ಈಚೆಗೆ ಅದೇ ಶಾಲೆಯ ಹಿಂದಿ ಶಿಕ್ಷಕಿ ಯಶೋದಮ್ಮ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಗೆ ಪೆಟ್ಟು ಮಾಡಿದ್ದರು.ಈ ಹಿನ್ನೆಲೆಯಲ್ಲಿ ಯಶೋದಮ್ಮ ಅವರು 10 ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆ ಪಡೆದಿದ್ದರು.
ಈ ಎಲ್ಲಾ ಕಾರಣಗಳಿಂದಾಗಿ ಶಿಕ್ಷಕಿ ಪರಿಮಳ ಅವರ ಮೇಲೆ ಶಾಲೆಯ ಎಸ್.ಡಿ.ಎಂ.ಸಿ, ಪೋಷಕರು ಹಾಗೂ ಕಾಗಿಮಡು ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದರು.
ಡಿಡಿಪಿಐ ಬಸವರಾಜೇಗೌಡ ಈ ಕುರಿತು ಮಾಗಡಿ ಬಿಇಒ ಅವರಿಗೆ ತನಿಖೆ ನಡೆಸಿ ವರದಿ ಕೊಡು ವಂತೆ ಸೂಚಿಸಿದ್ದರು.ಅನುಚಿತವಾಗಿ ವರ್ತಿಸಿರು ವುದು ದೃಢಪಟ್ಟ ನಂತರ ಪರಿಮಳರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಇಓ ಶಿಫಾರಸ್ಸು ಮಾಡಿದ್ದರು ಹೀಗಾಗಿ ಡಿಡಿಪಿಐ ಬಸವರಾಜೇ ಗೌಡ ಪರಿಮಳ ಅವರನ್ನು ಸೇವೆಯಿಂದ ಅಮಾ ನತುಗೊಳಿಸಿ ಆದೇಶಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ರಾಮನಗರ…..