ಹೆಬ್ಬಳ್ಳಿ –
ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ – ಧಾರವಾಡ ದ ಹೆಬ್ಬಳ್ಳಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆಯಿತು ಅರ್ಥಪೂರ್ಣ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ…..ಹೌದು
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಯಲ್ಲಿ ಗ್ರಾಮದ ಎಲ್ಲಾ ಶಾಲಾಭಿವೃದ್ದಿ ಸಮಿತಿ ಮತ್ತು ಶಿಕ್ಷಣ ಪ್ರೇಮಿಗಳು ಹಾಗೂ ಜನಸಮು ದಾಯ ಸಹಭಾಗಿತ್ವದಲ್ಲಿ,ಗ್ರಾಮದ ಶಾಲೆ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರುಗಳನ್ನು ಗೌರವಿಸಿ, ಸತ್ಕರಿಸುವ ಮಹತ್ಕಾರ್ಯವನ್ನು, ಧಾರವಾಡದ ವೈಶುದೀಪ ಪೌಂಡೇಶನನ ಮುಖ್ಯಸ್ಥರು ಶಿವಲೀಲಾ ವಿನಯ ಕುಲಕರ್ಣಿ ಅವರು ಮಾಡಿದರು
ಡಾ, ಸರ್ವಪಳ್ಳಿ ರಾಧಾಕೃಷ್ಣನ್ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಶಿಕ್ಷಕ ವೃತ್ತಿ ಪವಿತ್ರವಾದುದು ಈ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತಿ ನೈತಿಕ ಶಿಕ್ಷಣವನ್ನು ನೀಡುವ ಮಹತ್ ಕಾರ್ಯ ಶಿಕ್ಷಕರದ್ದಾಗಿದೆ,ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳನ್ನು ಒಳ್ಳೆಯ ದಾರಿ ಯಲ್ಲಿ ನಡೆಯುವಂತೆ ಮಾಡಬೇಕು ಎಂದು ಶಿಕ್ಷಕರಿಗೆ ಕರೆ ನೀಡಿದರು
ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸಂಚಾಲಕ ರಾದ ಚಂದ್ರಶೇಖರ ಮಟ್ಟಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಪ್ರಪ್ರಥಮವಾಗಿ ಗ್ರಾಮದ ಶಾಲಾ ಭಿವೃದ್ದಿ ಸಮಿತಿಯವರು ಶಿಕ್ಷಣ ಪ್ರೇಮಿಗಳು ದಾನಿಗಳ ಸಹಕಾರದಿಂದ ನಮ್ಮ ಊರಿನ ಗುರು ಗಳನ್ನು ಗುರುಮಾತೆಯರನ್ನು ಪ್ರತಿವರ್ಷ ಶಿಕ್ಷಕರ ದಿನದಂದು ಗೌರವಿಸುವ,ಸತ್ ಸಂಪ್ರದಾಯ ವನ್ನು ಈ ವರ್ಷದಿಂದ ಆರಂಭಿಸಿದ್ದೇವೆ ಎಂದರು
ಶಿಕ್ಷಕರ ಕರ್ತವ್ಯ ಜವಾಬ್ದಾರಿ ಹಾಗೂ ಸಮಾಜದ ರಾಷ್ಟ್ರ ಕರ್ತೃಗಳಾದ ಶಿಕ್ಷಕರು ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಜವಾಬ್ದಾರಿಯುತ ವ್ಯಕ್ತಿಗಳನ್ನಾಗಿ ರೂಪಿಸುವುದು ಅತಿ ಅವಶ್ಯವಿದ್ದು ಇದಕ್ಕೆ ಗ್ರಾಮದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಗಳ ಹಾಗೂ ಶಿಕ್ಷಣ ಪ್ರೇಮಿಗಳ ಮತ್ತು ಗ್ರಾಮದ ಗುರುಹಿರಿಯರ ಸಹಕಾರವಿದ್ದು ಮಕ್ಕಳು ಎಂತಹ ಪ್ರಸಂಗದಲ್ಲಿಯೂ ಕೂಡ ಗಟ್ಟಿತನ ಹೊಂದುವ ಪೈಲ್ವಾನರನ್ನಾಗಿಸುವ ಮಹತ್ವದ ಜವಾಬ್ದಾರಿ ಅರಿತು ಶಿಕ್ಷಕರು ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಸಲು ಸಾಧ್ಯತೆ ಇದೆ ಎಂದರು.
ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯ. ಕ್ರಮದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ನಿಂಗಪ್ಪ ಮೊರಬದ ಉಪಾಧ್ಯಕ್ಷರಾದ ಸುಶೀಲವ್ವ ಸಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಸೇರಿದಂತೆ ಎಲ್ಲಾ ಶಾಲೆಗಳ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಶಾಲಾಭಿವೃದ್ದಿ ಸಮಿತಿಯ ಸದಸ್ಯೆ ಮಂಜುಳಾ ಪಲ್ಲೇದ ಸ್ವಾಗತಿ ಸಿದರು, ಕವಿತಾ ಅಣ್ಣಿಗೇರಿ ನಿರೂಪಿಸಿದರು, ರೇಣುಕಾ ಮುಳ್ಳೂರ ವಂದಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..