ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಎನ್ ಶಶಿಕುಮಾರ್ ಸಾಕಷ್ಟು ಪ್ರಮಾಣ ದಲ್ಲಿ ಹೊಸ ಹೊಸ ಬದಲಾವಣೆ ಮಾಡುತ್ತಿದ್ದಾರೆ.ಹೌದು ಈಗಾಗಲೇ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವಳಿ ನಗರದಲ್ಲಿ ಕ್ರೈಮ್ ಕಂಟ್ರೋಲ್ ಮಾಡಲು ಹೊಸ ಹೊಸ ಪ್ಲಾನ್ ಮಾಡುತ್ತಿದ್ದು ಸಧ್ಯ ಅವಳಿ ನಗರದ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಭೇಟಿ ನೀಡಿ ಕೆಲ ವಿಚಾರ ಗಳ ಕುರಿತು ಸಭೆ ಮಾಡಿದರು ಹೌದು
ಹುಬ್ಬಳ್ಳಿ-ಧಾರವಾಡ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಆಯುಕ್ತರು ಭೇಟಿಯನ್ನು ನೀಡಿದರು.ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ N. ಶಶಿಕುಮಾರ್ ಹುಬ್ಬಳ್ಳಿ ಧಾರವಾಡ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳು (Karnataka University), ಧಾರವಾಡ SDM ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರು, ಹುಬ್ಬಳ್ಳಿಯ KLE ಅಂಗಸಂಸ್ಥೆಯ B.V.B ಕಾಲೇಜಿನ ಪ್ರಾಂಶುಪಾಲರು, KIMS ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರುಗಳನ್ನು ಭೇಟಿ ಮಾಡಿ ಶಾಲಾ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಸಮಾಲೋಚನೆ ನಡೆಸಿ ಎಲ್ಲಾ ಶಾಲಾ ಕಾಲೇಜುಗಳ ಒಳ ಮತ್ತು ಹೊರಾಂಗಾಣಗಳಲ್ಲಿ ಸಿಸಿಟಿವಿ ಅಳವಡಿಕೆ ಕುರಿತು ಚರ್ಚಿಸಿದರು. ತುರ್ತು ಸಂದರ್ಭಗಳಲ್ಲಿ ಯಾವುದೇ ಸಹಾಯಕ್ಕಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಕೂಡ ತಿಳಿಸಿದರು.
ಅಲ್ಲದೇ ಹುಬ್ಬಳ್ಳಿ ನಗರದ ಸಿದ್ಧಾರೂಢ ಮಠ, ಮೂರು ಸಾವಿರ ಮಠ, ಫತೇಶಾ ಅಲಿ ದರ್ಗಾ, ಕೇಶ್ವಾಪುರ ಶಾಂತಿನಗರ ಚರ್ಚ್ ಗಳಂತಹ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರುಗಳ ಜೊತೆಗೆ ಜಾತ್ರೆ ಸಮಯದಲ್ಲಿ ಮತ್ತು ಹೆಚ್ಚಿನ ಜನ ಸೇರುವಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ, ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಪೊಲೀಸ್ ನಿಯೋಜನೆ, ಬಂದೋಬಸ್ತ್, ಸೂಕ್ತ ಸಂಚಾರ ವ್ಯವಸ್ಥೆಗಳ ಬಗ್ಗೆ ಸಮಾಲೋಚನೆ ನಡೆಸಿದರು.