ಹುಬ್ಬಳ್ಳಿ –
ಪಡಿತರ ಅಕ್ಕಿ ಬ್ಯಾಡ ಅಂದರ ಕೈ ತುಂಬಾ ಹಣ ಕೊಡತಾರೆ ಹುಬ್ಬಳ್ಳಿಯಲ್ಲಿ – ಇದು ಅಕ್ರಮ ಅಕ್ಕಿಯ ಮತ್ತೊಂದು ಸ್ಟೋಟಕ ಸಂಗತಿ ಹೇಗಿದೆ ನೋಡಿ…..
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿನ ಅಕ್ರಮ ಅಕ್ಕಿ ದಂಧೆಯ ಮುಖಗಳು ಒಂದೊಂದಾಗಿ ಹೊರ ಬರುತ್ತಿವೆ.ಒಂದು ಕಡೆ ನಗರದಲ್ಲಿ ಅಕ್ರಮ ಅಕ್ಕಿಯ ದಂಧೆ ಜೋರಾಗಿದ್ದು ಯಾರ ಭಯವೂ ಯಾರ ಅಂಜಿಕೆಯೂ ಇಲ್ಲದೇ ಡಾನ್ ಸೂಚನೆ ಯಂತೆ ಅವರ ಕೆಳಗಿನವರು ಈ ಒಂದು ದಂಧೆ ಯಲ್ಲಿ ತೊಡಗಿಕೊಂಡಿದ್ದಾರೆ.ಈ ಒಂದು ದಂಧೆ ಹೇಗೆ ನಡೆಯುತ್ತಿದೆ ಯಾರು ಯಾರು ಎಲ್ಲೇಲ್ಲಿ ಹೇಗೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಈಗಾ ಗಲೇ ಹೇಳಿದಂತೆ
ಪೊಲೀಸ್ ಇಲಾಖೆಗೆ ಆಹಾರ ಇಲಾಖೆಗೆ ಸೇರಿ ದಂತೆ ಸಂಬಂಧಿಸಿದ ಇಲಾಖೆಗಳಿಗೆ ಅಧಿಕಾರಿ ಗಳಿಗೆ ಗೊತ್ತಿದ್ದರೂ ಕೂಡಾ ಗೊತ್ತಿಲ್ಲದಂತೆ ಇದ್ದಾರೆ ಹೀಗಿರುವಾಗ ಸಧ್ಯ ಈ ಒಂದು ಅಕ್ರಮ ಅಕ್ಕಿಯ ಮತ್ತೊಂದು ಸ್ಟೋಟಕ ವಿಚಾರ ಬೆಳಕಿಗೆ ಬಂದಿದೆ.ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದ್ದು ಈ ಒಂದು ಯೋಜನೆ ಸಧ್ಯ
ರಾಜ್ಯದಲ್ಲಿ ಹತ್ತಾರು ಸಮಸ್ಯೆ ತೊಂದರೆಗಳ ನಡುವೆ ನಡೆಯುತ್ತಿದ್ದು ಇದರ ನಡುವೆ ಸಧ್ಯ ಸರ್ಕಾರ ಘೋಷಣೆ ಮಾಡಿರುವ ಈ ಒಂದು ಯೋಜನೆಯಂತೆ ನಿಗದಿ ಮಾಡಿದ ಅಕ್ಕಿಯನ್ನು ನೀಡಲಾಗುತ್ತಿಲ್ಲ ಅರ್ಧ ಅಕ್ಕಿ ಇನ್ನೂಳಿದಂತೆ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲಾ ಗುತ್ತಿದ್ದು ಇದು ಗೊತ್ತಿರುವ ವಿಚಾರ
ಇದರ ನಡುವೆ ಹುಬ್ಬಳ್ಳಿಯಲ್ಲಿ ಮತ್ತೊಂದು ಸ್ಪೋಟಕ ವಿಚಾರ ಬೆಳಕಿಗೆ ಬಂದಿದ್ದು ಅಕ್ಕಿಯನ್ನು ನೀವು ತಗೆದುಕೊಳ್ಳದಿದ್ದರೆ ನಿಮಗೆ ಅಲ್ಲಿಯೇ ಹಣವನ್ನು ನೀಡಲಾಗುತ್ತಿದೆ.ನೇರವಾಗಿ ಆಹಾರ ಪಡಿತರ ವಿತರಣೆಯನ್ನು ಮಾಡುವವರು ಹಣ ವನ್ನು ನೀಡಲು ಬರೊದಿಲ್ಲ
ಆದರೆ ಡಾನ್ ಕಿಂಗ್ ಪಿನ್ ನ ಸೂತ್ರದಂತೆ ಇವರು ಕೂಡಾ ಆಟವಾ ಡುತ್ತಿದ್ದು ಹೀಗಾಗಿ ಹುಬ್ಬಳ್ಳಿಯ ಬಹುತೇಕ ಕೇಂದ್ರಗಳಲ್ಲಿ ಈ ಒಂದು ಹಣ ನೀಡುತ್ತಿರುವುದು ಕಂಡು ಬರುತ್ತಿದೆ.ಅಕ್ಕಿ ಬೇಡ ನಮಗೆ ಅಂದರೆ ಅಲ್ಲಿಯೇ ಲೆಕ್ಕ ಮಾಡಿ ಅವರ ಕೈಗೆ ಹಣವನ್ನು ನೀಡುತ್ತಿರುವ ಚಿತ್ರಣವು ಬೆಳಕಿಗೆ ಬಂದಿದೆ.
ಹಣ ಕೊಟ್ಟು ಉಳಿದ ಅಕ್ಕಿಯನ್ನು ನೇರವಾಗಿ ಅಲ್ಲಿಗೆ ಸಪೈ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದು ವಿಡಿಯೋ ದಲ್ಲಿ ಅಕ್ಕಿ ಬದಲಾಗಿ ಹಣವನ್ನು ನೀಡುತ್ತಿರುವುದು ಕಂಡು ಬಂದಿದ್ದು ಇದನ್ನು ಜಿಲ್ಲಾಡಳಿತ ಆಹಾರ ಇಲಾಖೆಯವರು ಗಂಭೀರವಾಗಿ ಪರಿಗಣಿಸಿ ಇದರ ಹಿಂದೆ ಯಾರು ಇದ್ದಾರೆ ಎಂಬೊದನ್ನು ಪತ್ತೆ ಮಾಡಬೇಕಿದೆ.
ಇದೊಂದು ಅಕ್ರಮ ಅಕ್ಕಿಯ ಮತ್ತೊಂದು ಸ್ಪೋಟಕ ವಿಚಾರವಾಗಿದೆ.ಇಲ್ಲಿ ಎಲ್ಲವೂ ಡಾನ್ ಹೇಳಿದ್ದೆ ಪೈನಲ್ ಆಡಿದ್ದೇ ಆಟ ಎಂಬಂತಾಗಿದ್ದು ಇದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..