ಬೆಂಗಳೂರು –
ಈಗಾಗಲೇ ಈ ಹಿಂದೆ ನಾವೆ 6ನೇ ವೇತನ ಆಯೋಗ ವನ್ನು ರಾಜ್ಯದ ಸರ್ಕಾರಿ ನೌಕರರಿಗೆ ನೀಡಿದ್ದು ಸಧ್ಯ 7ನೇ ವೇತನ ಆಯೋಗವನ್ನು ಜಾರಿಗೆ ಮಾಡೆ ಮಾಡುತ್ತವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೇಳಿ ದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು
6ನೇ ವೇತನ ಆಯೋಗವನ್ನು ಅನುಷ್ಠಾನಕ್ಕೆ ತಂದಿದ್ದು ನಮ್ಮದೇ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಯಾರಿಗೂ ಸಹ ಮೋಸ ಮಾಡುವುದಿಲ್ಲ 7ನೇ ವೇತನ ಆಯೋಗದ ಶಿಫಾರಸುಗಳು ಖಂಡಿತಾ ಜಾರಿ ಯಾಗುತ್ತದೆ.ಈ ವರದಿ ಶಿಫಾರಸು ಜಾರಿಗೆ 18 ಸಾವಿರ ಕೋಟಿ ರೂ ಅಗತ್ಯವಿದೆ. ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯವಿಲ್ಲವೆಂದರು.
ಸಿದ್ದರಾಮಯ್ಯ ಸರಕಾರ ಯಾರಿಗೂ ಮೋಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ. 6ನೇ ವೇತನ ಆಯೋಗ ಜಾರಿಗೆ ತಂದಿದ್ದು ಸಹ ನಮ್ಮ ಸರಕಾರ. 7ನೇ ವೇತನ ಆಯೋಗ ಶಿಫಾರಸು ಜಾರಿಗೆ 18 ಸಾವಿರ ಕೋಟಿ ಹಾಗೂ ಒಪಿಎಸ್ ಜಾರಿಗೆ ನೂರಾರು ಕೋಟಿ ರೂ ಬೇಕು.
ಒಂದೇ ದಿನದಲ್ಲಿ ಎಲ್ಲವನ್ನೂ ಜಾರಿಗೆ ತರಲು ಸಾಧ್ಯ ವಿಲ್ಲ. ಅದಕ್ಕಾಗಿ ತಾಳ್ಮೆಯಿಂದ ಇರಿ ಎಂದು ಸರ್ಕಾರಿ ನೌಕರರಿಗೆ ಹೇಳಿದರು.ಆದರೆ ವರದಿ ಅನುಷ್ಠಾನಕ್ಕೆ ಸಧ್ಯ ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..