ಬೆಂಗಳೂರು –
ನೌಕರರ 3 ಬೇಡಿಕೆಗಳ ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿದ ರಾಜ್ಯ ಗ್ರಾಮೀಣ ಶಾಲಾ ಶಿಕ್ಷಕರ ಸಂಘ – ನಿರ್ಣಯಗಳನ್ನು ಸ್ವಾಗತಿಸಿ ಹೋರಾಟಕ್ಕೆ ಬೆಂಬಲವನ್ನು ಘೋಷಣೆ ಮಾಡಿದ ರಾಜ್ಯಾದ್ಯಕ್ಷ ಪವಾಡೆಪ್ಪ,ಶರಣಗೌಡ ಪಾಟೀಲ್…..
ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳ ಕುರಿತಂತೆ ಮೂರು ಪ್ರಮುಖವಾದ ನಿರ್ಣಯಗಳನ್ನು ತಗೆದು ಕೊಂಡಿರುವ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಕಾರ್ಯಕಾರಣಿಯ ನಿರ್ಧಾರವನ್ನು ಕರ್ನಾಟಕ ರಾಜ್ಯ ಗ್ರಾಮೀಣ ಶಾಲಾ ಶಿಕ್ಷಕರ ಸಂಘವು ಸ್ವಾಗತಿಸಿದೆ.ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆಯೊಂದಿಗೆ ಮಾತನಾಡಿದ ರಾಜ್ಯ ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕಾರಣಿಯ ಮೂರು ನಿರ್ಣಯಗಳನ್ನು ಸ್ವಾಗತಿಸಿದರು.
ಸಧ್ಯ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇದ್ದರೂ ಕೂಡಾ ಯಾವುದೇ ರೀತಿಯಲ್ಲೂ ಯಾವುದೇ ಸಮಸ್ಯೆ ಅಸ್ಥವ್ಯಸ್ಥೆಯನ್ನು ನಾವುಗಳು ಮಾಡದೇ ಇದ್ದ ವ್ಯವಸ್ಥೆಯಲ್ಲಿಯೇ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸಲಾತ್ತದೆ.ಹೀಗಿರುವಾಗ ನಮ್ಮ ಬೇಡಿಕೆಗಳ ಕುರಿತಂತೆ ಹಲವಾರು ವರ್ಷಗಳಿಂದ ನಮಗೆ ಬರಬೇಕಾದ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೀಡಲು ಹಿಂದೇಟು ಹಾಕುತ್ತಿದ್ದು
ಹೀಗಾಗಿ ಚಿಕ್ಕಮಗಳೂರಿನಲ್ಲಿ ನಡೆದ ಕಾರ್ಯಕಾರಣಿ ಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆ ತಗೆದು ಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿ ಬರುವ ದಿನಗಳಲ್ಲಿ ಯಾವುದೇ ರೀತಿಯ ಹೋರಾಟಕ್ಕೆ ಕರೆ ಕೊಟ್ಟರೆ ಬೆಂಬಲವನ್ನು ಘೋಷಣೆ ಮಾಡಿ ಹೋರಾ ಟವನ್ನು ಮಾಡೊದಾಗಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶರಣಗೌಡ ಪಾಟೀಲ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹೇಳಿದರು.
ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರ ಅದರಲ್ಲೂ ಗ್ರಾಮೀಣ ವಿಭಾಗದ ಶಾಲಾ ಶಿಕ್ಷಕರ ಸಂಘದ ಧ್ವನಿಯಾಗಿ ಸಂಘಟನೆಯ ಕೂಗಿಗೆ ಬೆಂಬಲವನ್ನು ಘೋಷಣೆ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..