This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಕನ್ನಡ ಚಿತ್ರರಂಗದ ಕಳ್ಳ ಕುಳ್ಳ ಹಿರಿಯ ನಟ ದ್ವಾರಕೀಶ್ ಇನ್ನೂ ನೆನಪು ಮಾತ್ರ – ಹಿರಿಯ ನಟನ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಜನತೆ ಅಭಿಮಾನಿಗಳು…..

WhatsApp Group Join Now
Telegram Group Join Now

ಬೆಂಗಳೂರು

ಕನ್ನಡ ಚಿತ್ರರಂಗದ ಕಳ್ಳ ಕುಳ್ಳ ಹಿರಿಯ ನಟ ದ್ವಾರಕೀಶ್ ಇನ್ನೂ ನೆನಪು ಮಾತ್ರ – ಹಿರಿಯ ನಟನ ನಿಧನಕ್ಕೆ ಕಂಬನಿ ಮಿಡಿದ ನಾಡಿನ ಜನತೆ ಅಭಿಮಾನಿಗಳು

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿದ್ದ ಹಿರಿಯ ನಟ ಅದರಲ್ಲೂ ವಿಶೇಷವಾಗಿ ಕಳ್ಳ ಕುಳ್ಳ ಖ್ಯಾತಿಯ ದ್ವಾರಕೀಶ್ ನಿಧನರಾಗಿದ್ದಾರೆ.ಹೌದು ಸ್ಯಾಂಡಲ್‌ವುಡ್‌ ಹಿರಿಯ ನಟ ದ್ವಾರಕೀಶ್‌ ನಿಧನರಾಗಿದ್ದಾರೆ.

ಹೃದಯಘಾತದಿಂದ ನಿಧನರಾಗಿದ್ದಾರೆಂದು ಕುಟುಂಬದ ಸದಸ್ಯರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.ಕರ್ನಾಟಕದ ಅಗ್ರಗಣ್ಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ದ್ವಾರಕೀಶ್ ಚಿತ್ರಾ 1969 ರಲ್ಲಿ ಪ್ರಾರಂಭವಾದಾಗಿ ನಿಂದ ಐದು ದಶಕಗಳಿಂದ ಚಲನಚಿತ್ರಗಳನ್ನು ನಿರ್ಮಿಸುತ್ತಿದೆ.ಬಂಗಳೆ ಶಾಮರಾವ್ ದ್ವಾರಕ ನಾಥ್ (ಅಕಾ ದ್ವಾರಕೀಶ್) ಸ್ಥಾಪಿಸಿದ್ದರು

ಈ ಕಂಪನಿಯು 50 ಕ್ಕೂ ಹೆಚ್ಚು ಚಲನ ಚಿತ್ರ ಗಳನ್ನು ನಿರ್ಮಿಸಿದೆ ನಿರ್ಮಾಣಗೊಂಡಿರುವ ಚಿತ್ರಗಳಲ್ಲಿ ಅನೇಕವು ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲುಗಳಾಗಿವೆ.ದ್ವಾರಕೀಶ್ ಚಿತ್ರಾವನ್ನು ಪ್ರಸ್ತುತ ಅವರ ಮಗ ಯೋಗೀಶ್ ದ್ವಾರಕೀಶ್ ಬಂಗಳೆ ನಿರ್ವಹಿಸುತ್ತಿದ್ದಾರೆ.1969 ರಲ್ಲಿ ಡಾ.ರಾಜ್ ಕುಮಾರ್ ಮತ್ತು ಭಾರತಿ ಅಭಿನ ಯದ ಹೆಗ್ಗುರುತು ಚಿತ್ರ ಮೇಯರ್ ಮುತ್ತಣ್ಣ ಮೂಲಕ ದ್ವಾರಕೀಶ್ ಚಿತ್ರ ಪ್ರಾರಂಭವಾಯಿತು.

