ಬೆಂಗಳೂರು –
CM ಭೇಟಿ ಮಾಡಿದ KSPSTA ನಿಯೋಗ ಶಿಕ್ಷಕರ ಸಮಸ್ಯೆ ಕುರಿತಂತೆ ಮತ್ತೆ ಭೇಟಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯ – ಶಿಕ್ಷಕರ ಹಲವು ಸಮಸ್ಯೆಗಳ ಈಡೇರಿಕೆಗೆ ಆಗ್ರಹ
ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿನ ಆಗಿರುವ ಅನ್ಯಾಯ ಕುರಿತಂತೆ ಬೆಂಗಳೂರಿನಲ್ಲಿ ಶಿಕ್ಷಕರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಿದ್ದರು.ಸೆಪ್ಬಂದರ್ 4 ಮತ್ತು 5 ರಂದು ಬೆಂಗಳೂರಿನಲ್ಲಿ ನಡೆದ ಹೋರಾಟದ ಸಂದರ್ಭ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಒಂದು ಬೇಡಿಕೆಗಳ ಕುರಿತಂತೆ ಶೀಘ್ರದಲ್ಲೇ ಸಭೆ ಯನ್ನು ಮಾಡಿ ಬೇಡಿಕೆಗಳ ಈಡೇರಿಸುವ ಬಗ್ಗೆ ಭರವಸೆಯನ್ನು ನೀಡಿದ್ದರು.
ಈ ಒಂದು ನಂತರ ಸಧ್ಯ ಈ ಬೇಡಿಕೆಗಳ ಕುರಿತಂತೆ ಸಧ್ಯ ಮತ್ತೊಮ್ಮೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮತ್ತೆ ಧ್ವನಿ ಎತ್ತಿದ್ದಾರೆ. ಈ ಒಂದು ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಸ್,ಪ್ರಧಾನ ಕಾರ್ಯದರ್ಶಿ ಚೆಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿಯಾಗಿ ಶಿಕ್ಷಕರ ಬೇಡಿಕೆಗಳ ಕುರಿತಂತೆ ಕೊಟ್ಟ ಭರವಸೆಯಂತೆ ಚರ್ಚೆಯನ್ನು ಮಾಡಿದರು.
ಇದೇ ವೇಳೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹವನ್ನು ಮಾಡಿದರು.ಇದೇ ವೇಳೆ ಅತಿಥಿ ಶಿಕ್ಷಕರ ವೇತನ ಕುರಿತಂತೆ ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯವನ್ನು ಕೂಡಾ ಮಾಡಿದರು.ಈ ಒಂದು ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ,ಬಸವರಾಜ ಗುರಿಕಾರ, ತಿಮ್ಮಯ್ಯ ಪುರ್ಲೆ ಸೇರಿದಂತೆ ಹಲವರು ಉಪಸ್ತಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……