ಕಂಠಪೂರ್ತಿ ಕುಡಿದ್ರು ಮೂವರು – ರಸ್ತೆ ಮಧ್ಯೆದಲ್ಲಿಯೇ ಪರಸ್ಪರ ಬಡಿದಾಡಿಕೊಂಡ್ರು

Suddi Sante Desk

ವಿಜಯಪುರ –

ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಮೂವರು ಕುಡುಕರು ಪರಸ್ಪರ ಬಡಿದಾಡಿಕೊಂಡತಹ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ನಗರದ ಜಯಶ್ರೀ ಮಂದಿರದ ಬಳಿ ಈ ಒಂದು ಘಟನೆ ನಡೆದಿದೆ.ಮೊದಲು ಮೂವರು ಸೇರಿಕೊಂಡು ಸಖತ್ ಕಂಠಪೂರ್ತಿಯಾಗಿ ಕುಡಿದಿದ್ದಾರೆ. ನಂತರ ಪರಸ್ಪರ ಮೂವರು ಪುಟ್ ಪಾತ್ ಮೇಲೆ ಮೂವರು ಬಡಿದಾಡಿದ್ದಾರೆ.

ಮೂವರು ಕುಡುಕರಲ್ಲಿ ಓರ್ವ ಕಟ್ಟಿಗೆಯಿಂದ ಮತ್ತೊರ್ವ ವ್ಯಕ್ತಿಗೆ ಥಳಿಸಿದ್ದು ತೀವ್ರವಾಗಿ ಒರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಇನ್ನೂ ಈ ಕುಡುಕರ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಯಾವ ಕಾರಣಕ್ಕಾಗಿ ಮೂವರ ನಡುವೆ ಗಲಾಟೆ ನಡೆಯಿತು ಮತ್ತು ಈ ಕುಡುಕರು ಎಲ್ಲಿಯವರು ಎಂಬುವುದು ತಿಳಿದುಬಂದಿಲ್ಲ.. ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.