This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಕ್ಷೇತ್ರದಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ನಮ್ಮದು ಸೇವೆ ನಿಮ್ಮದು ಬನ್ನಿ ಕೈ ಜೋಡಿಸಿ ಎಂದು ಕರೆ ನೀಡಿ ಅಭಿಯಾನ ಆರಂಭ ಮಾಡಿ ದೇಶದ ರಾಜಕಾರಣಿಗಳಿಗೆ ಮಾದರಿಯಾದ ಸಚಿವರು

WhatsApp Group Join Now
Telegram Group Join Now

ಧಾರವಾಡ  –

ಸದಾ ಒಂದಿಲ್ಲೊಂದು ಕಾರ್ಯಗಳ ಮೂಲಕ ಯಾವಾಗಲೂ ವಿಶೇಷವಾಗಿ ಕಾಣಸಿಕೊಳ್ಳುತ್ತಿ ರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ತುಂಬಾ ವಿಶೇಷವಾಗಿ ಇತರರಿಗೆ ಪ್ರೇರಣೆ ಮಾದರಿಯಾ ಗುವ ಹಾಗೇ ಮಾಡುತ್ತಾರೆ ಏನೇ ಮಾಡಿದರು ಕೂಡಾ ತುಂಬಾ ಅರ್ಥಪೂರ್ಣವಾಗಿ ಸಮಾಜಕ್ಕೆ ತುಂಬಾ ಅವಶ್ಯಕವಾಗಿರುವ ಕೆಲಸವನ್ನು ಮಾಡುತ್ತಾ ಇತರ ರಾಜಕಾರಣಿಗಳಿಗೆ ಮಾದರಿ ಯಾಗುತ್ತಾ ಪ್ರೇರಣೆಯಾಗುತ್ತಿದ್ದಾರೆ ಹೀಗಾಗಿ ಪ್ರಹ್ಲಾದ್ ಜೋಶಿ ಅವರನ್ನು ಬಹುತೇಕ ಎಲ್ಲಾ ವರ್ಗದವರು ತುಂಬಾ ಇಷ್ಟಪಡುತ್ತಾರೆ.

ಕೇವಲ ರಾಜಕಾರಣಿಯಾಗದೇ ಸಾಮಾಜಿಕ ಜವಾಬ್ದಾರಿ ಹೇಗೆ ಇರಬೇಕು ಎಂಬೊದನ್ನು ಇವರಿಂದಲೇ ದೇಶದ ರಾಜಕಾರಣಿಗಳು ಕಲಿತು ಕೊಳ್ಳಬೇಕಿದೆ.ಇನ್ನೂ ಕೇಂದ್ರ ಸಚಿವರಾದ ಮೇಲೆ ಬಿಡುವಿಲ್ಲದ ಕೆಲಸ ಕಾರ್ಯಗಳು ಅನ್ನುತ್ತಾ ಆ ಕಾರ್ಯಕ್ರಮ ಈ ಕಾರ್ಯಕ್ರಮ ಉದ್ಘಾಟನೆ ಸಮಾರಂಭ ವೇದಿಕೆಯ ಕಾರ್ಯಕ್ರಮ ಎನ್ನುತ್ತಾ ಹುಬ್ಬಳ್ಳಿ ಧಾರವಾಡ ರಾಜ್ಯ ದೆಹಲಿ ಎನ್ನದೇ  ದೇಶದ ಮೂಲೆ ಮೂಲೆಗಳಲ್ಲೂ ಸಂಚರಿಸಿ ತಾವು ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ  ಒಂದಿಲ್ಲೊಂದು ವಿಶೇಷವಾಗಿ ಮಾದರಿ ಕಾರ್ಯ ಕ್ರಮ ಮಾಡುತ್ತಿದ್ದಾರೆ.

