ಬೆಂಗಳೂರು –
ಹೌದು ಕರ್ನಾಟಕ ಹಾಲು ಮಾರಾಟ ಮಹಾ ಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಜೂನ್ 21 ರಂದು ಚುನಾವಣೆ ನಡೆಯಲಿದೆ.ರಾಜ್ಯದಲ್ಲಿ ಸರ್ಕಾರ ಬದಲಾವಣೆಯ ಜೊತೆಗೆ ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷ ಸ್ಥಾನ ತೆರವಾಗಿದೆ.
ಹೀಗಾಗಿ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಭೀಮಾ ನಾಯ್ಕ್ ಅವರು ಆಕಾಂಕ್ಷಿಯಾಗಿದ್ದು ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾ ಗುತ್ತಿದೆ
ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಈಗಾಗಲೇ ಇದುವರೆಗೆ ಕೆಎಂಎಫ್ ಅಧ್ಯಕ್ಷ ರಾಗಿದ್ದ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ ಕಾರಣ ಮಾತ್ರ ನಿಗೂಢವಾಗಿದ್ದು
ಅಧಿಕಾರದ ಅವಧಿ ಇನ್ನೂ ಒಂದು ವರ್ಷವಿದೆ ಕೆಎಂಎಫ್ ಎಲ್ಲ ನಿರ್ದೇಶಕರ ಬೆಂಬಲವಿದ್ದರೂ ಸಂಸ್ಥೆಯ ಪ್ರಗತಿಗಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಸದೇ ಮುಂಬರುವ ಹೊಸ ಅಧ್ಯಕ್ಷರಿಗೆ ಸಹಕಾರ ನೀಡಲಾಗುವುದು ಎಂದಿದ್ದು ಈ ಒಂದು ಬೆಳವಣಿಗೆ ತೀವ್ರ ಚರ್ಚೆ ಗೆ ಗ್ರಾಸವಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..