ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆ ನೀತಿಯಿಂದಾಗಿ ರಾಜ್ಯದ ಶಿಕ್ಷಕರು ಬೇಸತ್ತಿದ್ದಾರೆ ವರ್ಗಾವಣೆ ಪ್ರಕ್ರಿಯೆ ಆರಂಭ ವಾಗುತ್ತದೆ ಎನ್ನುವಷ್ಟರಲ್ಲಿಯೇ ಅದಕ್ಕೊಂದು ಸಮಸ್ಯೆ ಕಂಟಕ ಆರಂಭ ವಾಗುತ್ತದೆ ಹೀಗಿರುವಾಗ ಸಧ್ಯಕ್ಕೆ ಈ ಒಂದು ವರ್ಗಾವಣೆ ಗೆ ರಾಜ್ಯದ ಶಿಕ್ಷಕರಿಂದ ನಿರಸವಾದ ಪ್ರಕ್ರಿಯೆ ಕಂಡು ಬರುತ್ತಿದೆ
ಹೌದು ಶಿಕ್ಷಕರ ವರ್ಗಾವಣೆ ಅರ್ಜಿ ಸಂಖ್ಯೆ ಭಾರಿ ಇಳಿಕೆಯಾಗಿದೆ. ವರ್ಗಾವಣೆ ಕೋರಿ ಶಿಕ್ಷಕರು ಸಲ್ಲಿಸುತ್ತಿದ್ದ ಅರ್ಜಿ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ 10 ಸಾವಿರದಷ್ಟು ಕಡಿಮೆಯಾ ಗಿದೆ. ಈ ವರ್ಷ 63,571 ಅರ್ಜಿ ಸಲ್ಲಿಕೆಯಾಗಿವೆ.
ಸಲ್ಲಿಕೆಯಾದ 63,571 ಅರ್ಜಿಗಳಲ್ಲಿ 47,587 ಅರ್ಜಿಗಳು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಸಂಬಂಧಿ ಸಿದ ಅರ್ಜಿಗಳಾಗಿವೆ.15,974 ಅರ್ಜಿಗಳು ಪ್ರೌಢ ಶಾಲೆ ಶಿಕ್ಷಕರಿಂದ ಸಲ್ಲಿಕೆಯಾಗಿವೆ. ಕೋರಿಕೆ ವರ್ಗಾವಣೆಗೆ ಹೆಚ್ಚಿನ ಬೇಡಿಕೆ ಇದೆ. ವರ್ಗಾವಣೆ ಗಾಗಿ ಶಿಕ್ಷಕರಿಂದ ಸಲ್ಲಿಕೆಯಾಗಿರುವ 63 ಸಾವಿರ ಅರ್ಜಿಗಳಲ್ಲಿ 59,582 ಅರ್ಜಿಗಳು ಕೋರಿಕೆ ವರ್ಗಾವಣೆಗೆ ಸಂಬಂಧಿಸಿವೆ.
2303 ಅರ್ಜಿಗಳು ಪರಸ್ಪರ ವರ್ಗಾವಣೆ ಕೋರಿದ ಅರ್ಜಿಗಳಾಗಿವೆ. 1686 ಅರ್ಜಿಗಳು ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಸೇರಿವೆ ಹೀಗಾಗಿ ಇದನ್ನೆಲ್ಲ ವನ್ನು ನೋಡಿದರೆ ವರ್ಗಾವಣೆ ಗಾಗಿ ರಾಜ್ಯದಲ್ಲಿ ಶಿಕ್ಷಕರಿಂದ ನಿರಸವಾದ ಪ್ರಕ್ರಿಯೆ ಕಂಡು ಬರುತ್ತಿದೆ ಇದಕ್ಕೆ ಕಾರಣ ವರ್ಗಾವಣೆ ಪ್ರಕ್ರಿಯೆ ಗೆ ಪದೇ ಪದೇ ಎದುರಾಗುತ್ತಿರುವ ನೂರೆಂಟು ಅಡೆ ತಡೆಗಳು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….