ಇಷ್ಟೇಲ್ಲದರ ನಡುವೆ ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈಗ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದು ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ನೀಡಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗಳಿಗೆ ತಮ್ಮ ಅನುದಾನದಲ್ಲಿ ಹಣವನ್ನು ಕೊಟ್ಟು ಕೈತೊಳೆ ದುಕೊಳ್ಳುವ ಬದಲಿಗೆ ಪರ್ಯಾಯವಾಗಿ ತಮ್ಮದೇಯಾದ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಬಣ್ಣವನ್ನು ನೀಡಿ ಕಳೆಗುಂದಿರುವ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ರೂಪ ವನ್ನು ನೀಡಲು ಮುಂದಾಗಿದ್ದಾರೆ.

ಇದರೊಂದಿಗೆ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಕೈ ಹಾಕಿ ಮಾದರಿಯಾಗುತ್ತಿದ್ದಾರೆ.ಕ್ಷೇತ್ರದಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣದರ್ಪಣೆ ಆರಂಭ ಹೌದು ಕೇಂದ್ರ ಸಚಿವ ಜೋಶಿ ಅವರು ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳ ಸ್ಥಿತಿಯನ್ನು ತಿಳಿದು ಕ್ಷಮತಾ ಸಂಸ್ಥೆಯಿಂದ  ಈ ಒಂದು ಹೊಸ ಅಭಿಯಾನ ಆರಂಭ ಮಾಡುತ್ತಿದ್ದಾರೆ.

ಸರ್ಕಾರಿ ವಿದ್ಯಾ ಮಂದಿರಗಳು ಕಳೆಗುಂದಬಾ ರದು ಆದರೆ ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳ ಗೋಡೆಗಳು ಕಳೆಗುಂದಿವೆ ಈ ನಿಟ್ಟಿನಲ್ಲಿ ತಮ್ಮ ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಬಣ್ಣ ವಿತರಿಸಲು ಪ್ರಲ್ಹಾದ್ ಜೋಶಿ ನಿರ್ಧರಿಸಿ ನಾಡಿದ್ದು ಈ ಒಂದು ಈ ಅಭಿಯಾನಕ್ಕೆ ಜಿಲ್ಲೆಯ ಕುಂದಗೋಳ ದಲ್ಲಿ ಚಾಲನೆ ನೀಡಲಿದ್ದು ಕೈಜೋಡಿಸುವಂತೆ, ಸ್ಥಳೀಯ ಸಂಘ ಸಂಸ್ಥೆಗಳಿಗೆ ಸಚಿವರು ಮನವಿ ಮಾಡಿದ್ದಾರೆ.

ಇನ್ನೂ ಈ ಒಂದು ಸಂಸ್ಥೆಯೊಂದಿಗೆ ಈಗಾಗಲೇ ಸಾಮಾಜಿಕವಾಗಿ ಹತ್ತು ಹಲವಾರು ಕಾರ್ಯಕ್ರಮ ಗಳೊಂದಿಗೆ ಸಂಗೀತ, ಕ್ರೀಡೆ, ಸಾರ್ವಜನಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಲ್ಹಾದ್ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆ ಇದೀಗ ಮಹತ್ವದ ಸಾಮಾಜಿಕ ಕಾರ್ಯ ಆರಂಭ ಮಾಡುತ್ತಿದೆ ವಿಶೇಷವಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಕಳೆ ತರಲು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮುಂದಾಗಿದ್ದಾರೆ.

ತಮ್ಮ ಕ್ಷಮತಾ ಸೇವಾ ಸಂಸ್ಥೆ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದ ರ್ಪಣೆ ಅಭಿಯಾನ ಆರಂಭಿಸಲಿದ್ದಾರೆ.ಸುಮಾರು ಒಂದು ವರ್ಷದವರೆಗೆ ಸರ್ಕಾರಿ ಶಾಲಾ ಕಾಲೇಜು ಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಹಮ್ಮಿಕೊಳ್ಳಲು ಪ್ಲಾನ್ ಮಾಡಲಾಗಿದ್ದು ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಲಾಗಿದೆ.ಧಾರವಾಡ ಲೋಕಸಭಾ ಕ್ಷೇತ್ರ ದಲ್ಲಿ ಒಟ್ಟು 1130 ಸರ್ಕಾರಿ ಶಾಲಾ ಕಾಲೇಜು ಗಳನ್ನ ಗುರುತಿಸಲಾಗಿದ್ದು ವರ್ಷದೊಳಗೆ ಎಲ್ಲಾ ಶಾಲಾ ಕಾಲೇಜುಗಳು ಹೊಸ ಬಣ್ಣದೊಂದಿಗೆ ಕಂಗೊಳಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂಬ ಮಾತನ್ನು ಕೇಂದ್ರ ಸಚಿವ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಹೇಳಿದರು.

ಇನ್ನೂ ಬಣ್ಣವನ್ನು ಕ್ಷಮತಾ ಸೇವಾ ಸಂಸ್ಥೆಯಿಂದ ಉಚಿತವಾಗಿ ಕೊಡಲಾಗುತ್ತೆ ಆದರೆ ಪೇಂಟಿಂಗ್ ಮಾಡಿಸುವ ಜವಾಬ್ದಾರಿಯನ್ನ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು ಎಂಬ ಸಂದೇಶದೊಂದಿಗೆ ಪ್ರಲ್ಹಾದ್ ಜೋಶಿ ಮನವಿ ಮಾಡಿದ್ದಾರೆ ಈ ನಿಟ್ಟಿ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಣ್ಣದ ರ್ಪಣ ಅಭಿಯಾನ ಆರಂಭಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಣ್ಣ ನಮ್ಮದು, ಶಾಲೆ ಮತ್ತು ಸಹಾಯ ನಿಮ್ಮದು, ಬನ್ನಿ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.

ನಟ ರಮೇಶ್ ಅರವಿಂದ ಕೂಡಾ ಈಗಾಗಲೇ ಪ್ರಹ್ಲಾದ್ ಜೋಶಿ ಅವರ ಬಣ್ಣದರ್ಪಣ ಅಭಿಯಾನ ಬೆಂಬಲಿಸಿದ್ದಾರೆ.ವಿಶೇಷವಾಗಿ ಶಾಲಾ ಕಾಲೇಜುಗಳ ಹಳೆಯ ವಿದ್ಯಾರ್ಥಿ ಸಂಘಗಳು ಮುಂದೆ ಬಂದು ಉಚಿತವಾಗಿ ಬಣ್ಣ ಪಡೆದು ತಮ್ಮ ಶಾಲೆ ಮತ್ತು ಕಾಲೇಜುಗಳಿಗೆ ಪೇಂಟ್ ಮಾಡಕೊಳ್ಳಬಹುದಾಗಿದೆ. ನೀವು ಕಲಿತ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚಲು ಕೈ ಜೋಡಿಸುವಂತೆ ಮನವಿ ಮಾಡಿರುವ ಪ್ರಲ್ಹಾದ್ ಜೋಶಿ, ಬಣ್ಣದರ್ಪಣ ಅಭಿಯಾನಕ್ಕೆ ಸಹ ಯೋಗ ನೀಡುವಂತೆ ವಿದ್ಯಾರ್ಥಿ ಸಂಘಟನೆಗಳಿಗೆ ಕರೆ ನೀಡಿದ್ದಾರೆ.

 

 

ಅಲ್ಲದೇ ಸ್ಥಳೀಯ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಬಹುದಾಹುದಾಗಿದೆ. ವಿಶೇಷವಾಗಿ ಗ್ರಾಪಂ ಸದಸ್ಯರು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ತಮ್ಮ ಸ್ಥಳೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ಬಣ್ಣ ಹೊಡೆಸುವ ಜವಾಬ್ದಾರಿ ಹೊರಬೇಕು. ಯಾರೇ ಮುಂದೆ ಬಂದರೂ, ಕ್ಷಮತಾ ಸೇವಾ ಸಂಸ್ಥೆ ಯಿಂದ ಉಚಿತವಾಗಿ ಬಣ್ಣ ನೀಡಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿಕೊಂಡಿ  ದ್ದಾರೆ.

ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಕ್ರಿಯ ವಾಗಿ ಕಾರ್ಯನಿರ್ವಹಿಸಿದ್ದ ಕ್ಷಮತಾ ಸೇವಾ ಸಂಸ್ಥೆ, ಲಕ್ಷಾಂತರ ಬಡವರಿಗೆ ದಿನಸಿ ಕಿಟ್ ಗಳನ್ನ ವಿತರಿಸಿ ನೆರವಾಗಿತ್ತು. ಆಕ್ಷಿಜನ್ ಕನ್ವರ್ಟರ್ ಗಳ ವಿತರಣೆ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು, ಉಚಿತವಾಗಿ ಮಾಸ್ಕ್ ಸ್ಯಾನಿ ಟೈಜರ್, ಪಲ್ಸ್ ಆಕ್ಷಿಮೀಟರ್ ವಿತರಣೆ ಸೇರಿ ದಂತೆ ಹಲವು ಸಾಮಾಜಿಕ ಕಾರ್ಯಗಳನ್ನ ಕೈಗೊಂಡಿತ್ತು. ಅತಿವೃಷ್ಟಿಯಿಂದಾಗಿ ಸಮಸ್ಯೆ ಗೀಡಾದ ಬಡ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳ ವಿತರಣೆ, ಸಹಸ್ರಾರು ಜನರಿಗೆ ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಕಣ್ಣಿನ ತಪಾಸಣೆ ನಡೆಸಿ, ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ರೀತಿಯ ಕಾರ್ಯಗಳನ್ನ ನೆರವೇರಿಸುತ್ತಾ ಬಂದಿದೆ

ಇದೀಗ ಸರ್ಕಾರಿ ಶಾಲೆಗಳನ್ನ ಕಲರ್ ಫುಲ್ ಮಾಡಲು ಕ್ಷಮತಾ ಸಂಸ್ಥೆ ಮಹತ್ವದ ಹೆಜ್ಜೆಯಿ ಟ್ಟಿದ್ದು ಇದರೊಂದಿಗೆ ಮಹಾನ್ ಕಾರ್ಯದೊಂ ದಿಗೆ ದೇಶದ ರಾಜಕಾರಣಿಗಳಿಗೆ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಪ್ರೇರಣೆಯಾ ಗಿದ್ದಾರೆ ಕೇಂದ್ರ ಸಚಿವರು ಇನ್ನೂ ಇಷ್ಟೇಲ್ಲಾ ಮಾಡುತ್ತಿರುವ ಇವರ ಕನಸಿನ ಈ ಒಂದು ಮಹತ್ವಾಕಾಂಕ್ಷಿ ಯೋಜನೆಗೆ ನೀವು ಕೂಡಾ ಕೈ ಜೋಡಿಸಬಹುದು ಅದು ಹಣದ ರೂಪದಲ್ಲಿ ಅಲ್ಲ ಶ್ರಮದಾನದ ಮೂಲಕ ಮತ್ತೆ ಯಾಕೇ ತಡ ಅಕ್ಟೋಬರ್ 29 ರಂದು ಆರಂಭಗೊಂಡ ನಂತರ ಕೇಂದ್ರ ಸಚಿವರ ಒಳ್ಳೆಯ ಕಾರ್ಯಕ್ಕೆ ಕೈ ಜೋಡಿಸಿ ಬನ್ನಿ ನಾವು ನೀವು ಸೇರಿಕೊಂಡ ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ರೂಪ ನಿಡೋಣಾ……

 

ಲೇಖನ – ಮಲ್ಲಿಕಾರ್ಜುನ ಪಾಟೀಲ್              ಅಪ್ತ ಕಾರ್ಯದರ್ಶಿಯವರು……


Google News

 

 

WhatsApp Group Join Now
Telegram Group Join Now
Suddi Sante Desk