ಯಾದಗಿರಿ –
800 ರೂಪಾಯಿ ಲಂಚಕ್ಕೆ 10 ವರ್ಷ ಜೈಲು ಶಿಕ್ಷೆ – BEO ಕಚೇರಿಯ ಸಿಬ್ಬಂದಿಗೆ 10 ಲಕ್ಷ ರೂಪಾಯಿ,50 ಸಾವಿರ ರೂಪಾಯಿ ದಂಡದ ಶಿಕ್ಷೆ ನೀಡಿದ ನ್ಯಾಯಾಲಯ ಹೌದು 800 ರೂಪಾಯಿ ಲಂಚವನ್ನು ತಗೆದುಕೊಂಡಿದ್ದ ಸರ್ಕಾರಿ ನೌಕರ ರೊಬ್ಬರಿಗೆ 10 ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯವೊಂದು ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ಮಹತ್ವದ ತೀರ್ಪುನ್ನು ನೀಡಿದೆ.ಇನ್ನೂ 50,000 ರೂ ದಂಡವನ್ನು ಪಾವತಿಸಲು ವಿಫಲವಾದಲ್ಲಿ 2 ವರ್ಷ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸುರಪುರ ಬಿಇಒ ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ವಿಲ್ಸನ್ ವಿಜಯ ಕುಮಾರ ಶಿಕ್ಷೆಗೊಳ ಗಾದ ಆರೋಪಿಯಾಗಿದ್ದಾರೆ
ಸುರಪುರ ತಾಲೂಕಿನ ಮಾಚಗೊಂಡಾಳ ಗ್ರಾಮದ ಶಿಕ್ಷಕ ಆದಪ್ಪ ನಾಯಕ ಎಂಬುವರಿಂದ ಜಿಪಿಎಫ್ ಹಣ ಮಂಜೂರಿಗಾಗಿ ಬಿಇಒ ಕಚೇರಿ ಯಲ್ಲಿ 800 ರೂ ಲಂಚ ಸ್ವೀಕರಿಸುತ್ತಿದ್ದಾಗ ವಿಲ್ಸನ್ ವಿಜಯಕುಮಾರ್ 2006ರ ನವೆಂಬರ್ 18ರಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.ಲೋಕಾಯುಕ್ತ ಇನ್ಸ್ಪೆಕರ್ ಬಿ.ಎಚ್. ಚಂದ್ರಕಾಂತ ಪ್ರಕರಣದ ತನಿಖೆ ನಡೆಸಿ ನ್ಯಾಯಾ ಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಸಂಜೀವ ಕುಮಾರ್ ಹಂಚಾಟೆ, ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.ವಿಶೇಷ ಸರಕಾರಿ ಅಭಿಯೋಜಕ ಸಿದ್ದಲಿಂಗಪ್ಪ ಬೋರಡ್ಡಿ ವಾದ ಮಂಡಿಸಿದ್ದು ಸಧ್ಯ ಈ ಒಂದು ಮಹತ್ವದ ತೀರ್ಪನ್ನು ನ್ಯಾಯಾಲಯ ನೀಡಿದ್ದು ಇದೊಂದು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ…..