ಇದರ ನಂತರ ಕುಳ್ಳ ಏಜೆಂಟ್ 000 ಮತ್ತು ಕೌಬಾಯ್ ಕುಳ್ಳ,ಭಾಗ್ಯವಂತರು,ಕಿಟ್ಟು ಪುಟ್ಟು, ಸಿಂಗಾಪುರ್ನಳ್ಳಿ ರಾಜ ಕುಲ್ಲಾ, ಪ್ರೀತಿ ಮಾಡು ತಮಾಷೆ ನೋಡು,ಗುರು ಶಿಷ್ಯರು,ಪೆದ್ದ ಗೆದ್ದ, ಪ್ರಚಂಡ ಕುಳ್ಳ,ನ್ಯಾಯ ಎಲಿದೆ,ಭಾರತ ರಾಮಾಯಣ,ರಾವಣ ರಾಜ್ಯ, ನೀ ಬರೇದ ಕದಂಬರಿ, ಡ್ಯಾನ್ಸ್ ರಾಜಾ ಡ್ಯಾನ್ಸ್, ಜೈ ಕರ್ನಾಟಕ,

ಶೃತಿ, ಆಪ್ತಮಿತ್ರ, ವಿಷ್ಣುವರ್ಧನ, ಚಾರುಲತಾ, ಚಾರುಲತಾ,ಚೌಕಾ,ಆರುಲತಾ,ಚೌಕಾ,ಚಾರುಲತಾ,ಚಾರುಲತಾ ಮುಂತಾದ ಚಿತ್ರಗಳು ತೆರೆ ಕಂಡಿದ್ದಾವೆ.ದ್ವಾರಕೀಶ್ 1942ರ ಆಗಸ್ಟ್ 19ರಂದು ಜನಿಸಿದರು.ಅವರು ಮೈಸೂರಿನ ಇಟ್ಟಿಗೆಗೂಡಿನಲ್ಲಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದಾರೆ.ಇದಲ್ಲದೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್ ಮತ್ತು ಬನುಮಯ್ಯ ಅವರ ಶಾಲೆಯಲ್ಲಿ ಪಡೆದರು ಮತ್ತು ಅವರು ಸಿಪಿಸಿ ಪಾಲಿಟೆಕ್ನಿಕ್ ನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದಿದ್ದಾರೆ.

ಇನ್ನೂ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ದ್ವಾರಕೀಶ್ ಮತ್ತು ಅವರ ಸಹೋದರ ಮೈಸೂರಿನ ಗಾಂಧಿ ಚೌಕದಲ್ಲಿ “ಭಾರತ್ ಆಟೋ ಸ್ಪೇರ್ಸ್” ಎಂಬ  ಬಿಡಿಭಾಗಗಳ ವ್ಯವಹಾರವನ್ನು ಪ್ರಾರಂಭಿಸಿದರು.

ಇದೇ ವೇಳೆ ಅವರು ನಟನೆಯತ್ತ ಬಲವಾಗಿ ಆಕರ್ಷಿತರಾದರು ಮತ್ತು ಆಗಾಗ್ಗೆ ತಮ್ಮ ಸೋದರಮಾವ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರನ್ನು ಚಲನ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಿದ್ದರಂತೆ ಮುಂದೆ ಇದೇ ಅವಕಾಶ ಅವರಿಗೆ ಚಲನಚಿತ್ರರಂಗದಲ್ಲಿ ಅವರನ್ನು ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು.

ಇನ್ನೂ ಇದೇ ವೇಳೆ 1963 ರಲ್ಲಿ ಅವರು ವ್ಯವಹಾರವನ್ನು ತೊರೆದು ಚಲನಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದ್ದರು ಇಷ್ಟೇಲ್ಲಾ ಸಾಧನೆ ಯನ್ನು ಮಾಡಿರುವ ಈ ಕುಳ್ಳ ಹಿರಿಯ ನಟ ಕನ್ನಡಿಗರ ಮನಸ್ಸಿನಲ್ಲಿ ತಮ್ಮ ಸಾಧನೆಯನ್ನು ನೆನಪಿನಲ್ಲಿಟ್ಟು ಅಗಲಿದ್ದಾರೆ.ಇನ್ನೂ ಇವರ ನಿಧನಕ್ಕೆ ನಾಡಿನ ಇವರ ಅಭಿಮಾನಿಗಳು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ಕಂಬನಿಯನ್ನು ಮಿಡಿದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……


Google News

 

 

WhatsApp Group Join Now
Telegram Group Join Now
Suddi Sante Desk