ಬೆಂಗಳೂರು –
7 ನೇ ವೇತನ ಆಯೋಗ ಅನುಷ್ಠಾನ ಸೇರಿದಂತೆ ಮೂರು ಪ್ರಮುಖ ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರು ಕರೆ ನೀಡಿರುವ ಹೋರಾಟಕ್ಕೆ ರಾಜ್ಯ ಸರ್ಕಾರ ಬೆದರಿದಂತೆ ಕಾಣುತ್ತಿದೆ ದೊಡ್ಡ ಪ್ರಮಾಣದ ಹೋರಾಟ ಆರಂಭಕ್ಕೂ ಮುನ್ನವೇ ರಾಜ್ಯದ ಮುಖ್ಯಮಂತ್ರಿ ನೌಕರರ ಪ್ರಮುಖ ಬೇಡಿಕೆ ಯಾದ 7 ನೇ ವೇತನ ಆಯೋಗದ ಕಡತವನ್ನು ಮಂಡಿಸಲು ಸೂಚನೆ ನೀಡಿದ್ದಾರಂತೆ
ರಾಜ್ಯ ಸರ್ಕಾರಿ ನೌಕರರ ಎರಡು ಪ್ರಮುಖ ಬೇಡಿಕೆಗಳ ಬಗ್ಗೆ ಚರ್ಚಿಸಲು ವೇದಿಕೆ ಸಜ್ಜಾಗಿದೆ. ಏಳನೇ ವೇತನ ಆಯೋಗದ ವರದಿ ಅನುಷ್ಠಾನ ವಿಷಯ ಅಜೆಂಡಾದಲ್ಲಿ ಸೇರ್ಪಡೆಯಾಗಿದ್ದರೆ ಎನ್ಪಿಎಸ್ ರದ್ದಿಗೆ ಸಂಬಂಧಿಸಿದಂತೆ ಸಂಪುಟದ ಮುಂದೆ ಕಡತ ಮಂಡಿಸಲು ಸಿಎಂ ಸಿದ್ದರಾಮಯ್ಯ ಹಣಕಾಸು ಇಲಾಖೆ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.
ಸೋಮವಾರ ಸಂಜೆ ನಡೆಯುವ ಸಚಿವ ಸಂಪುಟ ಸಭೆಯ ಮುಖ್ಯ ಕಾರ್ಯಸೂಚಿಯಲ್ಲಿ 20 ವಿಷಯಗಳಿದ್ದು ಅವುಗಳಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ಸಹ ಸೇರ್ಪಡೆಯಾಗಿದೆ.ವೇತನ ಹೆಚ್ಚಳವನ್ನು ಆಗಸ್ಟ್ ಒಂದರಿಂದ ಜಾರಿಗೆ ತರಲು ಸರ್ಕಾರ ತೀರ್ವನಿ ಸಿದೆ.ಅದಕ್ಕೆ ಅಗತ್ಯವಾದ ಹಣಕಾಸನ್ನೂ ಆಯವ್ಯ ಯದಲ್ಲಿ ತೆಗೆದಿರಿಸಿದೆ.
ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಪುಟ ಸಭೆಯಲ್ಲಿ ಸಿಎಂಗೆ ಅಧಿಕಾರ ನೀಡಲಾಗಿತ್ತು.ಮತ್ತೆ ಸಂಪುಟದ ಮುಂದೆ ವಿಷಯ ತರುವ ಅಗತ್ಯ ವಿಲ್ಲ ಆದರೂ ಸಂಪುಟ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಮಂಡಿಸಲಾಗುತ್ತಿದೆ.
ನೌಕರರ ಹಾಗೂ ನಿವೃತ್ತರ ವೇತನ ಹಾಗೂ ಭತ್ಯೆ ಗಳ ಪರಿಷ್ಕರಣೆಗೆ 17 ಸಾವಿರ ಕೋಟಿ ರೂ.ಗಳ ಅಗತ್ಯವಿದೆ.ವೇತನ ಆಯೋಗ ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದೆ.ಅದರಲ್ಲಿ ಈಗಾಗಲೆ ಶೇ.17 ಮಧ್ಯಂತರ ಪರಿಹಾರ ನೀಡ ಲಾಗಿದೆ. ಉಳಿದ ಶೇ.10.5 ನೀಡಬೇಕಾಗಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬಜೆಟ್ನಲ್ಲಿ 14 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಈ ಹಣಕಾಸು ವರ್ಷದಲ್ಲಿ ಈಗಾಗಲೇ 4ತಿಂಗಳು ಮುಗಿದಿರುವುದರಿಂದ 14 ಸಾವಿರ ಕೋಟಿ ರೂ.ಗಳು ಸಾಕಾಗುತ್ತವೆ ಎಂದು ಹೇಳಲಾಗುತ್ತಿದೆ. ವೇತನ ಪರಿಷ್ಕರಣೆ ಮಾತ್ರವೇ ಅಥವಾ ಯಾವ ಯಾವ ಭತ್ಯೆ ಪರಿಷ್ಕರಣೆ ಆಗಲಿವೆ ಎಂಬುದು ಸಂಪುಟ ಸಭೆಯ ನಂತರವೇ ತಿಳಿಯಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..