ಮಂಡ್ಯ –
ಭೀಕರ ಅಪಘಾತ ಇಬ್ಬರು ಶಿಕ್ಷಕಿಯರು ಸಾವು ಬೈಕ್ ಗೆ ಡಿಕ್ಕಿ ಯಾದ ಕಾರು ಸ್ಥಳದಲ್ಲೇ ಸಾವಿ ಗೀಡಾದ ಶಿಕ್ಷಕಿಯರು…..ಹೌದು ಇಂತಹ ದೊಂದು ಭೀಕರ ಅಪಘಾತ ಮಂಡ್ಯ ದಲ್ಲಿ ನಡೆದಿದೆ.ಕಾರು ಸ್ಕೂಟರ್ ಅಪಘಾತವಾಗಿ ಇಬ್ಬರು ಶಿಕ್ಷಕಿಯರು ಮೃತರಾಗಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಸಮೀಪ ಈ ಒಂದು ಅಪಘಾತ ನಡೆದಿದೆ. ಬಸ್ತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ನಾಗರತ್ನ (50) ಮತ್ತು ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಮಂಜುಳಾ (45) ಮೃತರಾಗಿದ್ದಾರೆ.ನಾಗರತ್ನ ಮತ್ತು ಮಂಜುಳಾ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮೈಸೂರು ಕಡೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಪಾಲಹಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಕಾರು ಇವರಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮಂಡ್ಯ……