ಬೆಂಗಳೂರು –
ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿ ಗಳಿಗೆ ಸರಿಯಾಗಿ ಶೂ ಮತ್ತು ಸಮವಸ್ತ್ರ ಗಳನ್ನು ವಿತರಣೆ ಮಾಡದ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಛೀಮಾರಿ ಹಾಕಿದೆ.ಹೌದು ಸರಕಾರಿ ಶಾಲೆಯ ಮಕ್ಕಳಿಗೆ ಸರಿಯಾಗಿ ಸೌಲಭ್ಯಗಳನ್ನು ನೀಡದೆ ಉತ್ಸವಗಳನ್ನು ಮಾಡುತ್ತೀರಿ ಆದರೆ ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಮನಸ್ಸು ಇಲ್ಲವೆಂದರೆ ಸರಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ
ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ,ಶೂ ನೀಡದಿರುವುದಕ್ಕೆ ಹೈಕೋರ್ಟ್ ತರಾಟೆಯನ್ನು ಮಾಡಿದೆ.ಸರಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲನೆ ಮಾಡದ ರಾಜ್ಯ ಸರಕಾರವನ್ನು ರಾಜ್ಯ ಹೈಕೋರ್ಟ್ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ.
ಸರಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಒಂದು ಜೊತೆ ಶೂ ಹಾಗೂ 2 ಜೊತೆ ಸಾಕ್ಸ್ ನೀಡುವಂತೆ 2019ರ ಆ 26ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ಸಮರ್ಪ ಕವಾಗಿ ಪಾಲಿಸಿಲ್ಲ ಎಂದು ಮೂಲ ಅರ್ಜಿದಾರ ಕೊಪ್ಪಳ ಜಿಲ್ಲೆಯ 8 ವರ್ಷದ ಮಂಜುನಾಥ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ 2019ರ ಆ 26ರಂದು ನೀಡಿದ್ದ ಆದೇಶವನ್ನು ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡುವಲ್ಲಿ ಸರಕಾರ ವಿಫಲವಾಗಿರುವುದನ್ನು ಗಮನಿಸಿದ ನ್ಯಾ ಬಿ. ವೀರಪ್ಪ ಸರಕಾರದ ಧೋರಣೆಯನ್ನು ಕಟು ಮಾತುಗಳಲ್ಲಿ ಟೀಕಿಸಿದರು
ಸಾಂವಿಧಾನಿಕ ಬದ್ಧತೆ ನೆರವೇರಿಸಿ ಯಾವ್ಯಾವು ದಕ್ಕೋ ಕೋಟ್ಯಂತರ ರೂ ಖರ್ಚು ಮಾಡಲಾ ಗುತ್ತದೆ ಆದರೆ ಮಕ್ಕಳಿಗೆ ಸಮವಸ್ತ್ರ ಕೊಡಲು ಆಗುವುದಿಲ್ಲ.ಪ್ರತಿಮೆ, ಪುತ್ಥಳಿ ಸ್ಥಾಪನೆಯ ಮೂಲಕ ಸತ್ತವರನ್ನು ತಂದು ನಿಲ್ಲಿಸುತ್ತೀರಿ, ಉತ್ಸವಗಳನ್ನು ಮಾಡುತ್ತೀರಿ.ಆದರೆ ಮಕ್ಕಳಿಗೆ ಬಟ್ಟೆ ಕೊಡಲು ಆಗುವುದಿಲ್ಲ ಎಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದರು
ಸರಕಾರ ತನ್ನ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸಲಿ ಇಲ್ಲದಿದ್ದರೆ ಅಂತಹವರು ಹುದ್ದೆ ಗಳಿಗೆ ಬರಬಾರದು.ನ್ಯಾಯಾಲಯದ ಆದೇಶ ಪಾಲಿಸಲು ಆಗುವುದಿಲ್ಲ ಎಂದರೆ ಅಂತಹ ಅಧಿ ಕಾರಿಗಳು ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು ಹೈಕೋರ್ಟ್ ಆದೇಶವನ್ನು ಮೇಲಿನ ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದಾದರೂ ಅಫಿಡೆವಿತ್ ಸಲ್ಲಿಸಿ ಎಂದು ನ್ಯಾಯಪೀಠ ಚಾಟಿ ಬೀಸಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..