ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ಈಗಾಗಲೇ 7ನೇ ವೇತನ ಆಯೋಗ ವು ಸಂಪೂರ್ಣವಾಗಿ ವರದಿಯನ್ನು ಸಿದ್ದತೆ ಮಾಡಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಯನ್ನು ಮಾಡಿದೆ ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಮಾತ್ರ ಜಾರಿಗೆ ತರುವ ಕುರಿತು ಮಾತನಾಡದೇ ಮೌನವಾಗಿದ್ದಾರೆ ನೊಡೊಣಾ ಮಾಡೊಣಾ ಎಂಬ ಮಾತಿನಲ್ಲಿ ದ್ದು ಇದರಿಂದಾಗಿ ಸಧ್ಯ ರಾಜ್ಯದ ಸರ್ಕಾರಿ ನೌಕರರು ಸಿಡಿದೆದ್ದಿದ್ದಾರೆ.
ಈಗಾಗಲೇ ಎಷ್ಟೋ ಸಚಿವ ಸಂಪುಟದ ಸಭೆ ಗಳು ನಡೆದರು ಕೂಡಾ ಒಮ್ಮೆಯೂ ಚರ್ಚೆ ಯಾಗಿಲ್ಲ ಇದರಿಂದಾಗಿ ಇರಲಿ ನೊಡೊಣಾ ಎಂದುಕೊಂಡು ಜುಲೈ 15 ರಂದು ನಡೆಯಲಿ ರುವ ಮತ್ತೊಂದು ಸಚಿವ ಸಂಪುಟದ ಸಭೆಯ ಮೇಲೆ ನಿರೀಕ್ಷೆಯನ್ನು ಸರ್ಕಾರಿ ನೌಕರರು ಇಟ್ಟು ಕೊಂಡಿದ್ದಾರೆ.
ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯ ಸೂಚನಾ ಪತ್ರ ಈಗಾಗಲೇ ಹೊರಡಿ ಸಲಾಗಿದೆ. ಈ ಕುರಿತು ಆರ್. ಚಂದ್ರಶೇಖರ್, ಸರ್ಕಾರದ ಜಂಟಿ ಕಾರ್ಯದರ್ಶಿ (ಸಚಿವ ಸಂಪುಟ) ಮಾಹಿತಿ ನೀಡಿದ್ದಾರೆ.
ದಿನಾಂಕ 15/07/2024, ಸೋಮವಾರ ಸಂಜೆ 6 ಗಂಟೆಗೆ ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಮೂರು ಸಂಪುಟ ಸಭೆಯಲ್ಲಿಯೂ ರಾಜ್ಯ 7ನೇ ವೇತನ ಆಯೋಗ ವರದಿಯನ್ನು ಜಾರಿಗೊಳಿ ಸುವ ಕುರಿತು ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಸಭೆಯಲ್ಲಿ ಈ ಕುರಿತು ಸಿದ್ದರಾಮಯ್ಯ ಸಚಿವರ ಮೌಖಿಕ ಅಭಿಪ್ರಾಯ ಸಂಗ್ರಹ ಮಾಡಿ ದ್ದಾರೆ. ಇದರಿಂದಾಗಿ ಅಸಮಾಧಾನಗೊಂಡಿರುವ ರಾಜ್ಯ ಸರ್ಕಾರಿ ನೌಕರರು ಜುಲೈ 29ರಿಂದ ಮುಷ್ಕರ ಆರಂಭಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದು ಇದೆಲ್ಲದರ ನಡುವೆ ಜುಲೈ 7 ರಂದು ಬೆಂಗಳೂರಿನಲ್ಲಿ ರಾಜ್ಯದ ಸರ್ಕಾರಿ ನೌಕರರ ಕಾರ್ಯಕಾರಣಿ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ನೀಡಿದ್ದ ಭರವಸೆ ಅನುಷ್ಠಾನಗೊಳ್ಳುತ್ತಿಲ್ಲ. ಈ ನಡುವೆ ಜುಲೈ 7ರಂದು ನೌಕರರ ಸಂಘದ ಕಾರ್ಯಕಾರಣಿ ಸಭೆ ಕರೆದಿದ್ದು ಈ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗಾಗಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
5 ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಇದರ ನಡುವೆ 7ನೇ ವೇತನ ಆಯೋಗದ ವರದಿ ಜಾರಿ ಗೊಳಿಸಿದರೆ ವೇತನ, ಭತ್ಯೆ, ಪಿಂಚಣಿ ಎಲ್ಲವೂ ಹೆಚ್ಚಾಗಲಿದೆ. ವರದಿ ಶಿಫಾರಸಿನಂತೆ ಸರ್ಕಾರಿ ಉದ್ಯೋಗಿಗಳ ಮೂಲ ವೇತನ ಹೆಚ್ಚಳವಾದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17,440 ಕೋಟಿ ರೂ. ಹೊರೆಯಾಗಲಿದೆ
ಆದ್ದರಿಂದ ಸರ್ಕಾರ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದ್ದು ಎರಡು ವರ್ಷಗಳದರೂ ಇನ್ನೂ ಜಾರಿಗೆ ಬಾರದ ವರದಿ ಯಿಂದಾಗಿ ನೌಕರರು ಸಧ್ಯ ಅಸಮಾಧಾನ ಗೊಂಡಿದ್ದು ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಸಿದ್ದರಾಗು ತ್ತಿದ್ದು ಇಂದೇ ಪೈನಲ್ ಆಗಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..