This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಇವರೇ ನೋಡಿ 15ನೇ ವಿಧಾನ ಸಭಾ ರಾಜ್ಯದ ಸದಸ್ಯರು – ವಿಧಾನಸಭೆ ಆವರಣದಲ್ಲಿ ನಡೆಯಿತು ಶಾಸಕರ ಗ್ರೂಪ್ ಫೋಟೋಶೂಟ್

WhatsApp Group Join Now
Telegram Group Join Now

ಬೆಂಗಳೂರು

ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನ ಸಭೆಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಇನ್ನೂ 15ನೇ ವಿಧಾನ ಸಭೆ ಮುಕ್ತಾಯವಾಗ ಲಿದ್ದು ಇನ್ನೂ ವಿಧಾನ ಸಭಾ ಸದಸ್ಯರ ಅಂದರೆ ಶಾಸಕರ ಗ್ರೂಪ್ ಪೊಟೊ ಶೂಟ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

ದಿನ ಬೆಳಗಾದರೆ ಆರೋಪ ಪ್ರತ್ಯಾರೋಪ ಮಾಡುತ್ತಿರುವ ನಡುವೆ ಎಲ್ಲವನ್ನೂ ಮರೆತ ರಾಜಕೀಯ ನಾಯಕರು ಈ ಒಂದು ಗ್ರೂಪ್ ಪೊಟೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೊಟೊ ತಗೆಯಿಸಿಕೊಂಡರು.ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ,ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿ ಯಾಗಿ ಸದಸ್ಯರೊಂದಿಗೆ ಗ್ರೂಪ್ ಪೊಟೊ ದವನ್ನು ತಗೆಯಿಸಿಕೊಂಡರು.

ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶ ನದ ಕೊನೆಯ ದಿನವಾದ ಹಿನ್ನಲೆಯಲ್ಲಿ ವಿಧಾನ ಸೌಧದ ಆವರಣದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ ನಡೆಯಿತು.15ನೇ ವಿಧಾನ ಸಭೆಯ ಕೊನೆಯ ಅಧಿವೇಶನ ಹಿನ್ನಲೆ ನಡೆದ ಫೋಟೋಶೂಟ್‌ನಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ಸಿಎಂ ಬಸವರಾಜ ಬೊಮ್ಮಾಯಿ,ವಿಪಕ್ಷ ನಾಯಕ ಸಿದ್ದರಾಮಯ್ಯ.ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಭಾಗಿಯಾಗಿದರು.ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಫೋಟೋಶೂಟ್ಗೆ ಗೈರಾಗಿದ್ದು ಕಂಡು ಬಂದಿತು.

15 ನೇ ವಿಧಾನಸಭೆಯ ಕೊನೆಯ ಅಧಿವೇಶನ ಫೆಬ್ರವರಿ 24 ರಂದು ಕೊನೆಗೊಳ್ಳುವ ಹಿನ್ನೆಲೆ ಯಲ್ಲಿ ವಿಧಾನಸಭಾ ಸದಸ್ಯರು ವಿಧಾನಸೌಧದ ಎದುರು ಗ್ರೂಪ್ ಫೋಟೋಕ್ಕೆ ಪೋಸ್ ನೀಡಿ ದರು ಈ ನಾಯಕರೊಂದಿಗೆ ಬಿಜೆಪಿ ಸರ್ಕಾರ ಸಚಿವರು ಹಾಗೂ ಎಲ್ಲಾ ಸದಸ್ಯರು ಸಮೂಹ ಛಾಯಾಚಿತ್ರಕ್ಕೆ ಸಾಕ್ಷಿಯಾದರು.

 

 

ಈ ಫೋಟೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿ ಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಧಾನಸಭೆಯ ಅವಧಿ ನನ್ನ ಪಾಲಿಗೆ ಅತ್ಯಂತ ಸ್ಮರಣೀಯವಾಗಿದ್ದು ಈ ಅವಧಿಯಲ್ಲಿ ನಾನು ಶಾಸಕನಾಗಿ ರಾಜ್ಯದ ಗೃಹ ಸಚಿವನಾಗಿ ಬಳಿಕ ರಾಜ್ಯದ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಹೀಗಾಗಿ ಎಲ್ಲಾ ಶಾಸಕ ಮಿತ್ರರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

 

 


Google News

 

 

WhatsApp Group Join Now
Telegram Group Join Now
Suddi Sante Desk