This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

State News

ಈವರೆಗೆ 7ನೇ ವೇತನ ಆಯೋಗದಲ್ಲಿ ಏನೇನು ಆಗಿದೆ ಮುಂದೇ ಏನೇನು ಆಗಬೇಕು ಗೊತ್ತಾ – 7ನೇ ವೇತನ ಆಯೋಗದ ಈವರೆಗಿನ ಕಂಪ್ಲೀಟ್ ಮಾಹಿತಿ…..


ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ನೇತ್ರತ್ವದಲ್ಲಿ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿದೆ.ಇನ್ನೂ ಸಮಿತಿ ಕೆಲಸ ಕಾರ್ಯ ವನ್ನು ಮಾಡಲು ಈಗಾಗಲೇ ಸಮಿತಿಗೆ ಕಚೇರಿ ಸೂಕ್ತವಾದ ಸೌಲಭ್ಯಗಳೊಂದಿಗೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕೂಡಾ ನೀಡಿ ಆದೇಶವನ್ನು ಮಾಡಿದ್ದು

ಇವೇಲ್ಲದರ ನಡುವೆ ಸಮಿತಿ ಕೂಡಾ ಕೆಲಸ ಕಾರ್ಯವನ್ನು ಆರಂಭ ಮಾಡಿದ್ದು ವರದಿ ನೀಡಲು ಸಮಿತಿಗೆ ರಾಜ್ಯ ಸರ್ಕಾರ 6 ತಿಂಗಳ ಗಡುವನ್ನು ನೀಡಿದ್ದು ಹೀಗಾಗಿ ಈಗಾಗಲೇ ಈ ಒಂದು ಸಮಿತಿಯನ್ನು ರಚನೆ ಮಾಡಿದೆ. ನವಂಬರ್ 19 ರಂದು ಈ ಒಂದು ವೇತನ ಆಯೋಗವನ್ನು ರಚನೆ ಮಾಡಿ ಆದೇಶವನ್ನು ಮಾಡಿದ್ದು ಸಮಿತಿ ರಚನೆಗೊಂಡು ಈಗಾಗಲೇ 2 ತಿಂಗಳು ಕಳೆದಿದ್ದು ಸಮಿತಿಯೂ ಕೂಡಾ ಈವರೆಗೆ ವರದಿ ಸಿದ್ದತೆಗೆ ಬೇಕಾದ ಎಲ್ಲಾ ಸಮಗ್ರವಾದ ಮಾಹಿತಿಯನ್ನು ಕಲೆಹಾಕಿಕೊಂ ಡಿದ್ದು ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ

ಪ್ರಮುಖವಾಗಿ ಮುಂದೆ ಬರುವ ಸಾಲು ಸಾಲು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವರದಿ ತಯಾರಿಕೆಗೆ ವೇಗವಾಗಿ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದೆ. ಇನ್ನೂ ರಾಜ್ಯ ಸರ್ಕಾರದ ಅವಧಿ ಮೇ ತಿಂಗಳಿಗೆ ಮುಗಿಯಲಿದ್ದು ಹೀಗಾಗಿ ಈ ಒಂದು ಸರ್ಕಾರದ ಅವಧಿ ಮುಗಿಯುವುದರ ಒಳಗಾಗಿ ಸಮಿತಿ 7ನೇ ವೇತನ ಆಯೋಗದ ವರದಿಯನ್ನು ನೀಡಿದರೆ ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಯಿ ಜಾರಿಗೆ ಮಾಡಿ ಘೋಷಣೆ ಮಾಡುತ್ತಾರೆ

ಒಂದು ವೇಳೆ ವರದಿಯನ್ನು ಸಮಿತಿ ನೀಡೊದು ವಿಳಂಬವಾದರೆ ಚುನಾವಣೆಯ ನಂತರ ರಾಜ್ಯ ದಲ್ಲಿ ಹೊಸದಾಗಿ ಬರುವ ಸರ್ಕಾರ ವರದಿಯನ್ನು ಜಾರಿಗೆ ತರಲಿದೆ ಒಟ್ಟಾರೆ ಏನೇ ಆಗಲಿ ಮುಂದೆ ಬರುವ ಸಾಲು ಸಾಲು ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಸಮಿತಿ ಶೀಘ್ರದಲ್ಲೇಮಧ್ಯಂತರ ವರದಿಯನ್ನು ನೀಡಲಿ ಸರ್ಕಾರ ಕೂಡಲೇ ಇದನ್ನು ಜಾರಿಗೆ ತರಲಿ ಎಂಬೊಂದು ನಮ್ಮ ಆಶಯವಾಗಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಇನ್ನೂ ಇವೇಲ್ಲದರ ನಡುವೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು 7ನೇ ವೇತನ ಆಯೋಗದ ವಿಚಾರ ಕುರಿತಂತೆ ಕೆಲವೊಂದಿಷ್ಟು ಮಾಹಿತಿಯನ್ನು ಸಲ್ಲಿಸುವ ನಿಟ್ಟಿನಲ್ಲಿ ಜನೆವರಿ 17 ರಂದು ನಾಳೆ ಬೆಂಗಳೂರಿನಲ್ಲಿ ಷಡಾಕ್ಷರಿ ಅವರು ಕಾರ್ಯಕಾರಣಿ ಸಭೆಯನ್ನು ಕರೆದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply