ಕಲಬುರಗಿ –
ಹೌದು ಕಳೆದ ಆರು ತಿಂಗಳ ಹಿಂದೆ ಮೃತಪಟ್ಟ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿ ಮಹಾ ಎಡವಟ್ಟವೊಂದನ್ನು ರಾಜ್ಯ ಸರ್ಕಾರ ಮಾಡಿದೆ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿ ಯರ್ ಅಶೋಕ ಪುಟಪಾಕ ಮೃತಪಟ್ಟಿದ್ದರು
ಈ ಒಂದು ಅಧಿಕಾರಿಯನ್ನು ಜುಲೈ.9ರಂದು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗಸಭೆಯ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಭೀಮರಾಯ ಪುಟಪಾಕ(54) ಜನವರಿ.12, 2024 ರಂದು ಮೃತಪಟ್ಟಿದ್ದು ಇವರ ಅಂತ್ಯಕ್ರಿಯೆ ಕೂಡಾ ಚಿತ್ತಾಪುರ, ವಾಡಿ, ಸೇಡಂ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು.
ಹೀಗಿದ್ದೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ವಿಧಾನ ಸಭಾ ಕ್ಷೇತ್ರದಲ್ಲೇ ಮೃತಪಟ್ಟ ಅಧಿಕಾರಿಯನ್ನು ಈಗ ಮತ್ತೆ ವರ್ಗಾವಣೆ ಆದೇಶ ಮಾಡಿರುವ ರಾಜ್ಯ ಸರ್ಕಾರ ಮಹಾ ಎಡವಟ್ಟು ಮಾಡಿದೆ.
ಮೃತ ನೌಕರರನ್ನೇ ವರ್ಗಾವಣೆ ಮಾಡಿ ಆದೇಶಿಸಿ ದೆಯಲ್ಲದೆ ನಗರಾಭಿವೃದ್ಧಿ ಇಲಾಖೆಯವರಿಗೆ ಆ ಮಾಹಿತಿ ಇರಲಿಲ್ವಾ ಅಥವಾ ಮೃತ ಪಡುವ ಮುನ್ನವೇ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ರಾ ಅನ್ನೋದು ತಿಳಿದು ಬರಬೇಕಿದೆ ವರ್ಗಾವಣೆ ಗಾಗಿ ಏನೆಲ್ಲಾ ಕಸರತ್ತು ಮಾಡುತ್ತಿರುವ ಇಂದಿನ ವ್ಯವಸ್ಥೆ ಯಲ್ಲಿ ಇದೇನಿದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು ವರ್ಗಾವಣೆ ಮಾಡಿದ ವರೆ ಇದಕ್ಕೆ ಉತ್ತರಿಸಬೇಕಿದೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..