ಬೆಂಗಳೂರು –
ಹೌದು ಬಿಎಸ್ ಎನ್ ಎಲ್ ದಿಂದ ಜಿಯೋ ಗೆ ರಾಜ್ಯದ ಪೊಲೀಸ್ ಇಲಾಖೆಯ ನಂಬರ್ ಗಳನ್ನು ಬದಲಾವಣೆ ಮಾಡುವಂತೆ ರಾಜ್ಯ ಸರ್ಕಾರ ಆದೇ ಶವನ್ನು ಮಾಡಿದೆ. ಪೊಲೀಸ್ ಇಲಾಖೆಯಲ್ಲಿರುವ ಬಿಎಸ್ಎನ್ಎಲ್ ನಂಬರ್ಗಳನ್ನು ಹಂತ ಹಂತ ವಾಗಿ ರಿಲಾಯನ್ಸ್ ಜಿಯೋಗೆ ಪೋರ್ಟ್ ಮಾಡು ವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ದಶಕಗಳಿಂದ ಬಳಸುತ್ತಿರುವ ಬಿಎಸ್ಎನ್ಎಲ್ ಸೇವೆಯಿಂದ ಇದೀಗ ರಿಲಾಯನ್ಸ್ ಜಿಯೋಗೆ ಪೋರ್ಟ್ ಆಗುವಂತೆ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯ ದೆಲ್ಲೆಡೆ ಸರಿಯಾಗಿ ನೆಟ್ವರ್ಕ್ ಸಿಗುತ್ತಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಈ ಒಂದು ನಿರ್ಧಾರವನ್ನು ಕೈಗೊಂಡು ಆದೇಶವನ್ನು ಮಾಡ ಲಾಗಿದೆ.
ಈಗಾಗಲೇ ದೇಶದಲ್ಲಿ ಹಲವಾರು ವಿಚಾರಗಳು ಚರ್ಚೆಗೆ ಗ್ರಾಸವಾಗುತ್ತಿದ್ದು ಇದರ ನಡುವೆ ಈಗ ಮತ್ತೊಂದು ವಿಷಯ ಸೇರ್ಪಡೆಯಾದಂತಾಗಿದೆ. ಪೊಲೀಸ್ ಇಲಾಖೆಯಲ್ಲಿ ಒಟ್ಟು 38,347 ಬಿಎಸ್ಎನ್ಎಲ್ ನಂಬರ್ ಬಳಸಲಾಗುತ್ತಿದೆ. ಪೋರ್ಟ್ ಮಾಡುವ ಮುನ್ನ ಕೆಲವು ಷರತ್ತು ಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ. ಹಂತ ಹಂತವಾಗಿ ಜಿಯೊ ನಂಬರ್ಗಳಿಗೆ ಪೋರ್ಟ್ ಮಾಡಬೇಕು.
ಅಲ್ಲದೇ ಬಾಕಿಯಿರುವ ಹಣ ಪಾವತಿಸಬೇಕು.ಈ ಸಂಬಂಧಿತ ಅಧಿಕಾರಿಗಳ ಗಮನಕ್ಕೆತರಬೇಕೆಂದು ತಿಳಿಸಲಾಗಿದೆ.ಇನ್ಸ್ಪೆಕ್ಟರ್ ರಿಂದ ಹಿಡಿದು ಡಿಜಿವ ರೆಗೂ ಎಲ್ಲಾ ಹಂತದ ಪೊಲೀಸರು ಸರ್ಕಾರ ನೀಡಿದ್ದ ಬಿಎಸ್ಎನ್ಎಲ್ ಸಿಮ್ ಅನ್ನೇ ದಶಕಗ ಳಿಂದ ಉಪಯೋಗ ಮಾಡುತ್ತಿದ್ದರು.ಸದ್ಯ ಸರಿ ಯಾದ ನಿರ್ವಹಣೆ ಇಲ್ಲದೇ ಬಿಎಸ್ಎನ್ಎಲ್ ಮೂಲೆಗುಂಪಾಗಿದ್ದು ಇದೇ ಕಾರಣಕ್ಕೆ ಸರ್ಕಾರ ತಮ್ಮ ಸಿಮ್ಗಳನ್ನು ಬಿಎಸ್ಎನ್ಎಲ್ ಬಿಟ್ಟು ಜಿಯೊಗೆ ಪೋರ್ಟ್ ಆಗಲು ಮುಂದಾಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……